Robbery: ದರೋಡೆಗೆ ಸಂಚು ರೂಪಿಸಿದ್ದ ವಿಲ್ಸನ್ ಗಾರ್ಡನ್ ನಾಗನ 6 ಸಹಚರರು ಅರೆಸ್ಟ್

| Updated By: ಆಯೇಷಾ ಬಾನು

Updated on: Oct 05, 2021 | 9:51 AM

ಕುಖ್ಯಾತ ರೌಡಿಯಾಗಿರುವ ಜೈಲಿನಲ್ಲಿದ್ದುಕೊಂಡೆ ಬಬ್ಲಿ ಹತ್ಯೆ ನಡೆಸಿದ್ದ. ಕಳೆದ ಕೆಲ ತಿಂಗಳ ಹಿಂದೆ ಕೊರಮಂಗಲದಲ್ಲಿ ಹತ್ಯೆ ನಡೆದಿತ್ತು. ಸದ್ಯ ವಿಲ್ಸನ್ ಗಾರ್ಡನ್ ನಾಗನನ್ನು ಕೊರಮಂಗಲ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ನಡುವೆಯೂ ಆತನ ಸಹಚರರು ಮಾತ್ರ ಫುಲ್ ಆಕ್ಟಿವ್ ಆಗಿದ್ದಾರೆ. ಅವರ ಪುಂಡಾಟ ಇನ್ನೂ ನಿಂತಿಲ್ಲ.

Robbery: ದರೋಡೆಗೆ ಸಂಚು ರೂಪಿಸಿದ್ದ ವಿಲ್ಸನ್ ಗಾರ್ಡನ್ ನಾಗನ 6 ಸಹಚರರು ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ದರೋಡೆಗೆ ಸಂಚು ರೂಪಿಸಿದ್ದ ವಿಲ್ಸನ್ ಗಾರ್ಡನ್ ನಾಗನ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್ ಗಾರ್ಡನ್ ನಾಗನ ಆರು ಮಂದಿ ಸಹಚರರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ಆರೋಪಿಗಳ ಬಳಿ ಇದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.

ಕುಖ್ಯಾತ ರೌಡಿಯಾಗಿರುವ ಜೈಲಿನಲ್ಲಿದ್ದುಕೊಂಡೆ ಬಬ್ಲಿ ಹತ್ಯೆ ನಡೆಸಿದ್ದ. ಕಳೆದ ಕೆಲ ತಿಂಗಳ ಹಿಂದೆ ಕೊರಮಂಗಲದಲ್ಲಿ ಹತ್ಯೆ ನಡೆದಿತ್ತು. ಸದ್ಯ ವಿಲ್ಸನ್ ಗಾರ್ಡನ್ ನಾಗನನ್ನು ಕೊರಮಂಗಲ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಈ ನಡುವೆಯೂ ಆತನ ಸಹಚರರು ಮಾತ್ರ ಫುಲ್ ಆಕ್ಟಿವ್ ಆಗಿದ್ದಾರೆ. ಅವರ ಪುಂಡಾಟ ಇನ್ನೂ ನಿಂತಿಲ್ಲ.

ವಿಲ್ಸನ್ ಗಾರ್ಡನ್ ನಾಗ ಪೊಲೀಸರ ವಶದಲ್ಲಿದ್ದರು ಆತನ ಸಹಚರರು ದರೋಡೆಗೆ ಸಂಚು ರೂಪಿಸಿದ್ದಾರೆ. ಸದ್ಯ ದರೋಡೆಗೆ ಸಂಚು ರೂಪಿಸಿದ್ದ 6 ಜನರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಮುಂದುವರಿದ ಬೈಕ್ ಬ್ಯಾಟರಿ ಕಳವು
ಬೆಂಗಳೂರಿನಲ್ಲಿ ಬೈಕ್ ಬ್ಯಾಟರಿ ಕಳವು ಮುಂದುವರೆದಿದೆ. ಕುರುಬರಹಳ್ಳಿಯಲ್ಲಿ 20ಕ್ಕೂ ಹೆಚ್ಚು ಬೈಕ್‌ಗಳ ಬ್ಯಾಟರಿ ಕಳವಾಗಿದೆ. ನಿನ್ನೆಯಷ್ಟೇ ಮಾಗಡಿ ರೋಡ್ ಪೊಲೀಸರು ಬ್ಯಾಟರಿ ಕಳ್ಳರನ್ನು ಬಂಧಿಸಿದ್ರು ಇಂದು ಮತ್ತೆ ಕುರುಬರಹಳ್ಳಿಯಲ್ಲಿ 20ಕ್ಕೂ ಹೆಚ್ಚು ಬೈಕ್‌ಗಳ ಬ್ಯಾಟರಿ ಕಳವಾಗಿದೆ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಮೈಸೂರು ಮೇಯರ್​ಗೆ ಈ ಬಾರಿಯೂ ಕುದುರೆ ಸವಾರಿ ಭಾಗ್ಯವಿಲ್ಲ

ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ, ಸೈಲೆಂಟ್ ಸುನಿಲ ಸೇರಿದಂತೆ 45 ರೌಡಿಶೀಟರ್ಸ್​ ಮನೆಗಳ ಮೇಲೆ ಸಿಸಿಬಿ ಪೊಲೀಸರ ರೇಡ್

Published On - 9:35 am, Tue, 5 October 21