ಜಾತಿಗಣತಿ ವರದಿಯ ಮೂಲ ಪ್ರತಿ ಕಾಣೆ: ಹಿಂದಿನ ಸರ್ಕಾರಗಳೇ ಕದ್ದಿರಬಹುದು: ಅಧ್ಯಕ್ಷ ರಾಮಚಂದ್ರ ಆರೋಪ
ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಅವರು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ಮೂಲ ಪ್ರತಿ ಕಾಣೆಯಾಗಿದ್ರೆ 2018ರಿಂದ 2022ರವರೆಗಿನ ಸರ್ಕಾರಗಳೇ ವರದಿ ಕದ್ದಿರಬಹುದು ಎಂದಿದ್ದಾರೆ.
ಬೆಂಗಳೂರು, ನ.23: ಕಾಂತರಾಜು ವರದಿಯ ಮೂಲ ಪ್ರತಿ ಕಾಣೆಯಾದ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹಿಂದಿನ ಸರ್ಕಾರದ ವಿರುದ್ಧ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಅವರು ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿ(Bengaluru)ನಲ್ಲಿ ಮಾತನಾಡಿದ ಅವರು ‘ಮೂಲ ಪ್ರತಿ ಕಾಣೆಯಾಗಿದ್ರೆ 2018ರಿಂದ 2022ರವರೆಗಿನ ಸರ್ಕಾರಗಳೇ ವರದಿ ಕದ್ದಿರಬಹುದು. ಜಾತಿಗಣತಿ(Caste Census) ವಿರೋಧಿಸಿ ಸಹಿಹಾಕಿದ ಸಚಿವರಿಗೆ ಪ್ರಮಾಣವಚನ ನೆನಪಿಲ್ವಾ?, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಯಾರೇ ಆಗಿರಲಿ. ಅವರಿಗೆ ಪ್ರಮಾಣವಚನ ಸ್ವೀಕರಿಸಿದ್ದು ನೆನಪಿಲ್ವಾ ಎಂದು ಪ್ರಶ್ನಿಸಿದ್ದಾರೆ.
ಡಿಸಿಎಂ ಹಾಗೂ ಸಚಿವರ ವಿರುದ್ಧ ಕಾನೂನು ಹೋರಾಟ
ಇನ್ನು ಇದಕ್ಕೆ ಸಹಿ ಹಾಕಿದ ಡಿಸಿಎಂ ಹಾಗೂ ಸಚಿವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಇಷ್ಟು ದಿನ ಮೇಲ್ಜಾತಿಯವರು ನಮ್ಮನ್ನು ದಬ್ಬಾಳಿಕೆ ಮಾಡಿಕೊಂಡೇ ಬಂದರು. ಡಿಸೆಂಬರ್ ಅಂತ್ಯದಲ್ಲಿ ಇದನ್ನು ವಿರೋಧಿಸಿ ನಾವು ಜಾಗೃತಿ ಸಮಾವೇಶವನ್ನು ಮಾಡುತ್ತೇವೆ ಎಂದು ಬೆಂಗಳೂರಲ್ಲಿ ಹಿಂದುಳಿದ ಜಾತಿಗಳ ಒಕ್ಕೂಟದ ಅಧ್ಯಕ್ಷ ರಾಮಚಂದ್ರ ಹೇಳಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಜಾತಿಗಣತಿ ವರದಿ ಬಹಿರಂಗಕ್ಕೂ ಮುನ್ನ ಸಿಡಿಯುತ್ತಿದೆ ಪರ-ವಿರೋಧದ ಕಿಡಿ!
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ