ವಿದ್ಯುತ್ ಬಿಲ್​ನಲ್ಲಿ ತಿದ್ದುಪಡಿ ಮಾಡಿ ಅಕ್ರಮ; ಮೂವರು ಬೆಸ್ಕಾಂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸುನಿಲ್ ಕುಮಾರ್ ಆದೇಶ

ಸುಮಾರು 8 ಕಮರ್ಷಿಯಲ್ ಮಳಿಗೆಗಳಿಗೆ 5 ಲಕ್ಷದವರೆಗೂ ವಿದ್ಯುತ್ ಬಿಲ್ ಬಂದಿದ್ದರೆ, ಅಕ್ರಮವಾಗಿ ಮುಳಬಾಗಿಲು ಎಇಇ ರಮೇಶ್ ಪಾಸ್​ವರ್ಡ್​ ಬಳಸಿಕೊಂಡು ಕೇವಲ 1 ಲಕ್ಷದಷ್ಟು ಹಣವನ್ನ ಮಾತ್ರ ಕಟ್ಟಿಸಿಕೊಂಡಿದ್ದಾರೆ.

ವಿದ್ಯುತ್ ಬಿಲ್​ನಲ್ಲಿ ತಿದ್ದುಪಡಿ ಮಾಡಿ ಅಕ್ರಮ; ಮೂವರು ಬೆಸ್ಕಾಂ ಸಿಬ್ಬಂದಿಯನ್ನು ಅಮಾನತುಗೊಳಿಸಿ ಸುನಿಲ್ ಕುಮಾರ್ ಆದೇಶ
ಇಂಧನ ಸಚಿವ ಸುನಿಲ್ ಕುಮಾರ್
Follow us
TV9 Web
| Updated By: sandhya thejappa

Updated on:Sep 04, 2021 | 5:07 PM

ಕೋಲಾರ: ಲಕ್ಷಾಂತರ ರೂಪಾಯಿ ವಿದ್ಯುತ್ ಬಿಲ್ನಲ್ಲಿ (Electricity Bill) ತಿದ್ದುಪಡಿ ಮಾಡಿ ಅಕ್ರಮವೆಸಗಿದ ಮೂವರು ಬೆಸ್ಕಾಂ (BESCOM) ಅಧಿಕಾರಿಗಳನ್ನ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಮುಳಬಾಗಿಲು ಬೆಸ್ಕಾಂ ಉಪವಿಭಾಗದ ಕಿರಿಯ ಸಹಾಯಕರಾದ ಮೆಹಬೂಬ್ ಪಾಷ, ಗಾಯತ್ರಮ್ಮ ಹಾಗೂ ಸುಜಾತಮ್ಮ ಅಮಾನತ್ತಾದ ಅಧಿಕಾರಿಗಳು. ವಿದ್ಯುತ್ ಬಿಲ್ಲು ಕಟ್ಟಿಸಿಕೊಳ್ಳುವ ವೇಳೆ 8 ಬಿಲ್ಲುಗಳನ್ನು ಮಾರ್ಪಾಡು ಮಾಡಿ ಅದರ ಮೊತ್ತವನ್ನು ಕಡಿಮೆ ಮಾಡಿದ್ದಾರೆ. ಅದು ಲಕ್ಷಗಟ್ಟಲೆ ಕಡಿಮೆ ಮಾಡಿದ್ದರು ಅನ್ನೋದು ಇಲಾಖೆ ತನಿಖೆಯಿಂದ ಸಾಭೀತಾಗಿದ್ದು, ಮೂವರನ್ನ ಅಮಾನತು ಮಾಡಲಾಗಿದೆ.

ಸುಮಾರು 8 ಕಮರ್ಷಿಯಲ್ ಮಳಿಗೆಗಳಿಗೆ 5 ಲಕ್ಷದವರೆಗೂ ವಿದ್ಯುತ್ ಬಿಲ್ ಬಂದಿದ್ದರೆ, ಅಕ್ರಮವಾಗಿ ಮುಳಬಾಗಿಲು ಎಇಇ ರಮೇಶ್ ಪಾಸ್​ವರ್ಡ್​ ಬಳಸಿಕೊಂಡು ಕೇವಲ 1 ಲಕ್ಷದಷ್ಟು ಹಣವನ್ನ ಮಾತ್ರ ಕಟ್ಟಿಸಿಕೊಂಡಿದ್ದಾರೆ. ಇದು ಇಲಾಖೆಗೆ ಬಹು ದೊಡ್ಡ ನಷ್ಟ ಉಂಟು ಮಾಡಿದೆ. ಅಲ್ಲದೆ ಇಂತಹ ಹಲವು ಪ್ರಕರಣಗಳಲ್ಲಿ ಆರೋಪಿತರು ಭಾಗಿಯಾಗಿರುವುದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಕೋಲಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಆಗಸ್ಟ್ 27 ರಂದು ಮುಳಬಾಗಿಲು ಎಇಇ ರಮೇಶ್ ಅವರು ತಮ್ಮ ಕಂಪ್ಯೂಟರ್ ಪಾಸ್​ವರ್ಡ್​ ಬಳಸಿಕೊಂಡು ಲಕ್ಷಾಂತರ ರೂಪಾಯಿ ಹಣ ಗೋಲ್ ಮಾಲ್ ನಡೆದಿದೆ ಎಂದು ನೀಡಿದ ದೂರಿನ ಆಧಾರದ ಮೇಲೆ ಮೂವರು ಕಿರಿಯ ಅಧಿಕಾರಿಗಳ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ. ಇನ್ನೂ ಇಲಾಖೆ ವಿಚಾರಣೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಲು ಆದೇಶ ಮಾಡಿರುವ ಇಂಧನ ಸಚಿವ ಸುನೀಲ್ ಕುಮಾರ್ ಇಂದು ಮೂವರು ಕಿರಿಯ ಅಧಿಕಾರಿಗಳನ್ನ ಅಮಾನತು ಮಾಡಿದ್ದಾರೆ.

ಇದನ್ನೂ ಓದಿ

ಕೊಲ್ಲೂರು ಮೂಕಾಂಬಿಕೆ ದರ್ಶನಕ್ಕೆ ಆಧಾರ್ ಕಾರ್ಡ್ ಕಡ್ಡಾಯ; ಆಡಳಿತ ಮಂಡಳಿಯಿಂದ ಸೂಚನೆ

Opinion: ಯುವ ರಾಜಕಾರಣಿಗಳಿಗೆ ಕೊಂಚ ನಿರಾಸೆ ಮೂಡಿಸಿದ ರಾಜ್ಯ ಸರ್ಕಾರ; ಏಕೆ? ಇಲ್ಲಿದೆ ಓದಿ

(Three BESCOM officials suspended for illegally amending electricity bill)

Published On - 5:06 pm, Sat, 4 September 21