ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಪ್ರಕರಣ; ಸಿಸಿಬಿಗೆ ಮಹತ್ವದ ಸುಳಿವು ಲಭ್ಯ

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಪ್ರಕರಣ; ಸಿಸಿಬಿಗೆ ಮಹತ್ವದ ಸುಳಿವು ಲಭ್ಯ
ಸಿಸಿಬಿ ವಿಭಾಗ

ಸಿಸಿಬಿ ಅಧಿಕಾರಿಗಳು ಹಂತ ಹಂತವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮೊಬೈಲ್ ರಿಟ್ರೀವ್ ಮಾಡಿ ಡಿಟೇಲ್ಸ್ ಟ್ಯಾಲಿ ಮಾಡಲಾಗುತ್ತಿದೆ.

TV9kannada Web Team

| Edited By: sandhya thejappa

May 26, 2022 | 11:08 AM

ಬೆಂಗಳೂರು: ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರಿಗೆ (CCB Police) ಮಹತ್ವದ ಸುಳಿವು ಲಭ್ಯವಾಗಿದೆ. ತನಿಖೆ ವೇಳೆ ಸಿಸಿಬಿ ತಂಡ ಮತ್ತೆರಡು ವಿಷಯಗಳ ಪ್ರಶ್ನೆ ಪತ್ರಿಕೆ (Question Paper) ಸೋರಿಕೆಯಾಗಿರುವ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಮಲ್ಲೇಶ್ವರಂ ಪೊಲೀಸರು ಬಂಧಿಸಿದ್ದ ಇಬ್ಬರು ಆರೋಪಿಗಳು ತನಿಖಾಧಿಕಾರಿಗಳ ಮುಂದೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. ಪೊಲೀಸ್ ಕಮಿಷನರ್ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿದ್ದರು. ಈ ನಿಟ್ಟಿನಲ್ಲಿ ಸಿಸಿಬಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಸಿಸಿಬಿ ಅಧಿಕಾರಿಗಳು ಹಂತ ಹಂತವಾಗಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಪ್ರಕರಣ ಸಂಬಂಧ ಮತ್ತಷ್ಟು ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸದ್ಯ ಮೊಬೈಲ್ ರಿಟ್ರೀವ್ ಮಾಡಿ ಡಿಟೇಲ್ಸ್ ಟ್ಯಾಲಿ ಮಾಡಲಾಗುತ್ತಿದೆ. ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಿಸಿಬಿ ಪತ್ರ ಬರೆದಿದೆ. ಕೆಇಎಯಿಂದ ಉತ್ತರ ಬಾರದ ಹಿನ್ನೆಲೆ ನೋಟಿಸ್ ನೀಡುವ ಸಾಧ್ಯತೆಯೂ ಇದೆ.

ಕೆಲ ಶಂಕಿತ ಅಭ್ಯರ್ಥಿಗಳ OMR ಶೀಟ್​ಗಳನ್ನ ನೀಡುವಂತೆ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಒಎಂಆರ್ ಶೀಟ್ಗಳನ್ನು ಪಡೆದು ಸಿಸಿಬಿ ಅಧಿಕಾರಿಗಳು ತಾಳೆ ಹಾಕಲಿದ್ದಾರೆ.

ಇದನ್ನೂ ಓದಿ: ಮಂಕಿಪಾಕ್ಸ್ ಹಾಗೂ ಕೊರೊನಾ ಸೋಂಕು ಏಕಕಾಲಕ್ಕೆ ದೇಹದಲ್ಲಿರಬಹುದೇ?

ಆರೋಪಿ ಸೌಮ್ಯ ಬಂಧನ: ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಪೇಪರ್ ಸೋರಿಕೆ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸೌಮ್ಯರನ್ನು ಬೆಂಗಳೂರಿನ ಮಲ್ಲೇಶ್ವರಂ ಠಾಣೆ ಪೊಲೀಸರು ಬಂಧಿಸಿದ್ದರು. ಪೊಲೀಸರು ಮೈಸೂರಿನಲ್ಲಿ ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದರು. ಆರೋಪಿ ಸೌಮ್ಯ ಮೈಸೂರು ವಿವಿ ಭೂಗೋಳಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರು ವಿವಿಯಲ್ಲಿ ಎಂಎಸ್​ಸಿ ಓದಿರುವ ಸೌಮ್ಯ, ಪ್ರೊಫೆಸರ್ ಹೆಚ್.ನಾಗರಾಜ್ ಎಂಬುವರ ಬಳಿ ಪಿಹೆಚ್​ಡಿ ಮುಗಿಸಿದ್ದಾರೆ. ಜಿಐಎಸ್ ಅಂಡ್ ಅಗ್ರಿಕಲ್ಚರ್ ಜಿಯಾಗ್ರಫಿಯಲ್ಲಿ ಪಿಹೆಚ್​ಡಿ ಮಾಡಿದ್ದಾರೆ. ಸದ್ಯ ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ಮಾಡುತ್ತಿದ್ದಾರೆ.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada