Crypto Currency: ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೋಟ್ಯಾಂತರ ಹಣ ವಂಚನೆ, ನಾಲ್ವರು ಅರೆಸ್ಟ್

| Updated By: ಆಯೇಷಾ ಬಾನು

Updated on: Apr 18, 2022 | 2:17 PM

ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಬರೋಬ್ಬರಿ 44 ಬ್ಯಾಂಕ್ ಅಕೌಂಟ್ ನಲ್ಲಿದ್ದ 15 ಕೋಟಿ ಹಣ, 1 ಕೆಜಿ 650 ಗ್ರಾಂ ಚಿನ್ನ, 78ಲಕ್ಷ ನಗದು ಸೇರಿ 17 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.

Crypto Currency: ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೋಟ್ಯಾಂತರ ಹಣ ವಂಚನೆ, ನಾಲ್ವರು ಅರೆಸ್ಟ್
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ಕೋಟ್ಯಾಂತರ ಹಣ ವಂಚಿಸಿದ ಪ್ರಕರಣ ಬಯಲಾಗಿದೆ. ಶೇರ್ ಶಾ ಅಪ್ಲಿಕೇಶನ್ ಹೆಸರಿನಲ್ಲಿ ಬಹುಕೋಟಿ ವಂಚನೆ ನಡೆದಿದ್ದು ಸಿಸಿಬಿ ಪೊಲೀಸರು ಕೇಸ್ ಭೇದಿಸಿದ್ದಾರೆ. ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿ ವಂಚನೆ ಮಾಡಲಾಗಿದೆ. ಈ ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಬರೋಬ್ಬರಿ 44 ಬ್ಯಾಂಕ್ ಅಕೌಂಟ್ ನಲ್ಲಿದ್ದ 15 ಕೋಟಿ ಹಣ, 1 ಕೆಜಿ 650 ಗ್ರಾಂ ಚಿನ್ನ, 78ಲಕ್ಷ ನಗದು ಸೇರಿ 17 ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ.

ಕೋವಿಡ್ 19-2 ನೇ ಲಾಕ್ ಡೌನ್ ವೇಳೆ ಸಾಮಾಜಿಕ ಜಾಲತಾಣದ ಮೂಲಕ HNT(HELIEAM CRIPTO TOKEN) ನೀಡುವುದಾಗಿ ನಂಬಿಸಿ ವಂಚನೆ ಮಾಡಲಾಗಿತ್ತು. ಬೆಂಗಳೂರು ಸೇರಿ ವಿವಿಧ ರಾಜ್ಯಗಳಲ್ಲಿ ನೊಂದಾಯಿತ ಕಂಪನಿಗಳ ಮೂಲಕ ಹಣ ಹೂಡಿಕೆ ಮಾಡಲಾಗಿದೆ. 2022 ರ ಜನವರಿಯಲ್ಲಿ ಶೇರ್ ಷಾ ಅಪ್ಲಿಕೇಷನ್ ದೋಷಪೂರಿತವಾಗಿದೆ. ಅದನ್ನ ಅಪ್ಡೇಟ್ ಮಾಡಿ ಎಂದು ಸಂದೇಶ ರವಾನೆಯಾಗಿದೆ. ಹೊಸ ಅಪ್ಲಿಕೇಷನ್ ಆದ 2.0 ಹೊಸ ಅಪ್ಲಿಕೇಷನ್ ಬಿಡುಗಡೆ ಮಾಡ್ತಿವಿ ಎಂದು ಆರೋಪಿಗಳು ಜನರಿಗೆ ನಂಬಿಸಿದ್ದರು. ಹೇಳಿದ ಸಮಯಕ್ಕೆ ಅಪ್ಲಿಕೇಷನ್ ಅಪ್ಗ್ರೇಡ್ ಆಗಿಲ್ಲ. ಹೂಡಿಕೆದಾರರಿಗೆ ಯಾವುದೇ ರಿಟರ್ನ್ ನೀಡದೆ ಆದಾಯವನ್ನೂ ನೀಡದೆ ಕ್ರಿಪ್ಟೋ ಮೈನಿಂಗ್ ಯಂತ್ರವೂ ನೀಡದೆ ವಂಚನೆ ಮಾಡಿದ್ದಾರೆ. 1 ಕೆ.ಜಿ 650 ಗ್ರಾಂ ಗೋಲ್ಡ್ ,78ಲಕ್ಷ ಹಣ , 44 ಡಿಎಸ್ಸಿ( Digital signature certificate) ಕಂಪನಿಗಳ ಸೀಲ್, ಮೊಬೈಲ್ ಫೋನ್, ಲ್ಯಾಪ್ ಟ್ಯಾಪ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗೂಗಲ್ ಫ್ಲೇ ಸ್ಟೋರ್ ಮುಖಾಂತರ ಶೇರ್ ಹ್ಯಾಶ್ ಆಫ್ಲೀಕೇಷನ್ ಇನ್ ಸ್ಟಾಲ್ ಮಾಡುವಂತೆ ಮೆಸೇಜ್ ಹಾಕಿದ್ದಾರೆ. HNT (Helium Crypto Token) ಕ್ರಿಪ್ಟೋ ಕರೆನ್ಸಿಗೆ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಲಾಭಾಂಶ ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡೋದಾಗಿ ವಂಚನೆ ಮಾಡಿದ್ದಾರೆ. ಸಾರ್ವಜನಿಕವಾಗಿ ಇನ್ ಸ್ಟಾಲ್ ಅದ ಖಾತೆಯಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾವಣೆ ಮಾಡಲಾಗಿದೆ. ಕೋಟ್ಯಾಟ ಟೆಕ್ನಾಲಜಿ ಪ್ರೈ.ಲಿ., ಸಿರಾಲಿನ್ ಟೆಕ್ ಸಲ್ಯೂಷನ್ ಪ್ರೈ. ಲಿ., ನೈಲಿನ್ ಇನ್ ಪೋಟೆಕ್ ಪ್ರೈ.ಲಿ., ಮಾಲ್ಟ್ರೆಸ್ ಎಕ್ಸಿಮ್ ಪ್ರೈ.ಲಿ., ಕ್ರಾಪಿಂಗಟನ್ ಟೆಕ್ನಾಲಜಿ ಪ್ರೈ.ಲಿ ಕಂಪನಿಗಳಿಗೆ ಬ್ಯಾಂಕ್ ಖಾತೆಗೆ ಸಾರ್ವಜನಿಕರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಲಾಗಿದೆ.

ಡಿಜಿಟಲ್ ಹಣ ವಿನಿಯೋಗಿಸುವ ಅಪೇಕ್ಷೆ, ಆಸೆ ಉಪಯೋಗಿಸಿಕೊಂಡು ಜನರಿಗೆ ವಂಚನೆ
ಇನ್ನು ಘಟನೆ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿದ್ದು, ಬೆಂಗಳೂರು ಐಟಿ ಸೆಂಟರ್ ಆಗಿ ಹೆಸರು ಪಡೆದಿದೆ. ಡಿಜಿಟಲ್ ಹಣ ವಿನಿಯೋಗಿಸುವ ಅಪೇಕ್ಷೆ, ಆಸೆ ಇರುತ್ತೆ. ಇದನ್ನೇ ಉಪಯೋಗಿಸಿಕೊಂಡು ಜನರಿಗೆ ಕೋಟ್ಯಂತರ ಹಣ ವಂಚನೆ ಮಾಡಲಾಗುತ್ತಿದೆ ಎಂದರು.

ಖದೀಮರು ಜನರನ್ನು ಹೇಗೆ ನಂಬಿಸುತ್ತಿದ್ದರು ಗೊತ್ತಾ?
ಚೈನಿಸ್ ಆಪ್ ಮೂಲಕ ವಂಚನೆ ಮಾಡುತ್ತಿರುವುದಾಗಿ ಸಿಸಿಬಿಗೆ ಮಾಹಿತಿ ಸಿಕ್ಕಿತು. ಇದರ ಜಾಡು ಹಿಡಿದ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕ್ರಿಪ್ಟೋ ಕರೆನ್ಸಿ ಮೈನಿಂಗ್ ಅನ್ನು ಪ್ಲಾಂಟ್ ಅನ್ನು ಇಟ್ಟುಕೊಂಡು ಮೈನಿಂಗ್ ಮಾಡ್ತಾರೆ. ಇನ್ವೆಸ್ಟ್ಮೆಂಟ್ ಮಾಡಿದ್ರೆ 1 ಪರ್ಸೆಂಟ್ ಹಣ ನೀಡುವುದಾಗಿ ಹೇಳಿ ಅಕೌಂಟ್ ಗೆ ಹಣ ಹಾಕಿಸಿಕೊಳ್ಳುತ್ತಿದ್ದರು. ಮೊದಲಿಗೆ ನಂಬಿಕೆ ಗಳಿಸಲು ಪಕ್ಕಾ ಪ್ಲಾನ್ ಮಾಡ್ತಿದ್ರು. ಬರೋಬ್ಬರಿ 900 ವ್ಯಾಟ್ಸ್ ಅಪ್ ಗ್ರೂಪ್ ಮೂಲಕ ವಿಚಾರ ವಿನಿಮಯವಾಗುತ್ತಿತ್ತು. 256 ಜನರ ವ್ಯಾಟ್ಸ್ ಅಪ್ ಗ್ರೂಪ್ ಮೂಲಕ ಚಾಟಿಂಗ್ ನಡೆಯುತ್ತಿತ್ತು. ನೆಬ್ರಾ ಕಂಪನಿ ಮೂಲಕ ಹೀಲಿಯಂ ಕ್ರಿಪ್ಟೋ ಟೋಕನ್ ನೀಡುವುದಾಗಿ ಭರವಸೆ ನೀಡಿ ಕೋವಿಡ್ ಸಮಯದಲ್ಲಿ ಕಂಪನಿಯಲ್ಲಿ ನಾಲ್ವರು ಡೈರೆಕ್ಟರ್ ಆಗಿ ನೇಮಕ ಮಾಡಿಕೊಂಡಿದ್ದರು. ಬಿಕಾಂ ಪದವೀಧರ ಯುವಕ ಕೆಲಸಕ್ಕಾಗಿ ಹುಡುಕುತ್ತಿದ್ದ. ಅನ್ ಲೈನ್ ಮೂಲಕ ಸರ್ಚ್ ಮಾಡಿ ಕೆಲಸಕ್ಕೆ ನೇಮಿಸಿಕೊಂಡಿದ್ದರು. ಈ ನಾಲ್ವರ ಅಕೌಂಟ್ ಗಳಲ್ಲಿ ಒಂದು ಕೋಟಿಗೂ ಹೆಚ್ಚು ಹಣ ಜಪ್ತಿ ಮಾಡಲಾಗಿದೆ. 40 ಕೋಟಿ ಹಣವನ್ನು ಸಾರ್ವಜನಿಕರಿಗೆ ವಂಚಿಸಿರುವ ಆರೋಪಿಗಳು ಅಕೌಂಟ್ ಗೆ ಬಂದ ಹಣವನ್ನು ಇತರೆ ಅಕೌಂಟ್ ಗಳಿಗೆ ವರ್ಗಾಯಿಸ್ತಿದ್ದರು. ಓರ್ವ ಡೈರೆಕ್ಟರ್ ಅಕೌಂಟ್ ನಲ್ಲಿ 1 ಕೋಟಿ ಹಣ, ಮತ್ತೋರ್ವನ ಅಕೌಂಟ್ ನಲ್ಲಿ 2 ಕೋಟಿ 20 ಲಕ್ಷ ಹಣ ಜಮೆಯಾಗಿತ್ತು. ಕೂಡಲೇ ಅಲರ್ಟ್ ಆದ ಸಿಸಿಬಿ ಪೊಲೀಸರು ಅಕೌಂಟ್ ಜಪ್ತಿ ಮಾಡಿದ್ದಾರೆ. ಈ ಕಂಪನಿಯಿಂದ ವಂಚನೆಗೊಳಾಗದವರು ದೂರು ನೀಡಲು ಕಮಿಷನರ್ ಮನವಿ ಮಾಡಿದ್ದಾರೆ.

ಈ ಪ್ರಕರಣ ಭೇದಿಸಿದ ಸಿಸಿಬಿ ಪೊಲೀಸರಿಗೆ 70 ಸಾವಿರ ನಗದು ಬಹುಮಾನ ಘೋಷಣೆ ಮಾಡಲಾಗಿದೆ. ಪ್ರಕರಣ ಕಿಂಗ್ ಪಿನ್ ವಿದೇಶಿಗರು ಇರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಪ್ರಕರಣ ತನಿಖೆ ಮುಂದುವರೆದಿದೆ, ಸದ್ಯ ನಾಲ್ವರು ಆರೋಪಿಗಳನ್ನ ಬಂಧಿಸಲಾಗಿದೆ.

ಇದನ್ನೂ ಓದಿ: ದೇಶದಲ್ಲಿ ಇಂದು 2 ಸಾವಿರಕ್ಕೂ ಅಧಿಕ ಕೊರೊನಾ ಕೇಸ್​ಗಳು ದಾಖಲು; ನಿನ್ನೆಗಿಂತ ಸಾವಿರ ಹೆಚ್ಚು, 214 ಮಂದಿ ಸಾವು

ಪ್ರೇಮ ವೈಫಲ್ಯ ಹಿನ್ನೆಲೆ ಮೊಬೈಲ್ ಟವರ್ ಏರಿದ ಯುವಕ; ಪೊಲೀಸ್ ಹರಸಾಹಸ, ಪ್ರಿಯತಮೆ ಕರೆಗೆ ಸರಕ್ಕನೆ ಕೆಳಗಿಳಿದ

Published On - 1:27 pm, Mon, 18 April 22