AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವ ಜಮೀರ್​ ಆರೋಪ ಬೆನ್ನಲ್ಲೇ ಸಿಸಿಬಿ ಭರ್ಜರಿ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡನ ಸಹೋದರ ವಶಕ್ಕೆ

ಸಚಿವ ಜಮೀರ್ ಅಹ್ಮದ್ ಖಾನ್ ಆರೋಪದ ಬೆನ್ನಲ್ಲೇ ಸಿಸಿಬಿ ಬೆಂಗಳೂರಿನಲ್ಲಿ ಬೃಹತ್ ಕಾರ್ಯಾಚರಣೆ ನಡೆಸಿದೆ. ಪಾದರಾಯನಪುರ ಮತ್ತು ಜೆಜೆ ನಗರದಲ್ಲಿ ನಡೆದ ದಾಳಿಯಲ್ಲಿ ಮಾಜಿ ಕಾರ್ಪೊರೇಟರ್​ ಸಹೋದರನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ರೌಡಿಶೀಟರ್‌ಗಳು, ಡ್ರಗ್ ಪೆಡ್ಲರ್‌ಗಳು ಹಾಗೂ ನ್ಯಾಯಾಲಯಕ್ಕೆ ಗೈರುಹಾಜರಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಜಮೀರ್​ ಆರೋಪ ಬೆನ್ನಲ್ಲೇ ಸಿಸಿಬಿ ಭರ್ಜರಿ ಕಾರ್ಯಾಚರಣೆ: ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡನ ಸಹೋದರ ವಶಕ್ಕೆ
ಸಿಸಿಬಿ ಪೊಲೀಸರಿಂದ ಕಾರ್ಯಾಚರಣೆImage Credit source: tv9 kannada
ಪ್ರದೀಪ್​ ಚಿಕ್ಕಾಟಿ
| Edited By: |

Updated on: Oct 09, 2026 | 6:56 PM

Share

ಮುಖ್ಯಾಂಶಗಳು

  • ಪಾದರಾಯನಪುರ, ಜೆ‌‌.ಜೆ.ನಗರದಲ್ಲಿ ಸಿಸಿಬಿ ಪೊಲೀಸರ ಕಾರ್ಯಾಚರಣೆ
  • ಕಾಂಗ್ರೆಸ್ ಮುಖಂಡನ ಸಹೋದರ ಮೌಸೀನ್ ಪಾಷಾ ಸಿಸಿಬಿ ವಶಕ್ಕೆ
  • ದಾಳಿ ವೇಳೆ ಸಿಸಿಬಿ ಪೊಲೀಸರಿಗೆ ಮೌಸೀನ್ ಪಾಷಾ ಆವಾಜ್‌

ಬೆಂಗಳೂರು, ಅಕ್ಟೋಬರ್​​ 09: ಸಚಿವ ಜಮೀರ್‌ ಅಹ್ಮದ್ ಖಾನ್​ ಇತ್ತೀಚೆಗೆ ತಮ್ಮ ಮತಕ್ಷೇತ್ರವಾದ ಚಾಮರಾಜನಗರಪೇಟೆಯಲ್ಲಿ ಸಾಕಷ್ಟು ಕ್ರಿಮಿನಲ್​ ಚುಟುವಟಿಕೆಗಳು ನಡೆಯುತ್ತಿವೆ ಎಂದು ಆರೋಪ ಮಾಡಿದ್ದರು. ಆ ಬೆನ್ನಲ್ಲೇ ಇದೀಗ ಪಾದರಯನಪುರ ಮತ್ತು ಜೆ‌‌.ಜೆ ನಗರದಲ್ಲಿ ಸಿಸಿಬಿ ಕಾರ್ಯಚರಣೆ  ಮಾಡಿದ್ದು, ಕಾಂಗ್ರೆಸ್ ಮುಖಂಡನ ಸಹೋದರ ಮೌಸೀನ್ ಪಾಷಾನನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಸಿಸಿಬಿ ಅಧಿಕಾರಿಗಳಿಂದ ಭರ್ಜರಿ ಕಾರ್ಯಚರಣೆ: 535 ಕಡೆ ದಾಳಿ 

ಸಚಿವ ಜಮೀರ್‌ ಅಹ್ಮದ್ ಖಾನ್​​ ಆರೋಪ ಹಿನ್ನೆಲೆ ಇಂದು ಕಾರ್ಯಾಚರಣೆಗೆ ಇಳಿದ ಸಿಸಿಬಿ ಅಧಿಕಾರಿಗಳ ತಂಡ ಪಾದರಯನಪುರ ಮತ್ತು ಜೆ‌‌.ಜೆ ನಗರದಲ್ಲಿ 535 ಕಡೆ ದಾಳಿ ನಡೆಸಿ ಪರಿಶೀಲಿಸಿದ್ದಾರೆ. ಈ ವೇಳೆ ಗಲಾಟೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಕಾಂಗ್ರೆಸ್ ಮುಖಂಡನ ಸಹೋದರ ಮೌಸೀನ್ ಪಾಷಾ ನನ್ನು ಸಿಸಿಬಿ ವಶಕ್ಕೆ ಪಡೆದುಕೊಂಡಿದೆ.

LIVE TV

ಮೌಸೀನ್ ಪಾಷಾ ಹಿನ್ನೆಲೆ ಏನು?

ಚಾಮರಾಜನಗರಪೇಟೆಯ ಕಾಂಗ್ರೆಸ್ ಮಾಜಿ ಕಾರ್ಪೊರೇಟರ್ ಇಮ್ರಾನ್ ಪಾಷಾನ ಸಹೋದರ ಈ ಮೌಸೀನ್ ಪಾಷಾ. ಗಲಾಟೆ ಪ್ರಕರಣವೊಂದಲ್ಲಿ ಈತ ತಲೆಮರೆಸಿಕೊಂಡಿದ್ದ. ಎರಡೆರಡೂ ವಾರಂಟ್‌ ಇದ್ದರೂ ಕೋರ್ಟ್‌ಗೆ ಹಾಜರಾಗದೆ ಉದ್ಧಟತನ ಮೆರೆದಿದ್ದ. ಅಷ್ಟೇ ಅಲ್ಲದೆ ದಾಳಿ ವೇಳೆ ಕೂಡ ಸಿಸಿಬಿ ಪೊಲೀಸರಿಗೆ ಮೌಸೀನ್ ಪಾಷಾ ಆವಾಜ್‌ ಹಾಕಿದ್ದಾನೆ. ಆತನ ಪುಂಡಾಟಕ್ಕೆ ಜಗ್ಗದ ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಫಾರಂ 7 ಸಲ್ಲಿಕೆ ಕೇಸ್​: ಕಾಂಗ್ರೆಸ್ ಮುಖಂಡನ ದೂರು ಆಧರಿಸಿ ದಾಖಲಾಗಿದ್ದ ಎಫ್ಐಆರ್​ಗೆ ಹೈಕೋರ್ಟ್ ತಡೆ

ಇನ್ನು ಬೆಂಗಳೂರು ಪಶ್ಚಿಮ ವಿಭಾಗದ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರು ದಾಳಿ ಮಾಡುವ ಮೂಲಕ ರೌಡಿಶೀಟರ್‌ಗಳು ಮತ್ತು ನ್ಯಾಯಾಲಯಕ್ಕೆ ಗೈರು ಹಾಜರಾಗಿರುವವರು, ಡ್ರಗ್ ಪೆಡ್ಲರ್‌ಗಳು, ಕ್ರಿಮಿನಲ್ ಹಿನ್ನೆಲೆಯುಳ್ಳವರ ಪರಿಶೀಲನೆ ಮಾಡಿದ್ದಾರೆ. ದಾಳಿ ವೇಳೆ ಕೊಲೆ, ಗಲಾಟೆ ಕೇಸ್‌ನಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಗೈರಾಗಿದ್ದ ಇಬ್ಬರ ಪತ್ತೆ ಹಚ್ಚಲಾಗಿದೆ. ಜೊತೆಗೆ ಇಬ್ಬರು ಡ್ರಗ್ ಪೆಡ್ಲರ್‌ಗಳನ್ನು ಪತ್ತೆ ಮಾಡಿ ಎಲ್ಲರನ್ನ ಸಿಸಿಬಿ ವಶಕ್ಕೆ ಪಡೆದಿದೆ. ಇನ್ನು ವಿವಿಧ ಕಾನೂನು ಉಲ್ಲಂಘಿಸಿದ್ದವರ ವಿರುದ್ಧವೂ ಸಿಸಿಬಿಯಿಂದ ಕ್ರಮ ಕೈಗೊಳ್ಳಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ಪ್ರದೀಪ್​ ಚಿಕ್ಕಾಟಿ
ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More