ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ; 6 ಲಕ್ಷ ನಗದು, ಮೊಬೈಲ್ ಪೊಲೀಸ್ ವಶಕ್ಕೆ

| Updated By: preethi shettigar

Updated on: Nov 15, 2021 | 11:57 AM

ವಿಜಯನಗರದ ಆರ್​ಪಿಸಿ ಲೇಔಟ್ ಬಳಿ ಮೊಬೈಲ್ ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಆಡಿಸುತ್ತಿದ್ದ ಆರೋಪಿ ಸದ್ಯ ಪೊಲೀಸ್​ ಅತಥಿಯಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ಆರೋಪಿ ಬಂಧನ; 6 ಲಕ್ಷ ನಗದು, ಮೊಬೈಲ್ ಪೊಲೀಸ್ ವಶಕ್ಕೆ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ(Betting) ತೊಡಗಿದ್ದ ಆರೋಪಿ ಸಿಸಿಬಿ ಪೊಲೀಸರ ಕಾರ್ಯಾಚರಣೆ ವೇಳೆ ಸೆರೆ ಸಿಕ್ಕಿದ್ದಾನೆ. ಸಿಸಿಬಿ ಪೊಲೀಸರು ಟಿ ಟ್ವೆಂಟಿ ಕ್ರಿಕೆಟ್ ಫೈನಲ್ ಪಂದ್ಯದ ಜೂಜಾಟ ಆಡುತ್ತಿದ್ದ ಹೇಮಂತ್​ನನ್ನು ಬಂಧಿಸಿದ್ದಾರೆ. ಬಂಧಿತನಿಂದ 6 ಲಕ್ಷ ನಗದು ಹಾಗೂ ಮೊಬೈಲ್ ಅನ್ನು ಪೊಲೀಸರು (Karnataka Police) ವಶಕ್ಕೆ ಪಡೆದಿದ್ದಾರೆ. ವಿಜಯನಗರದ ಆರ್​ಪಿಸಿ ಲೇಔಟ್ ಬಳಿ ಮೊಬೈಲ್ (Mobile) ಮೂಲಕ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಆಡಿಸುತ್ತಿದ್ದ ಆರೋಪಿ ಸದ್ಯ ಪೊಲೀಸ್​ ಅತಥಿಯಾಗಿದ್ದು, ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಯಚೂರು: ರೈತರ ಹೊಲದಲ್ಲಿ ಪಂಪಸೆಟ್ ಕಳ್ಳತನ ಮಾಡುತ್ತಿದ್ದವರು ಲಾಕ್
ರೈತರ ಹೊಲದಲ್ಲಿ ಪಂಪ್‌ಸೆಟ್ ಕಳ್ಳತನ ಮಾಡುವಾಗ ರೆಡ್‌ಹ್ಯಾಂಡಾಗಿ ಕಳ್ಳರು ಗ್ರಾಮಸ್ಥರ ಬಳಿ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ನಾಗಲದಿನ್ನಿ ಗ್ರಾಮದಲ್ಲಿ ಇಬ್ಬರು ಕಳ್ಳರನ್ನು ಹಿಡಿದು ಗ್ರಾಮಸ್ಥರು ಪೊಲೀಸರಿಗೊಪ್ಪಿಸಿದ್ದಾರೆ. ಈ ಸಂಬಂಧ ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆ: ಅಡಿಕೆ ಕಳ್ಳರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ತೇಜಸ್ವಿ ಪಟೇಲ್
ದಾವಣಗೆರೆ ಜಿಲ್ಲೆಯಲ್ಲಿ ಅಡಿಕೆ ಕಳ್ಳತನ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದೆ. ಹೀಗಾಗಿ ಅಡಿಕೆ ಕಳ್ಳರ ವಿರುದ್ಧ ಕ್ರಮಕ್ಕೆ ರೈತ ಮುಖಂಡ ತೇಜಸ್ವಿ ಪಟೇಲ್ ಆಗ್ರಹಿಸಿದ್ದಾರೆ. ಕ್ವಿಂಟಾಲ್ ಅಡಿಕೆ 50 ಸಾವಿರ ರೂಪಾಯಿ ಗಡಿ ದಾಟಿದ ಹಿನ್ನೆಲೆ ದಾವಣಗೆರೆ ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ಮಾಯಕೊಂಡ ಸಂತೆಬೆನ್ನೂರು ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಹೆಚ್ಚಾಗಿದೆ.

ಚಿಕ್ಕಮಗಳೂರು: ಪ್ರತಿಭಟನೆ ಮಾಡಿದ ಮಹಿಳೆಯರ ಮೇಲೆ ದೌರ್ಜನ್ಯ ಆರೋಪ
ತಮ್ಮ ಗ್ರಾಮಕ್ಕೆ ಬಾರ್ ಬೇಡವೆಂದು ಪ್ರತಿಭಟನೆ ಮಾಡಿದ ಮಹಿಳೆಯರ ಮೇಲೆ ದೌರ್ಜನ್ಯ ಆರೋಪ ಕೇಳಿಬಂದಿದೆ. ಮನೆ ಬಾಗಿಲು ಮುರಿದು ಪೊಲೀಸರು ಗೂಂಡಾಗಿರಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಮುಸ್ಲಾಪುರ ಗ್ರಾಮದಲ್ಲಿಅಪ್ರಾಪ್ತರು, ಮಹಿಳೆಯರು ಸೇರಿ 7 ಜನರನ್ನು ಎಳೆದೊಯ್ದು  ಪೊಲೀಸರು ಗೂಂಡಾಗಿರಿ ಮಾಡಿದ್ದಾರೆ ಎಂದು ಕಡೂರು ಪಿಎಸ್‌ಐ ರಮ್ಯಾ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸ್

Nisha Dahiya Murder: ಸೋನಿಪತ್​ನಲ್ಲಿ ಕುಸ್ತಿಪಟು ನಿಶಾ ದಹಿಯಾ ಕೊಲೆ ಪ್ರಕರಣ; ಕೋಚ್ ಪವನ್ ಸೇರಿ ಆರೋಪಿಗಳ ಬಂಧನ

Published On - 8:52 am, Mon, 15 November 21