ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ! 64 ಯುವಕರು, 24 ಯುವತಿಯರು ಪತ್ತೆ

| Updated By: sandhya thejappa

Updated on: Apr 09, 2022 | 4:48 PM

ಬೆಳಗಿನ ಜಾವ 3.30ರವರೆಗೂ ಪಾರ್ಟಿ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಪಾರ್ಟಿಯನ್ನು ಆಯೋಜಿಸಿದ್ದ. ಪಾರ್ಟಿಯಲ್ಲಿ ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚಾಗಿದ್ದರು.

ಬೆಂಗಳೂರಿನಲ್ಲಿ ಆಫ್ಟರ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ! 64 ಯುವಕರು, 24 ಯುವತಿಯರು ಪತ್ತೆ
ಪಾರ್ಟಿಯ ವೇಳೆ ದಾಳಿ ನಡೆಸಿದ ಸಿಸಿಬಿ ಪೊಲೀಸರ ಜೊತೆ ವಾಗ್ದಾಳಿ ನಡೆಸಿದ ಯುವತಿಯರು
Follow us on

ಬೆಂಗಳೂರು: ನಗರದಲ್ಲಿ ಆಫ್ಟರ್ ಪಾರ್ಟಿ (After Party) ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 64 ಯುವಕರು, 24 ಯುವತಿಯರು ಪತ್ತೆಯಾಗಿದ್ದಾರೆ. ಮಾರತ್ತಹಳ್ಳಿ ಔಟರ್ರಿಂಗ್ ರಸ್ತೆಯ ಐಷಾರಾಮಿ ಹೋಟೆಲ್​ನಲ್ಲಿ ಭರ್ಜರಿ ಪಾರ್ಟಿ ನಡೆಯುತ್ತಿತ್ತು. ಬೆಳಗಿನ ಜಾವ 3.30ರವರೆಗೂ ಪಾರ್ಟಿ ನಡೆಯುತ್ತಿತ್ತು. ದಕ್ಷಿಣ ಆಫ್ರಿಕಾ ಮೂಲದ ವ್ಯಕ್ತಿಯೊಬ್ಬ ಪಾರ್ಟಿಯನ್ನು ಆಯೋಜಿಸಿದ್ದ. ಪಾರ್ಟಿಯಲ್ಲಿ ಉತ್ತರ ಭಾರತ ಮೂಲದ ಯುವತಿಯರೇ ಹೆಚ್ಚಾಗಿದ್ದರು. ಡ್ರಗ್ಸ್ ಸೇವಿಸಿ ಪಾರ್ಟಿ ಮಾಡಿರುವ ಅನುಮಾನ ಹಿನ್ನೆಲೆ ಸಿಸಿಬಿ ಪೊಲೀಸರು ಮೆಡಿಕಲ್ ಚೆಕಪ್ ಮಾಡಿಸಲು ಮುಂದಾಗಿದ್ದಾರೆ.

ದಾಳಿ ವೇಳೆ ಸಿಸಿಬಿ ಅಧಿಕಾರಿಗಳ ಜತೆ ಆರೋಪಿಗಳು ವಾಗ್ವಾದ ನಡೆಸಿದ್ದಾರೆ. ಸದ್ಯ ಅಧಿಕಾರಿಗಳು ಹೋಟೆಲ್​ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಹೋಟೆಲ್ ಮಾಲೀಕ ವೆಂಕಟೇಶ್ ವಶಕ್ಕೆ:
ಇನ್ನು ಕಾಮೆಟ್ ಹೋಟೆಲ್ ಮಾಲೀಕ ವೆಂಕಟೇಶ್ ಹಾಗೂ ಪಾರ್ಟಿ ಆಯೋಜಿಸಿದ್ದ ಡೇನಿಯಲ್​ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರೂಫ್ ಟಾಪ್​ನಲ್ಲಿ ತಡರಾತ್ರಿ ಮದ್ಯ ಮಾರಾಟಕ್ಕೆ ಪರವಾನಗಿ ಇಲ್ಲದಿದ್ದರೂ ಪಾರ್ಟಿಯಲ್ಲಿ ಮದ್ಯ ಸರಬರಾಜು ಮಾಡಲಾಗಿದೆ.

ನಾಲ್ವರು ಅರೆಸ್ಟ್!
ಹೋಟೆಲ್ ಮಾಲೀಕ ಸೇರಿದಂತೆ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.  ಮಾಲೀಕ ವೆಂಕಟೇಶ್, ಕ್ಯಾಶಿಯರ್ ಪರಮೇಶ್ವರ್ ರಾಣಾ, ಪಾರ್ಟಿ ಆಯೋಜಕ ಡೇನಿಯಲ್, ಶಶಾಂಕ್ ಬಂಧಿತರು. ನಾಪತ್ತೆಯಾಗಿರುವ ಆರೋಪಿ ಡಿಜೆ ಅಮನ್​ಗಾಗಿ ಶೋಧಕಾರ್ಯ ಮುಂದುವರೆದಿದೆ.

ಎಫ್​ಡಿಸಿ ಸೆಂಟರ್​ನಲ್ಲಿ ವಿದೇಶಿ ನೈಜಿರಿಯನ್ ಪ್ರಜೆಗಳ ಪುಂಡಾಟ:
ನೆಲಮಂಗಲ: ಎಫ್​ಡಿಸಿ ಸೆಂಟರ್​ನಲ್ಲಿ ವಿದೇಶಿ ನೈಜಿರಿಯನ್ ಪ್ರಜೆಗಳು ಪುಂಡಾಟ ಮಾಡಿದ್ದಾರೆ. ಎಫ್​ಡಿಸಿ ಸೆಂಟರ್ ವಾರ್ಡನ್ ಜಯರಾಮ್ ಅವರು ಠಾಣೆಗೆ ದೂರು ನೀಡಿದ್ದು, ಮೂರು ಜನ ವಿದೇಶಿ ಪ್ರಜೆಗಳನ್ನ ಮಾದನಾಯಕನಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.  ವೀಸಾ ಅವಧಿ ಮುಗಿದ ವಿದೇಶಿಗರು ಪುನರ್ವಸತಿ ಕೇಂದ್ರದಲ್ಲಿ ಪುಂಡಾಟ ಮಾಡುತ್ತಿದ್ದರು. ಅಡುಗೆ ಮನೆ, ಅಧಿಕಾರಿಗಳ ಕಚೇರಿ, ಶೌಚ ಗೃಹಕ್ಕೆ ಬೀಗ ಹಾಕುವುದು. ಮಹಿಳಾ ಸಿಬ್ಬಂದಿಗಳ ಮುಂದೆ ಅರೆನಗ್ನ ಸ್ಥಿತಿಯಲ್ಲಿ ಅಸಭ್ಯವಾಗಿ ವರ್ತಿಸುವುದು. ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಳ್ಳಲು ಪ್ರೇರೇಪಿಸುವುದು. ಹೀಗೆ ಹಲವು ಪುಂಡಾಟಗಳನ್ನ ಮೆರೆದಿದ್ದ ವಿದೇಶಿಗರು ಜೈಲು ಪಾಲಾಗಿದ್ದಾರೆ.

10 ಲಕ್ಷ ಎಗರಿಸಿದ ಕಳ್ಳ:
ಗದಗ: ಚಲಿಸುತ್ತಿರುವ ಬೈಕ್​ನ ಸೈಡ್ ಬ್ಯಾಗ್​ನಲ್ಲಿದ್ದ 10 ಲಕ್ಷ ರೂಪಾಯಿಯನ್ನು ಕಳ್ಳ ಕದ್ದು ಪರಾರಿಯಾಗಿದ್ದಾನೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಿನ್ನೆ ಈ ಘಟನೆ ನಡೆದಿದೆ. ರಾಮನಗೌಡ ಪಾಟೀಲ್ ಎಂಬುವರ ಬ್ಯಾಗ್​ನಿಂದ ಹಣ ಕದ್ದು ಪರಾರಿಯಾಗಿದ್ದಾನೆ. ಕಳ್ಳನ ಕೈಚಳಕ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ರಾಜೇಂದ್ರ ಕಾಟನ್ ಇಂಡಸ್ಟ್ರೀಸ್​ನ ಅಕೌಂಟ್​ನಿಂದ ಹಣ ಡ್ರಾ ಮಾಡಿಕೊಂಡು ಬರೋವಾಗ ಘಟನೆ ನಡೆದಿದೆ. ರಾಮನಗೌಡ ಪಾಟೀಲ್ ರಾಜೇಂದ್ರ ಕಾಟನ್ ಇಂಡಸ್ಟ್ರೀಸ್​ನಲ್ಲಿ ಕಾರ್ಕೂನ್ ಆಗಿ ಕೆಲಸ ಮಾಡುತ್ತಿದ್ದಾರೆ. ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಟ್ವಿಟರ್​ ಖಾತೆ ಹ್ಯಾಕ್​; ಹ್ಯಾಕರ್ಸ್​​ಗಳಿಂದ 100ಕ್ಕೂ ಹೆಚ್ಚು ಟ್ವೀಟ್​ಗಳು !

ಜವಾಹಿರಿ ಬದುಕಿಲ್ಲ, ಸತ್ತಿದ್ದಾನೆ ಅಂತ ಎಲ್ಲಿ ನಿಂತು ಬೇಕಾದರೂ ಚಾಲೆಂಜ್ ಮಾಡುತ್ತೇನೆ: ಲಕ್ಷ್ಮಣ್, ಕೆಪಿಸಿಸಿ ವಕ್ತಾರ

Published On - 8:40 am, Sat, 9 April 22