ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ, ಚಿಕಿತ್ಸೆ ಫಲಿಸದೆ ಗಾಯಾಳು ವಿದ್ಯಾರ್ಥಿ ಸಾವು

ಸಂಬಂಧಿಕ ಮಗಳನ್ನೇ ಪ್ರೀತಿಸಿದ್ದಕ್ಕೆ ಕಾಲೇಜು ವಿದ್ಯಾರ್ಥಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದ್ದ ಘಟನೆ ರಾಮನಗರದಲ್ಲಿ ನಡೆದಿತ್ತು. ಪ್ರಕರಣ ಸಂಬಂಧ ಭಾಗಶಃ ಸುಟ್ಟಿದ್ದ ಗಾಯಾಳು ವಿದ್ಯಾರ್ಥಿ, ಇಂದು ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.

ಬೆಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಪ್ರಕರಣ, ಚಿಕಿತ್ಸೆ ಫಲಿಸದೆ ಗಾಯಾಳು ವಿದ್ಯಾರ್ಥಿ ಸಾವು
ಬೆಂಕಿಯಿಂದ ಭಾಗಶಃ ಸುಟ್ಟು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಲೇಜು ವಿದ್ಯಾರ್ಥಿ ಶಶಾಂಕ್ ಸಾವು
Follow us
Jagadisha B
| Updated By: Rakesh Nayak Manchi

Updated on: Jul 18, 2023 | 8:13 PM

ಬೆಂಗಳೂರು, ಜುಲೈ 18: ಮತ್ತೊಬ್ಬ ಸಂಬಂಧಿಯೊಂದಿಗೆ ಸಂಬಂಧ ಹೊಂದಿದ್ದಕ್ಕೆ ಚಿಕ್ಕಪ್ಪನೇ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದ ಯುವಕ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ (Bengaluru) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಆರ್.ಆರ್.ನಗರದ ನಿವಾಸಿ ಶಶಾಂಕ್ ಸಾವನ್ನಪ್ಪಿದ ಕಾಲೇಜು ವಿದ್ಯಾರ್ಥಿ.

ಶಶಾಂಕ್ ದೇಹದ ಶೇಕಡಾ 80 ರಷ್ಟು ಭಾಗ ಸುಟ್ಟು ಹೋಗಿತ್ತು. ಶನಿವಾರದಿಂದ (ಜುಲೈ 15) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಶಾಂಕ ಸುದೀರ್ಘ ಹೋರಾಟದ ನಂತರ ಇಂದು ಮುಂಜಾನೆ ಸಾವನ್ನಪ್ಪಿದ್ದಾನೆ. ಶನಿವಾರ ಆರ್.ಆರ್.ನಗರದ ಕಾಲೇಜಿನಿಂದ ವಾಪಸಾಗುತ್ತಿದ್ದ ಶಶಾಂಕನನ್ನು ಮನು ಮತ್ತು ಇತರರು ಅಪಹರಿಸಿ ರಾಮನಗರದ ಖಾಲಿ ಪ್ರದೇಶಕ್ಕೆ ಕರೆದೊಯ್ದು ಇಂಧನ ಸುರಿದು ಬೆಂಕಿ ಹಚ್ಚಿದ್ದರು. ಹತ್ಯೆಗೂ ಮುನ್ನ ಆತನ ಮೇಲೆ ಹಲ್ಲೆ ನಡೆಸಲಾಗಿತ್ತು ಎನ್ನಲಾಗಿದೆ. ಮನು ಸಂಬಂಧಿ ಹುಡುಗಿಯನ್ನು ಶಶಾಂಕ್ ಪ್ರೀತಿಸಿದ್ದಕ್ಕೆ ಈ ಕೃತ್ಯ ಎಸಗಲಾಗಿತ್ತು.

ಇದನ್ನೂ ಓದಿ: ಬೋರ್‌ವೆಲ್‌ನಿಂದ ನೀರು ಅಲ್ಲ; ಗ್ಯಾಸ್​​ ಬರುತ್ತಿದೆ, ಬೆಂಕಿ ಹೊತ್ತಿಕೊಂಡು ಧಗಧಗಿಸುತ್ತಿದೆ! ಸ್ಥಳೀಯರಿಗೆ ಆತಂಕ

ಹೌದು, ರಂಗನಾಥ್ ಮತ್ತು ಸತ್ಯಪ್ರೇಮ ದಂಪತಿಯ ಮಗ ಶಶಾಂಕ್, ತನ್ನ ಸಂಬಂಧಿಕರ ಯುವತಿಯನ್ನು ಪ್ರೀತಿಸುತಿದ್ದ. ಇಬ್ಬರ ಪ್ರೀತಿಗೆ ಯುವತಿಯ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆ ಕಳೆದ ಜುಲೈ 3 ರಂದು ಮೈಸೂರಿನಿಂದ ಬೆಂಗಳೂರಿಗೆ ಬಂದಿದ್ದ ಯುವತಿಯ‌ನ್ನು‌ ಮನೆಗೆ ಕರೆದೊಯ್ದಿದ್ದ. ಈ ವೇಳೆ ಯುವತಿಯ ಪೋಷಕರು ಮನು ಮನೆಗೆ ನುಗ್ಗಿ ಹಲ್ಲೆ ನಡೆಸಿ ಯುವತಿಯನ್ನು ಕರೆದೊಯ್ದುದಿದ್ದರು.

ಘಟನೆ ನಂತರ ಎಂದಿನಂತೆ ಶಶಾಂಕ್ ಕಾಲೇಜ್​ಗೆ ಹೋಗಿದ್ದನು. ಆದರೆ ಮಧ್ಯಾಹ್ನ ಮನೆಗೆ ವಾಪಸ್ ಆಗಲು ಬಸ್​ಗಾಗಿ ಕಾಯುತ್ತಿದ್ದಾಗ ಮನು ಮತ್ತು ಇತರರು ಶಶಾಂಕ್​ನನ್ನು ಅಪಹರಣ ಮಾಡಿ 50 ಕಿಲೋಮೀಟರ್ ದೂರದಲ್ಲಿರುವ ರಾಮನಗರ ಜಿಲ್ಲೆಗೆ ಕೊಂಡೊಯ್ದು ಕೈ ಕಾಲು ಕಟ್ಟಿಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ ಸ್ಥಳದಿಂದ ಪರಾರಿಯಾಗಿದ್ದರು.

ಆದರೆ, ಜೀವ ಉಳಿಸಿಕೊಳ್ಳಲು ಶಶಾಂಕ್ ಮಣ್ಣಿನಲ್ಲಿ ಹೊರಳಾಡಿ ಬೆಂಕಿ ನಂದಿಸಿದ್ದಾನೆ. ಆದರೂ ದೇಹದ 80 ರಷ್ಟರು ಭಾಗ ಸುಟ್ಟುಹೋಗಿತ್ತು. ನೋವಿನ ನಡುವೆಯೂ ಶಶಾಂಕ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಅದರಂತೆ ಸ್ನೇಹಿತರೊಂದಿಗೆ ಸ್ಥಳಕ್ಕೆ ಆಗಮಿಸಿದ್ದ ಕುಟುಂಬಸ್ಥರು ಶಶಾಂಕ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ