ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸ್

ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಭಿಕ್ಷುಕ ದಂಪತಿಯನ್ನು ವಶಕ್ಕೆ ಪಡೆದ ಪೊಲೀಸ್
ದುಶ್ಚಟಗಳ ದಾಸನಾಗಿರುವ ಭಿಕ್ಷುಕ ತಂದೆಯಿಂದ ಹೆಣ್ಣು ಮಗು ಮಾರಾಟ, ಮಗು ಬೇಕೆಂದು ಕಣ್ಣೀರಿಡುತ್ತಿರುವ ಮಹಿಳೆ

ಕೊಪ್ಪಳದ ಜಿಲ್ಲಾಸ್ಪತ್ರೆ ಬಳಿ ನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ದಂಪತಿಯ ಮಗುವೊಂದು ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಮಕ್ಕಳ ಸಹಾಯವಾಣಿ ತಂಡ ಬೆಳಕಿಗೆ ತಂದಿದೆ. ನಾಲ್ಕು ವರ್ಷದ ಹೆಣ್ಣು ಮಗುವನ್ನು ತಂದೆ ಮಂಜುನಾಥ ನರ್ಸ್ ಮೂಲಕ ಹೊಸಪೇಟೆ ಪೊಲೀಸ್ ಪೇದೆಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

TV9kannada Web Team

| Edited By: Ayesha Banu

Nov 14, 2021 | 12:28 PM

ಕೊಪ್ಪಳ: ಇವತ್ತು ಮಕ್ಕಳ ದಿನಾಚರಣೆ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಸಿಹಿ ತಿನಿಸಿ ಶುಭ ಹಾರೈಸುತ್ತಿರುತ್ತಾರೆ. ಆದ್ರೆ ಇಲ್ಲಿ ಮದ್ಯಪಾನ ದುಶ್ಚಟಗಳ ದಾಸನಾಗಿರುವ ಭಿಕ್ಷುಕನೊಬ್ಬ ತನ್ನ ಮಗುವನ್ನೇ ಮಾರಿದ ಘಟನೆ ಕೊಪ್ಪಳದಲ್ಲಿ ನಡೆದಿದ್ದು ಇದೀಗ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಕೊಪ್ಪಳದ ಜಿಲ್ಲಾಸ್ಪತ್ರೆ ಬಳಿ ನಿತ್ಯ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ದಂಪತಿಯ ಮಗುವೊಂದು ಮಾರಾಟವಾಗಿರುವ ಶಂಕೆ ವ್ಯಕ್ತವಾಗಿದ್ದು, ಮಕ್ಕಳ ಸಹಾಯವಾಣಿ ತಂಡ ಬೆಳಕಿಗೆ ತಂದಿದೆ. ನಾಲ್ಕು ವರ್ಷದ ಹೆಣ್ಣು ಮಗುವನ್ನು ತಂದೆ ಮಂಜುನಾಥ ನರ್ಸ್ ಮೂಲಕ ಹೊಸಪೇಟೆ ಪೊಲೀಸ್ ಪೇದೆಯೊಬ್ಬರಿಗೆ ಮಾರಾಟ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಮಗುವಿನ ತಾಯಿ ಭದ್ರಮ್ಮ ಮಗು ಕಾಣದಿದ್ದಾಗಿ ತನ್ನ ಪತಿ ಮಂಜುನಾಥನಿಗೆ ಮಗು ಬೇಕು ಅಂತಾ ಗಲಾಟೆ ಮಾಡಿದ್ದಾಳೆ. ಆಗ ಸ್ಥಳದಲ್ಲಿದ್ದ ಸಾರ್ವಜನಿಕರು ಅನುಮಾನಗೊಂಡು ಮಕ್ಕಳ ಸಹಾಯವಾಣಿ 1098ಗೆ ಕರೆ ಮಾಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಸಹಾಯವಾಣಿ ತಂಡ ಮಂಜುನಾಥನನ್ನು ವಿಚಾರಿಸಿದೆ. ನನ್ನ ಪತಿಯೇ ಹಣಕ್ಕಾಗಿ ಮಗುವನ್ನು ಮಾರಿದ್ದಾನೆ ಅಂತಾ ಭದ್ರಮ್ಮ ಹೇಳಿದ್ದಾರೆ. ಜೊತೆಗೆ ಮಂಜುನಾಥನ ಬಳಿ 30 ಸಾವಿರ ಹಣ ಕೂಡ ಸಿಕ್ಕಿದೆ. ಇದರಿಂದ ಅನುಮಾನಗೊಂಡ ಸಹಾಯವಾಣಿ ತಂಡ ದಂಪತಿಯನ್ನು ಪೊಲೀಸ್ ಠಾಣೆಗೆ ಕರೆದೋಯ್ಯುದಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಮಂಜುನಾಥ ಮದ್ಯಪಾನ ದಾಸನಾಗಿದ್ದ ಹಿನ್ನೆಲೆ ಮಗುವನ್ನು ಮಾರಾಟ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದೀಗ ಮಗುವನ್ನು ಪಡೆದ ಪೊಲೀಸ್ ಪೇದೆ ಹಾಗೂ ನರ್ಸ್ ನ್ನು ಪೊಲೀಸರು ವಿಚಾರಣೆ ಮಾಡಿರುವ ಮಾಹಿತಿ ಇದೆ. ಇನ್ನು ಮಗುವನ್ನು ಖರೀದಿಸಿರುವ ಬಾಂಡ್ ಕೂಡ ಸಿಕ್ಕಿರುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಒಟ್ಟಾರೆ ಈ ಘಟನೆ ಸಂಪೂರ್ಣ ತನಿಖೆಯಾಗಬೇಕಾಗಿದೆ‌. ನಂತರವೇ ಸತ್ಯಸತ್ಯಾತೆ ಹೊರಬರಲಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ಈ ವಿಚಾರಣೆ ನಡೆಸಲಾಗುತ್ತಿದೆ.

ಇನ್ನು ಈ ಬಗ್ಗೆ ಮಾತನಾಡಿದ ಮಕ್ಕಳ ಸಹಾಯವಾಣಿ ಅಧಿಕಾರಿ ಶರಣಪ್ಪ, 1098 ಗೆ ಕರೆ ಬಂದಾಗ ಸ್ಥಳಕ್ಕೆ ಹೋಗಿ ವಿಚಾರಣೆ ಮಾಡಿದಾಗ ಮಕ್ಕಳ ಮಾರಾಟ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಭಿಕ್ಷುಕನ ಕೈಯಲ್ಲಿ 27 ಸಾವಿರ ಹಣ ಹೇಗೆ ಬಂದಿದೆ ಅನ್ಮೋದು ತನಿಖೆಯಾಗ್ತಿದೆ. ಮಕ್ಕಳ ಮಾರಾಟ ಕಾನೂನು ಅಪರಾಧವಾಗಿದ್ದು, ತನಿಖೆ ನಡೆಯುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

Follow us on

Related Stories

Most Read Stories

Click on your DTH Provider to Add TV9 Kannada