Bengaluru: ಬೆಸ್ಕಾಂನಿಂದ ಭೂಗತ ಕೇಬಲ್ ಕಾಮಗಾರಿ; ವೇಗವಾಗಿ ಕೆಲಸ ಮುಗಿಸುವಂತೆ ಸಾರ್ವಜನಿಕರ ಮನವಿ
BESCOM: ಒಟ್ಟಿನಲ್ಲಿ ಕೊರೊನಾ ಎಂದು ಮಂದಗತಿಯಲ್ಲಿ ಆಗ್ತಿದ್ದ ಭೂಗತ ಕೇಬಲ್ ಕಾಮಗಾರಿ ಈಗ ಮತ್ತೆ ಶುರುವಾಗಿದೆ. ಆದಷ್ಟು ಬೇಗ ಈ ಕಾಮಗಾರಿ ಪೂರ್ಣವಾಗಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಬೆಸ್ಕಾಂ ಚಿಂತಿಸಬೇಕಿದೆ.
ಬೆಂಗಳೂರು: ವಿದ್ಯುತ್ ಕಂಬಕ್ಕೆ ಹಾಕಿರೋ ಬೆಸ್ಕಾಂ ವಯರ್ ಮರಗಳ ಮೇಲೆ ನೇತಾಡ್ತಾ ಇರುತ್ತವೆ. ಗುಡುಗು- ಗಾಳಿ ಸಹಿತ ಮಳೆ ಬಂತಂದ್ರೆ ಮರ ನೆರಕ್ಕುರಳಿ ವಿದ್ಯುತ್ ತಂತಿಗೂ ಸಮಸ್ಯೆ ಆಗುತ್ತೆ. ಈ ಸಮಸ್ಯೆಯನ್ನು ತಪ್ಪಿಸಲು ಸರ್ಕಾರ ಅಂಡರ್ ಗ್ರೌಂಡ್ ವಯರಿಂಗ್ ಕಾಮಗಾರಿಗೆ ಮುಂದಾಗಿತ್ತು. ಆದರೆ ಈಗ ವರ್ಷಗಳು ಕಳೀತಿದ್ರೂ ಕಾಮಗಾರಿ ಮಾತ್ರ ಮರೀಚಿಕೆಯಾಗಿದೆ.
ಸಿಲಿಕಾನ್ ಸಿಟಿಯಲ್ಲಿ ಬೆಸ್ಕಾಂನ ಕಾರ್ಯ ಬಹಳ ಪ್ರಮುಖವಾದದ್ದು. ಬೆಸ್ಕಾಂನ ಕಾರ್ಯದಲ್ಲಿ ಕೊಂಚ ತೊಡಕು ಉಂಟಾದ್ರೂ ಎಷ್ಟೋ ಕೆಲಸಗಳು ನಡೆಯೋದಿಲ್ಲ. 2019 ರಲ್ಲಿ ಬೆಸ್ಕಾಂ ಭೂಗತ ಕೆಬಲ್ ಕಾಮಗಾರಿ ಕೆಲಸಕ್ಕೆ ಕೈ ಹಾಕಿತ್ತು. ಆದರೆ ಈ ಪ್ರಾಜೆಕ್ಟ್ ಶುರುವಾಗಿ ವರ್ಷ ಕಳೀತಿದ್ರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಬೆಸ್ಕಾಂ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 52 ಉಪ ವಿಭಾಗಗಳಿಂದ ಭೂಗತ ಕೇಬಲ್ ಕಾಮಗಾರಿ ನಡೆಸುತ್ತಿದೆ. ಒಟ್ಟು 5,321 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಭೂಗತ ಕೇಬಲ್ ಕಾಮಗಾರಿಯನ್ನು ನಡೆಸಲಾಗ್ತಿದೆ.
ಬೆಸ್ಕಾಂ ಹೇಳುವ ಪ್ರಕಾರ ಹೈ ವೋಲ್ಟೇಜ್ ವಯರ್ ಇರುವ ಕಾರಣ ಸುಮಾರು 6 ಅಡಿ ಹಳ್ಳ ಅಗೆದು ನಂತರ ವಯರಿಂಗ್ ಮಾಡ್ಬೇಕು. ಆದ್ರೆ, ಬೆಸ್ಕಾಂ ಸಿಬ್ಬಂದಿಗಳು ಕೇವಲ 2-3 ಅಡಿ ಮಾತ್ರ ಅಗೆದು ಕಾಮಗಾರಿ ಮಾಡುತ್ತಿದ್ದಾರೆ. ಹಲವು ಭಾಗಗಳಲ್ಲಿ ಕಾವೇರಿ ನೀರಿನ ಪೈಪ್ ಹಾದು ಹೋಗಿರುವ ಕಡೆ ಅಗೆದು ಎರಡು ಮೂರು ದಿನಗಳ ಕಾಲ ಜನರು ನೀರಿಲ್ಲದೆ ಪರದಾಡುವಂತಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸುವಂತೆ ಸ್ಥಳೀಯರು ಮನವಿ ಮಾಡಿಕೊಳ್ತಿದ್ದಾರೆ.
ಒಟ್ಟು ಬೆಂಗಳೂರು ನಗರ ವ್ಯಾಪ್ತಿಯಲ್ಲಿ 6,778 ಕಿ.ಮೀ ನಷ್ಟು ಭೂಗತ ಕೇಬಲ್ ಹಾಕಲು ಬೆಸ್ಕಾಂ ಮುಂದಾಗಿದೆ. ಇಗಾಗ್ಲೇ 3,372 ಕಿ.ಮೀ ನಷ್ಟು ಕೆಲಸ ಪೂರ್ಣ ಆಗಿದೆ. ಈಗಾಗ್ಲೇ ಅರ್ಧ ಕಾಮಗಾರಿ ಮುಗಿಸಲಾಗಿದೆ. ಇನ್ನೂ ಅರ್ಧದಷ್ಟು ಕಾಮಗಾರಿ ಬಾಕಿ ಉಳಿದಿದೆ. ಮಂದಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ, ಇದರಿಂದ ಜನರಿಗೆ ತುಂಬಾ ಸಮಸ್ಯೆಯಾಗ್ತಿದೆ. ಕೊರೊನಾ ಹೊಡೆತದಿಂದ ರಾಜ್ಯದಲ್ಲಿ ಎರಡು ಬಾರಿ ಲಾಕ್ ಡೌನ್ ಆಯ್ತು, ಇದರಿಂದ ಭೂಗತ ಕೇಬಲ್ ಕಾಮಗಾರಿಯಲ್ಲಿ ವಿಳಂಬವಾಗಿತ್ತು. ಹಂತ ಹಂತವಾಗಿ ಕಾಮಗಾರಿ ನಡೀತಿದ್ದು ಅಂತಿಮ ಹಂತಕ್ಕೆ ಈ ಕಾಮಗಾರಿ ಬಂದು ತಲುಪಿದೆ. ಆಗಸ್ಟ್ 2022 ರ ಹೊತ್ತಿಗೆ ಕಾಮಗಾರಿ ಮುಗಿಸುವ ಗುರಿ ಹೊಂದಿದ್ದೇವೆ ಎಂದು ಬೆಸ್ಕಾಂ ಅಧಿಕಾರಿಗಳ ಹೇಳ್ತಿದ್ದಾರೆ.
ಒಟ್ಟಿನಲ್ಲಿ ಕೊರೊನಾ ಎಂದು ಮಂದಗತಿಯಲ್ಲಿ ಆಗ್ತಿದ್ದ ಭೂಗತ ಕೇಬಲ್ ಕಾಮಗಾರಿ ಈಗ ಮತ್ತೆ ಶುರುವಾಗಿದೆ. ಆದಷ್ಟು ಬೇಗ ಈ ಕಾಮಗಾರಿ ಪೂರ್ಣವಾಗಿ ಜನರಿಗೆ ಅನುಕೂಲ ಮಾಡಿಕೊಡುವಂತೆ ಬೆಸ್ಕಾಂ ಚಿಂತಿಸಬೇಕಿದೆ.
ಇದನ್ನೂ ಓದಿ: ವಿದ್ಯುತ್ ಬಿಲ್ನಲ್ಲಿ ತಿದ್ದುಪಡಿ ಮಾಡಿ ಅಕ್ರಮ; ಮೂವರು ಬೆಸ್ಕಾಂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸುನಿಲ್ ಕುಮಾರ್ ಆದೇಶ
ಇದನ್ನೂ ಓದಿ: ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ; ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ 4 ಎಮ್ಮೆ ಸಾವು