ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು

ಓರ್ವ ವ್ಯಕ್ತಿ ಮೇಲೆ ಪುಂಡರ ಗ್ಯಾಂಗ್​​ವೊಂದು ಹಲ್ಲೆ ಮಾಡಿ ಬಳಿಕ ಕಿಡ್ನ್ಯಾಪ್​​ಗೆ ಯತ್ನಿಸಿರುವಂತಹ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್​ನಲ್ಲಿ ನಡೆದಿದೆ. ಎರಡು ದಿನಗಳ ಹಿಂದೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನಟ ಎಂದುಕೊಂಡು ಬೇರೆಯಾರನ್ನೊ ಖದೀಮರು ಕಿಡ್ನ್ಯಾಪ್ ಮಾಡಿ, ಹಲ್ಲೆ ಮಾಡಿ ಬಿಟ್ಟುಕಳುಹಿಸಿದ್ದಾರೆ.

ನಟ ಎಂದುಕೊಂಡು ಇನ್ಯಾರನ್ನೋ ಕಿಡ್ನ್ಯಾಪ್​​: ಹಲ್ಲೆ ಮಾಡಿ ಬೆದರಿಕೆ ಹಾಕಿ ಬಿಟ್ಟುಕಳಿಸಿದ ಖದೀಮರು
ಖದೀಮರ ಗ್ಯಾಂಗ್​​ನಿಂದ ಕಿಡ್ನ್ಯಾಪ್​​ಗೆ ಯತ್ನ
Edited By:

Updated on: Mar 28, 2026 | 4:21 PM

ಬೆಂಗಳೂರು, ಮಾರ್ಚ್​ 28: ವ್ಯಕ್ತಿ ಓರ್ವ ತನ್ನ ಪಾಡಿಗೆ ತಾನು ಚಹಾ ಕುಡಿಯುತ್ತಾ ಅಂಗಡಿಯೊಂದರ ಬಳಿ ನಿಂತಿದ್ದ. ಇದೇ ವೇಳೆ ಆಗಮಿಸಿದ ಮೂವರು ಕಿಡಿಗೇಡಿಗಳು ಆತನ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನೋಡ ನೋಡುತ್ತಿದ್ದಂತೆ ವ್ಯಕ್ತಿಯನ್ನ ಆಟೋದಲ್ಲಿ ಹತ್ತಿಸಿಕೊಂಡಿದ್ದಾರೆ (Kidnape). ಸ್ವಲ್ಪ ಹೊತ್ತಲ್ಲೇ ಆಟೋದಿಂದ ಇಳಿಸಿ ಬೆದರಿಕೆ ಹಾಕಿ ಬಿಟ್ಟುಕಳುಹಿಸಿದ್ದಾರೆ. ಅಷ್ಟಕ್ಕೂ ಈ ವಿಚಿತ್ರ ಘಟನೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್​​ನಲ್ಲಿ ಎರಡು ದಿನದ ಹಿಂದೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.​​

ನಡೆದಿದ್ದೇನು?

ಶರತ್​​ ಕಿಡ್ನ್ಯಾಪ್​ ಆಗಿದ್ದ ವ್ಯಕ್ತಿ. ಬೆಂಗಳೂರಿನ ಹೆಗ್ಗನಹಳ್ಳಿ ನಿವಾಸಿ. ಮೂರು ದಿನದ ಹಿಂದೆ ಬ್ಯಾಡರಹಳ್ಳಿಯ ನಾಗರಹೊಳೆ ಸರ್ಕಲ್‌ ಬಳಿ ತನ್ನ ಸ್ನೇಹಿತನ ಜೊತೆಗೆ ಚಹಾ ಕುಡಿಯುತ್ತಾ ನಿಂತಿದ್ದರು. ಈ ವೇಳೆ ಆಟೋದಲ್ಲಿ ಬಂದ ಮೂವರ ಗ್ಯಾಂಗ್​​ ನೀನು ಹೀರೋನಾ ಎಂದು ವಿಚಾರಿಸಿದ್ದಾರೆ. ನಾನು ಅವನಲ್ಲ ಅಂತ ಶರತ್​​ ಹೇಳಿದ್ದರು, ಸುಳ್ಳು ಹೇಳುತ್ತೀಯಾ ಎಂದು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ.

ನಟನಲ್ಲ ಎಂದಾಗ ಬಿಟ್ಟುಕಳುಹಿಸಿದ ಖದೀಮರು

ಒಬ್ಬಾತ ತನ್ನ ಕೈನಲ್ಲಿದ್ದ ಡ್ಯಾಗರ್​ನಿಂದ ಶರತ್ ಮುಖಕ್ಕೆ ಹೊಡೆದಿದ್ದಾನೆ. ನೋಡನೋಡುತ್ತಿದ್ದಂತೆ ಶರತ್ ನನ್ನ ಆಟೋದಲ್ಲಿ ನೂಕಿ ಸ್ವಲ್ಪ ದೂರ ಕರ್ಕೊಂಡು ಹೋಗಿದ್ದರು. ದಾರಿಯಲ್ಲಿ ಶರತ್ ಅಕ್ಕನಿಗೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ಶರತ್ ಫೋನ್​ ಪರಿಶೀಲಿಸಿ ಇವನು ನಟ ಅಲ್ಲ ಅಂತ ಬಿಟ್ಟು ಕಳಿಸಿದ್ದಾರೆ.

ಇದನ್ನೂ ಓದಿ: ತನ್ನ ಕಾಮದಾಟಕ್ಕೆ ಅಡ್ಡಿಯಾಗುತ್ತಿದ್ದ ಪತಿಯನ್ನೇ ಸುಪಾರಿ ನೀಡಿ ಕೊಲೆ ಮಾಡಿಸಿದ ಪತ್ನಿ!

ಯಾರು, ಯಾಕೆ, ಏನಾಗುತ್ತಿದೆ ಅಂತ ಗೊತ್ತಾಗದೇ ಶರತ್ ದಿಗ್ಬಾಂತರಾಗಿದ್ದಾರೆ. ಕೆಲ ಹೊತ್ತು ಸುಧಾರಿಸಿಕೊಂಡು ಬ್ಯಾಡರಹಳ್ಳಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ಪುಂಡರ್​​ ಗ್ಯಾಂಗ್​​​ ಪತ್ತೆಗೆ ಬಲೆಬೀಸಿದ್ದಾರೆ.

ಪ್ರೀತಿಸಿದವಳನ್ನ ಕಿಡ್ನ್ಯಾಪ್​ ಮಾಡಿ ಅತ್ತೆಗೆ ಚಾಕು ಹಾಕಿದ್ದ ವ್ಯಕ್ತಿ ಸೇರಿ ನಾಲ್ವರ ಬಂಧನ

ಕೌಟುಂಬಿಕ ವಿಚಾರಕ್ಕೆ ಅತ್ತೆಗೆ ಚಾಕು ಹಾಕಿದ್ಧ ವ್ಯಕ್ತಿ ಸೇರಿದಂತೆ ನಾಲ್ವರನ್ನು ಆಡುಗೋಡಿ ಪೊಲೀಸರು ಬಂಧಿಸಿದ್ದಾರೆ. ಮನಿಕಿರಣ್, ಅಭಿಷೇಕ್, ಮನಿರಾಜ್ ಮತ್ತು ಮನಿವಣ್ಣನ್ ಬಂಧಿತರು. ಮಾ.25ರಂದು ಮಾಗೇಶ್ವರಿ ಎಂಬುವರ ಮನೆಯಲ್ಲಿ ಘಟನೆ ನಡೆದಿತ್ತು.

ಇದನ್ನೂ ಓದಿ: ಸಕಲೇಶಪುರದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಫೋಟೋಗ್ರಾಫರ್‌ಗಳ ಮೇಲೆ ಹಲ್ಲೆ: ಕೈಮುಗಿದರೂ ಬಿಡದ ಕಿಡಿಗೇಡಿಗಳು

ಕಿರಣ್​ಗೆ ಮದುವೆಯಾಗಿದ್ದರೂ ಮಾಗೇಶ್ವರಿ ಮೊಮ್ಮಗಳಾದ ಚಾರುಲತಾಳನ್ನ ಕರೆದುಕೊಂಡು ಹೋಗಿದ್ದ. ಕೆಲ ದಿನಗಳ ಹಿಂದೆ ಕಿರಣ್ ಬಿಟ್ಟು ಬಂದಿದ್ದ ಚಾರುಲತಾ ಅಜ್ಜಿ ಜೊತೆ ಇದ್ದಳು. ಮಾ.25ರಂದು ಚಾರುಲತಾ ಹುಡುಕಿ ಬಂದಿದ್ದ ಕಿರಣ್ ಮತ್ತು ಫ್ಯಾಮಿಲಿ ಬಲವಂತವಾಗಿ ಆಕೆಯನ್ನ ಕಿಡ್ನ್ಯಾಪ್​ ಮಾಡಿ ಕರೆದುಕೊಂಡು ಹೋಗಿದ್ದರು. ತಡೆಯಲು ಬಂದ ವೃದ್ಧೆ ಮಾಗೇಶ್ವರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದರು. ಸದ್ಯ ನಾಲ್ವರನ್ನು ಬಂಧಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us