Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ, ಗೃಹ ಲಕ್ಷ್ಮಿಯರೇ ಬ್ಯಾಂಕ್ ಪಾಸ್​ಬುಕ್ ರೆಡಿ ಮಾಡ್ಕೊಳ್ಳಿ

ಗೃಹ ಲಕ್ಷ್ಮಿಯರೇ.. ಬ್ಯಾಂಕ್ ಪಾಸ್ ಬುಕ್ ರೆಡಿ ಮಾಡ್ಕೊಳ್ಳಿ.. ಮನೆ ಯಜಮಾನಿಯರೇ ಆರ್ಧಾರ್ ಕಾರ್ಡ್ ಕೈಗೆ ಎತ್ಕೊಳ್ಳಿ.. ನೀವೆಲ್ಲ ಎದುರು ನೋಡುತ್ತಿದ್ದ ದಿನ ಬಂದೇ ಬಿಟ್ಟಿದೆ. ಗೃಹಲಕ್ಷ್ಮೀ ಯೋಜನೆ ಇವತ್ತಿಂದು ಶುರುವಾಗುತ್ತಿದೆ.ಇದಕ್ಕೆ ಏನೇನ್‌ ದಾಖಲೆಗಳು ಬೇಕು ಎನ್ನುವ ಮಾಹಿತಿ ಇಲ್ಲಿದೆ ನೋಡಿ.

ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ, ಗೃಹ ಲಕ್ಷ್ಮಿಯರೇ ಬ್ಯಾಂಕ್ ಪಾಸ್​ಬುಕ್ ರೆಡಿ ಮಾಡ್ಕೊಳ್ಳಿ
ಗೃಹಲಕ್ಷ್ಮಿ ಯೋಜನೆ
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jul 19, 2023 | 6:28 AM

ಬೆಂಗಳೂರು, (ಜುಲೈ 19): ಗೃಹಲಕ್ಷ್ಮಿ ಯೋಜನೆಗೆ(Gruha Lakshmi scheme) ಅರ್ಜಿ ಬಿಟ್ರಾ? ಅರ್ಜಿ ಸಲ್ಲಿಸೋದು ಯಾವಾಗ? ಯಾವೆಲ್ಲ ದಾಖಲೆಗಳು ಬೇಕು? ನಿಮ್ದು ಆರ್ಧಾರ್ ಕಾರ್ಡ್ ಇದ್ಯಾ? ಬ್ಯಾಂಕ್ ಬುಕ್ ಇದ್ಯಾ? ಯಾರ ಬಾಯಲ್ಲಿ ನೋಡಿದ್ರೂ ಇದೇ ಮಾತು. ಯಾರ ಮನೆಯಲ್ಲಿ ನೋಡಿದ್ರೂ ಇದೇ ಟಾಪಿಕ್. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ಗೃಹ ಲಕ್ಷ್ಮಿ ಯೋಜನೆಗೆ ಇಂದಿನಿಂದಲೇ ಅರ್ಜಿ ಶುರುವಾಗಲಿದೆ. ಹೌದು.. ರಾಜ್ಯದ ಮಹಿಳೆಯರು ಎದುರು ನೋಡ್ತಿರೋ ಗೃಹಲಕ್ಷ್ಮಿ ಯೋಜನೆಗೆ ಇಂದು(ಜುಲೈ 19) ಚಾಲನೆ ಸಿಗಲಿದೆ.. ಬೆಂಗಳೂರಿನಲ್ಲಿ ಸಂಜೆ 5 ಗಂಟೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಲಿದ್ದಾರೆ. ಇಂದಿನಿಂದಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಆದ್ರೆ ಆಗಸ್ಟ್​ನಲ್ಲಿ ಗೃಹಲಕ್ಷ್ಮಿಯರ ಖಾತೆಗೆ 2 ಸಾವಿರ ಹಣ ಜಮೆಯಾಗಲಿದೆ. ಇನ್ನು ಅರ್ಜಿ ಸಲ್ಲಿಸುವುದು ಎಲ್ಲಿ? ಏನೆಲ್ಲ ದಾಖಲೆಗಳು ಬೇಕು ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Gruha Lakshmi Scheme: ಗೃಹ ಲಕ್ಷ್ಮಿ ಯೋಜನೆ ಜಾರಿಗೂ ಮುನ್ನವೇ ಚಿಕ್ಕಮಗಳೂರಿನಲ್ಲಿ ಅವ್ಯವಹಾರದ ಆರೋಪ

‘ಗೃಹಲಕ್ಷ್ಮೀ’ ಅರ್ಜಿ ಸಲ್ಲಿಕೆ ಹೇಗೆ?

‘ಗೃಹಲಕ್ಷ್ಮೀ’ ಯೋಜನೆಯಡಿ ಮನೆ ಒಡತಿಗೆ ಪ್ರತೀ ತಿಂಗಳು 2 ಸಾವಿರ ರೂ. ಹಣ ಬರಲಿದೆ. ಇದೇ ಯೋಜನೆ ಅರ್ಜಿ ಸಲ್ಲಿಕೆ ಎಸ್‌ಎಂಎಸ್‌ ಮೂಲಕ ಆರಂಭವಾಗಲಿದೆ. ಮೊದಲಿಗೆ ನಿಮ್ಮ ಪಡಿತರ ಚೀಟಿ ಸಂಖ್ಯೆಯನ್ನು 8147500500 ಸಂಖ್ಯೆಗೆ SMS ಮಾಡ್ಬೇಕು. ಹೀಗೆ ಎಸ್‌ಎಂಎಸ್‌ ಮಾಡುತ್ತಿದ್ದಂತೆಯೇ ಎರಡೇ ಸೆಕೆಂಡ್‌ನಲ್ಲೇ ಇಲಾಖೆಯಿಂದ ನಿಮಗೆ ಮೇಸೇಜ್‌ ಬರಲಿದೆ. ಅದರಲ್ಲಿ ಸ್ಥಳ, ಗೊತ್ತುಪಡಿಸಿದ ದಿನಾಂಕ, ಸಮಯ ಸಂದೇಶ ಬರಲಿದೆ. ಅದೇ ದಿನ, ಅದೇ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬಹುದು. ಇನ್ನು ಅರ್ಜಿ ಸಲ್ಲಿಸಲು ಮನೆ ಒಡತಿ ಹೆಸರು ಇರೋ ಪಡಿತರ ಕಾರ್ಡ್‌ ಕಡ್ಡಾಯವಾಗಿದ್ದು, ಇದರ ಜತೆ ಮನೆ ಯಜಮಾನಿಯ ಆಧಾರ್‌ ಕಾರ್ಡ್‌ ಹಾಗೂ ಮೊಬೈಲ್‌ ಕೂಡಾ ತೆಗೆದುಕೊಂಡು ಹೋಗಬೇಕು. ವಿಷ್ಯ ಅಂದ್ರೆ ಮನೆ ಒಡತಿಯ ಪತಿಯ ಆಧಾರ್‌ಕಾರ್ಡ್‌ ಕೂಡಾ ಕಡ್ಡಾಯವಾಗಿದೆ.

ಒಂದು ವೇಳೆ ಪತಿ ತೆರಿಗೆದಾರರಾಗಿದ್ದರೆ ಅಂಥವರ ಅಕೌಂಟ್‌ಗೆ ಹಣ ಬರುವುದಿಲ್ಲ. ಇನ್ನು ಆಧಾರ್‌ಗೆ ಲಿಂಕ್‌ ಆಗಿರೋ ಅಕೌಂಟ್‌ ಬಿಟ್ಟು, ನಿಮ್ಮದೆ ಬೇರೆ ಅಕೌಂಟ್‌ಗೆ ಹಣ ಬೇಕಾದ್ರೆ ಪಾಸ್‌ಬುಕ್‌ನ ಜೆರಾಕ್ಸ್‌ ಪ್ರತಿ ತೆಗೆದುಕೊಂಡು ಹೋಗಬೇಕು. ಗೃಹಲಕ್ಷ್ಮಿಯರು ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ. ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಸೇರಿದಂತೆ ಸರ್ಕಾರಿ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸ್ವೀಕರಿಸಲಾಗುತ್ತೆ. ಅಂತೂ ಇಂತೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ ಒಂದಾಗ ಗೃಹಲಕ್ಷ್ಮೀ ಯೋಜನೆ ಇಂದಿನಿಂದ ಶುರುವಾಗಲಿದೆ. ಅರ್ಜಿ ಹಾಕಲು ಯಾವುದೇ ಮಧ್ಯವರ್ತಿಗಳ ಮೊರೆಹೋಗುವ ಅಗತ್ಯವಿಲ್ಲ. ಗೊಂದಲವಿದ್ದರೆ 1902 ನಂಬರ್​ಗೆ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಿ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:24 am, Wed, 19 July 23