ಪೀಣ್ಯ ಫ್ಲೈಓವರ್​ಗೆ ಕೇಬಲ್‌ಗಳ ಅಳವಡಿಕೆ; ಶೀಘ್ರವೇ ಭಾರೀ ವಾಹನ ಸಂಚಾರಕ್ಕೆ ಅವಕಾಶ

ಪೀಣ್ಯ ಫ್ಲೈಓವರ್ ಮೇಲೆ ಭಾರಿ ವಾಹನಗಳಿಗೆ ಅವಕಾಶ ನೀಡಿ ಎರಡು ವರ್ಷಗಳೇ ಕಳೆದಿದೆ.‌ ಆದರೆ ಕೆಲ ತಿಂಗಳಿಂದ ಭಾರೀ ವಾಹನಗಳ ಸಂಚಾರ ನಿಲ್ಲಿಸಲಾಗಿತ್ತು. ಇದೀಗಾ ಫ್ಲೈಓವರ್​ಗೆ ಕೇಬಲ್ ಅಳವಡಿಕೆಯ ಕೆಲಸ ಮುಗಿದಿದ್ದು, ಹೊಸ ವರ್ಷದಿಂದ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಡುವ ಸಾಧ್ಯತೆ ಇದ್ಯಂತೆ.‌

ಪೀಣ್ಯ ಫ್ಲೈಓವರ್​ಗೆ ಕೇಬಲ್‌ಗಳ ಅಳವಡಿಕೆ; ಶೀಘ್ರವೇ ಭಾರೀ ವಾಹನ ಸಂಚಾರಕ್ಕೆ ಅವಕಾಶ
ಪೀಣ್ಯ ಫ್ಲೈಓವರ್
Follow us
Poornima Agali Nagaraj
| Updated By: ಆಯೇಷಾ ಬಾನು

Updated on: Oct 08, 2023 | 10:24 AM

ಬೆಂಗಳೂರು, ಅ.08: ನಗರದ ಪೀಣ್ಯ ಫ್ಲೈ ಓವರ್ (Peenya Flyover) 18 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ. ಈ ಮೇಲ್ಸೇತುವೆಯಲ್ಲಿ ಕಾಣಿಸಿಕೊಂಡ ದೋಷದಿಂದ ಅದೆಷ್ಟೋ ದಿನಗಳಿಂದ ಭಾರೀ ವಾಹನಗಳ ಸಂಚಾರ ಸ್ತಬ್ದವಾಗಿಬಿಟ್ಟಿತ್ತು. ಆಲ್ಲದೇ ಫ್ಲೇ ಓವರ್‌ ಸಮಸ್ಯೆಯಿಂದ ಟ್ರಾಫಿಕ್‌ ಕಿರಿಕಿರಿ ಕೂಡ ಜನರನ್ನ ಬಾಧಿಸಿತ್ತು. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಿಂದ ಮೇಲ್ಸೇತುವೆ ಸದೃಢತೆಗೆ ಕೇಬಲ್‌ಗಳ ಅಳವಡಿಕೆಗೆ ಐಐಎಸ್​ಸಿ (IISC) ತಜ್ಞರು ಸೂಚಿಸಿದ್ರು.‌ ಆದರ ಮೇರಿಗೆ ಮಧ್ಯಪ್ರದೇಶದ ಭೂಪಾಲ್‌ನಿಂದ 25 ಟನ್‌ ಕೇಬಲ್‌ ತರಿಸಿ ಕೆಮಿಕಲ್‌ ಅನಾಲಿಸಿಸ್‌ ಮಾಡಿ ಸಧ್ಯ 120 ಕಂಬಗಳಿಗೆ ಅರ್ಧದಷ್ಡು ಕೇಬಲ್‌ ಅಳವಡಿಕೆ ಮಾಡಲಾಗಿದೆ.

ಹೌದು, ಪೀಣ್ಯ ಫ್ಲೈಓವರ್ ನಲ್ಲಿ ಸಧ್ಯದಲ್ಲೆ ಲಾರಿಗಳ ಓಡಾಟಕ್ಕೆ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆ ಇದೆ. ಸಧ್ಯ ಫ್ಲೈಓವರ್​ನ ಎಲ್ಲಾ ಪಿಲ್ಲರ್​ಗಳಿಗೆ ಈಗಾಗಲೇ 240 ಕೇಬಲ್​ಗಳನ್ನ ಅಳವಡಿಕೆ ಮಾಡುತ್ತಿದ್ದು, ಎರಡು ವರ್ಷಗಳಿಂದ ಪರದಾಡುತ್ತಿದ್ದ ವಾಹನ ಸವಾರರಿಗೆ ಇನ್ಮುಂದೆ ಚಾಲನೆ ಸರಾಗವಾಗಲಿದೆ‌‌. ಸಧ್ಯ ಪಿಲ್ಲರ್ ಅಳವಡಿಕೆಯ ಕೆಲಸ ಅರ್ಧದಷ್ಡು ಮುಗಿದಿದ್ದು, ಐಐಎಸ್​ಸಿ ತಜ್ಞರ ಮಾಹಿತಿಯ ಆಧಾರದ ಮೇರಿಗೆ ಕೇಬಲ್ ಅಳವಡಿಸುತ್ತಿದ್ದು, ಒಟ್ಟು 120 ಪಿಲ್ಲರ್​ಗಳಿಗೆ ಒಟ್ಟು 1200 ಕೇಬಲ್​ಗಳನ್ನ ಅಳವಡಿಕೆ ಮಾಡಲಿದೆ. ಮೊದಲ ಹಂತದಲ್ಲಿ ಒಂದೊಂದು ಪಿಲ್ಲರ್​ಗೆ ಎರೆಡೆರೆಡು ಅಳವಡಿಕೆ ಮಾಡಿ ನಂತರ 8 ಕೇಬಲ್​ಗಳನ್ನ ನಿಧಾನವಾಗಿ ಅಳವಡಿಕೆ ಮಾಡಲು ನಿರ್ಧರಿಸಿದ್ದು, ಮೊದಲ ಹಂತದ ಕೇಬಲ್ ಅಳವಡಿಕೆಯ ನಂತರ ಲಾರಿಗಳ ಓಡಾಟಕ್ಕೆ ಅವಕಾಶ ನೀಡಲಿದ್ದೇವೆ ಅಂತ ಐಐಎಸ್​ಸಿ ತಜ್ಞರು ಹೇಳ್ತಿದ್ದಾರೆ.

ಇದನ್ನೂ ಓದಿ: ರೈಲ್ವೇ ಪ್ರಯಾಣಿಕರ ಗಮನಕ್ಕೆ, ಅ.11 ರಂದು ಬೆಂಗಳೂರಿನಿಂದ MEMU ರೈಲುಗಳ ಸಂಚಾರ ರದ್ದು

ಇನ್ನು, ಈ ಫ್ಲೈ ಓವರ್​ನಲ್ಲಿ ಸದ್ಯ ಬೆಳಗ್ಗೆ 5 ಗಂಟೆಯಿಂದ ರಾತ್ರಿ 12 ಗಂಟೆವರೆಗೂ ಲಘುವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಕೇಬಲ್‌ ಬದಲಾವಣೆ ಅಳವಡಿಕೆಯಾಗಿ ಎಲ್ಲಾ ಕೆಲಸಗಳು ಅಂದುಕೊಂಡ ಸಮಯದೊಳಗೆ ಮುಗಿದ್ರೆ ಇನ್ನೂ ಎರಡು ತಿಂಗಳಲ್ಲಿ ಭಾರೀ ವಾಹನಗಳ ಸಂಚಾರಕ್ಕೂ ಅವಕಾಶ ಸಿಗಲಿದೆ. ಸಧ್ಯ ಟ್ರಾಫಿಕ್‌ ಕಿರಿಕಿರಿ, ವಾಹನ ದಟ್ಟಣೆಯಿಂದ ಸುಸ್ತಾಗಿರುವ ಈ ಮಾರ್ಗದ ವಾಹನ ಸವಾರರು, ಫ್ಲೈಓವರ್‌ ಯಾವಾಗ ಸರಿಯಾಗುತ್ತೆ ಅಂತಾ ಕಾಯುತ್ತಿದ್ದಾರೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ