ನೆಹರೂ ಪ್ರೌಢಶಾಲೆಗೆ ತಟ್ಟಿದ ಐಎಂಎ ಹಗರಣ ಎಫೆಕ್ಟ್: ಶಾಲೆಗೆ ಬೀಗ, ಮಕ್ಕಳ ಭವಿಷ್ಯಕ್ಕಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಪೋಷಕರು
ಐಎಂಎ ಸಂಸ್ಥೆ ನೆಹರೂ ಶಾಲೆಯನ್ನ ದತ್ತು ಪಡೆದು ಅದನ್ನು ನಡೆಸುತ್ತಿತ್ತು. ಆದ್ರೆ ಐಎಂಎ ಪ್ರಕರಣ ಸಂಬಂಧ ಅಧಿಕಾರಿಗಳು ಈಗ ಶಾಲೆಯನ್ನ ಸೀಜ್ ಅಂತಾ ನೋಟಿಸ್ ಹಾಕಿದ್ದಾರೆ.
ಬೆಂಗಳೂರು: ಐಎಂಎ ಹಗರಣದ(IMA Fraud) ಎಫೆಕ್ಟ್ ಈಗ ಶಿವಾಜಿನಗರ ಭಾರತಿನಗರ ವಾರ್ಡ್ ನಲ್ಲಿರುವ ನೆಹರೂ ಪ್ರೌಢಶಾಲೆಗೆ ತಟ್ಟಿದೆ. ಅಧಿಕಾರಿಗಳು ಶಾಲೆಗೆ ನೋಟಿಸ್ ನೀಡಿದ್ದಾರೆ. ಆರ್ಥಿಕ ಅಪರಾಧ ಪ್ರಕರಣದಲ್ಲಿ ಶಾಲೆಗೆ ನೋಟಿಸ್ ನೀಡಿದೆ. ಇದರಿಂದ ಮಕ್ಕಳ ಓದಿಗೆ ತೊಂದರೆ ಆಗಿದ್ದು ವಿದ್ಯಾರ್ಥಿಗಳು ಮತ್ತು ಪೋಷಕರು ಪ್ರತಿಭಟನೆ ನಡೆಸುತ್ತಿದ್ದಾರೆ.
ಐಎಂಎ ಸಂಸ್ಥೆ ನೆಹರೂ ಶಾಲೆಯನ್ನ ದತ್ತು ಪಡೆದು ಅದನ್ನು ನಡೆಸುತ್ತಿತ್ತು. ಆದ್ರೆ ಐಎಂಎ ಪ್ರಕರಣ ಸಂಬಂಧ ಅಧಿಕಾರಿಗಳು ಈಗ ಶಾಲೆಯನ್ನ ಸೀಜ್ ಅಂತಾ ನೋಟಿಸ್ ಹಾಕಿದ್ದಾರೆ. ಇದರಿಂದ ಶಾಲೆ ಮಕ್ಕಳಿಗೆ ಓದಿನಲ್ಲಿ ಸಮಸ್ಯೆ ಎದುರಾಗಿದೆ. ಶಾಲೆಯಲ್ಲಿ 450ಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ಆದ್ರೆ ಈಗ ಏಕಾಏಕಿ ಶಾಲೆಗೆ ಬೀಗ ಹಾಕಿದ್ದಾರೆ. ಇದನ್ನು ಖಂಡಿಸಿ ನೂರಾರು ಶಾಲಾ ಮಕ್ಕಳು ಹಾಗೂ ಪೋಷಕರು ಪ್ರತಿಭಟನೆಗೆ ಇಳಿದಿದ್ದಾರೆ. ನಮ್ಮ ಮಕ್ಕಳಿಗೆ ಪರ್ಯಾಯ ವ್ಯವಸ್ಥೆ ಮಾಡಿ. ಪಕ್ಕದ ಸರ್ಕಾರಿ ಶಾಲೆಗೆ ಆದ್ರೂ ದಾಖಲಾತಿ ಮಾಡಿಸಿ ಸಾಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಈಗ ಏಕಾಏಕಿ ಶಾಲೆ ಬಂದ್ ಮಾಡಿದ್ರೆ ನಮ್ಮ ಮಕ್ಕಳ ಶಿಕ್ಷಣ ಸ್ಥಿತಿ ಏನು? ಪರ್ಯಾಯ ವ್ಯವಸ್ಥೆ ಮಾಡಿ ಶಾಲೆ ಸೀಜ್ ಮಾಡಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಇದನ್ನೂ ಓದಿ: Mysore Dasara: ರಾಷ್ಟ್ರಪತಿ ಜೊತೆ ಸಚಿವ ಸೋಮಶೇಖರ್ ವೇದಿಕೆ ಹಂಚಿಕೊಳ್ಳದಂತೆ ಎಎಪಿ ಆಗ್ರಹ
ನೆಹರು ಪ್ರೌಢಶಾಲೆಗೆ ಶಾಸಕ ರಿಜ್ವಾನ್ ಅರ್ಷದ್ ಭೇಟಿ
ಇನ್ನು ನೆಹರು ಪ್ರೌಢಶಾಲೆಗೆ ಶಾಸಕ ರಿಜ್ವಾನ್ ಅರ್ಷದ್ ಭೇಟಿ ನೀಡಿ ಪೋಷಕರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಶಾಲೆಗೆ ನೋಟಿಸ್ ವಿಚಾರದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ನಾನು ಶಿಕ್ಷಣ ಇಲಾಖೆಯ ಜೊತೆ ಮಾತನಾಡಿದ್ದೇನೆ. ಮಕ್ಕಳ ಒಂದು ದಿನದ ಶಿಕ್ಷಣ ಕೂಡಾ ನಷ್ಟ ವಾಗೋದಿಲ್ಲ. ನಾನು ಎಲ್ಲವನ್ನು ಸರಿ ಮಾಡ್ತೀನಿ. ಎಷ್ಟೇ ಮಕ್ಕಳಿದ್ರೂ ಪರ್ಯಾಯ ವ್ಯವಸ್ಥೆ ಮಾಡ್ತೀನಿ. ಇದೇ ಶಾಲೆಯಲ್ಲಿ ಮಕ್ಕಳು ಓದುವುದು ಕಷ್ಟ ಇದೆ. ಈ ಹಿಂದೆ ಐಎಂಎ ಕೇಸ್ ನಲ್ಲಿ ಶಾಲೆ ಸೀಜ್ ಮಾಡಿದಾಗಲೂ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಪೋಷಕರು ಭಯ ಬೀಳುವುದು ಬೇಡ. ನಾವು ಪರ್ಯಾಯ ಶಿಕ್ಷಣಕ್ಕೆ ವ್ಯವಸ್ಥೆ ಮಾಡ್ತೀವಿ ಎಂದು ಭರವಸೆ ನೀಡಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:14 pm, Sat, 24 September 22