Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ; ತಮಿಳುನಾಡು, ತೆಲಂಗಾಣ ರಾಜ್ಯಗಳ ವಿರುದ್ದ ಸಿಎಂ ಕಿಡಿ

ಯಾರು ಏನೇ ಹುನ್ನಾರ ಮಾಡಿದ್ರು ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾರೇ ಏನೇ ಅಭಿಯಾನ ಮಾಡಿದ್ರು ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರಿಯುತ್ತದೆ.

ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ; ತಮಿಳುನಾಡು, ತೆಲಂಗಾಣ ರಾಜ್ಯಗಳ ವಿರುದ್ದ ಸಿಎಂ ಕಿಡಿ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Apr 08, 2022 | 4:17 PM

ಬೆಂಗಳೂರು: ಇನ್ನೊಂದು ರಾಜ್ಯ (State) ವನ್ನ ತೆಗಳಿ ಕರೆಯುವ ಅವಶ್ಯಕತೆಯಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಹೂಡಿಕೆದಾರರು ಬರುತ್ತಿದ್ದಾರೆ. ಇವತ್ತು ಕೂಡ ಆರ್ಥಿಕ ತಜ್ಞರು ಕರ್ನಾಟಕಕ್ಕೆ ಬರುತ್ತಿದ್ದಾರೆ. ಕರ್ನಾಟಕದ ಪ್ರಗತಿ ಯಾರೂ ನಿಲ್ಲಿಸಲು ಆಗುವುದಿಲ್ಲ. ಯಾರು ಎಷ್ಟೇ ಅಭಿಯಾನ ಮಾಡಿದ್ರು ನಿಲ್ಲಿಸಲು ಆಗಲ್ಲ ಎಂದು ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ತಮಿಳುನಾಡು, ತೆಲಂಗಾಣದ ರಾಜ್ಯಗಳ ವಿರುದ್ದ ಸಿಎಂ ಕಿಡಿಕಾರಿದ್ದು, ತಮಿಳುನಾಡು, ತೆಲಂಗಾಣದವ್ರು ಬಹಳಷ್ಟು ಹತಾಶರಾಗಿದ್ದಾರೆ. ಅವ್ರು ನಮ್ಮ ರಾಜ್ಯವನ್ನು ಕಂಪೇರ್ ಮಾಡೋಕೆ ಆಗೋದಿಲ್ಲ. ಅವ್ರು ಇವಾಗ ಅವರ ರಾಜ್ಯವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ. ನಾನು ನನ್ನ ರಾಜ್ಯದಲ್ಲಿ ಏನು ಒಳ್ಳೆಯದು ಇದೆ, ಅದನ್ನು ಹೇಳಿ ಬಂಡವಾಳ ಹೂಡಿಕೆ ಮಾಡಲು ಕರೆಯಬೇಕು. ನಾವು ಇನ್ನೊಂದು ರಾಜ್ಯವನ್ನು ತೆಗಳಿ ಕರೆಯುವ ಅವಶ್ಯಕತೆ ಇಲ್ಲ ಎಂದರು.

ನಾನು ತಮಿಳುನಾಡು, ತೆಲಂಗಾಣ ದಲ್ಲಿ ಇರೋರನ್ನು ಇಲ್ಲಿಗೆ ಬನ್ನಿ ಎಂದು ನಾನು ಎಲ್ಲಿಯೂ ಹೇಳಿಲ್ಲ. ಅದೇ ನಮ್ಮ ಸ್ಟ್ರೆಂಥ್. ಅವರು ಪಕ್ಕದ ರಾಜ್ಯಕ್ಕೆ ಬನ್ನಿ ಅಂದರೆ ಅದರ ಅರ್ಥ ಯಾರು ಬರ್ತಿಲ್ಲ ಅಂತಾ. ಅಂದರೆ ಅದು ಅವರ ವೀಕ್ನೆಸ್. ನಮಗೆ ಅಂತರರಾಷ್ಟ್ರೀಯ ಜನರು ಹೂಡಿಕೆ ಮಾಡಲು‌ ಬರ್ತಿದ್ದಾರೆ. ಬರುವಂತ ದಿನಗಳಲ್ಲಿ ಇನ್ನಷ್ಟು ದೊಡ್ಡ ಹೂಡಿಕೆ ರಾಜ್ಯಕ್ಕೆ ಬರುತ್ತದೆ. ಬಹಳಷ್ಟು ಪ್ರಫೋಸಲ್ ಕರ್ನಾಟಕಕ್ಕೆ ಬರ್ತಿದೆ, ಇದೇ ಸಾಕ್ಷಿ. ನಮ್ಮ ಶಕ್ತಿ, ಮೂಲಭೂತ ಸೌಕರ್ಯದ ಮೇಲೆ ಜನರು ಇಲ್ಲಿಗೆ ಬರ್ತಿದ್ದಾರೆ. ಯಾರು ಏನೇ ಹುನ್ನಾರ ಮಾಡಿದ್ರು ಕರ್ನಾಟಕ ಪ್ರಗತಿ ನಿಲ್ಲಿಸೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾರೇ ಏನೇ ಅಭಿಯಾನ ಮಾಡಿದ್ರು ಕರ್ನಾಟಕದ ಪ್ರಗತಿ ನಿರಂತರವಾಗಿ ಮುಂದುವರಿಯುತ್ತದೆ. ಮುಂದುವರಿಯುವ ನಿಟ್ಟಿನಲ್ಲಿ ನಾನು ಎಲ್ಲ ರೀತಿಯ ಕ್ರಮಗಳನ್ನು ತೆಗೆದು ಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:

Gadag Jail: ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಬೈಬಲ್​ ಹಂಚುವ ಮೂಲಕ ಮತಾಂತರ ನಡೆಸಿದ ಆರೋಪ

‘ಕೆಜಿಎಫ್​ 2’ ಹಾಗೂ ‘ಬೀಸ್ಟ್​’ ಚಿತ್ರಗಳಿಗೆ ತಮಿಳುನಾಡಿನಲ್ಲಿ ಸಿಗುತ್ತಿರುವ ಚಿತ್ರಮಂದಿರಗಳೆಷ್ಟು? ಇಲ್ಲಿದೆ ವಿವರ