ಬೆಂಗಳೂರಿನಲ್ಲಿ 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಜಪ್ತಿ! ಮೂವರು ಆರೋಪಿಗಳ ಅರೆಸ್ಟ್
1950ರಿಂದ ಮಲೇರಿಯಾಗೆ ಔಷಧವಾಗಿ ಮೆಥಕ್ವಾಲೋನ್ ಡ್ರಗ್ನ ಬಳಸಲಾಗುತ್ತಿತ್ತು. ಮಾದಕ ಲೋಕದ ‘ಐಸ್’ ಎಂದೇ ಖ್ಯಾತಿ ಹೊಂದಿದೆ. ಮೆಥಕ್ವಾಲೋನ್ ಡ್ರಗ್ ಸೇವಿಸಿ 30 ನಿಮಿಷ ಬಳಿಕ ನಶೆ ಏತ್ತದೆ ಎಂಟು ಗಂಟೆಗಳ ಕಾಲ ಮಾದಕ ಲೋಕದಲ್ಲಿ ತೇಲಿಸುತ್ತದೆ.
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಗೋವಿಂದಪುರ ಪೊಲೀಸರು ಸುಮಾರು 35 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ (Drugs) ಜಪ್ತಿ ಮಾಡಿ, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ರಂಜಿತ್ ಬಾನ್ ಗುಪ್ತಾ, ಅಂಡ್ರೆಸ್ ಪಿಲಿಪೋ, ರಾಜೇಶ್ ಬಂಧನಕ್ಕೊಳಗಾಗಿದ್ದು, ಬಂಧಿತರಿಂದ 70 ಕೆಜಿ ಮೆಥಕ್ವಾಲೋನ್ ಡ್ರಗ್, 6.5 ಕೆಜಿ ಎಮ್ಡಿಎಮ್ 75 ಗ್ರಾಂ ಕೊಕೇನ್, 300 ಗ್ರಾಂ ಟ್ರೊಮೊಡೊಲ್ ಡ್ರಗ್ಸ್ನ ವಶಕ್ಕೆ ಪಡೆದಿದ್ದಾರೆ. ಮೆಥಕ್ವಾಲೋನ್ ಡ್ರಗ್ ಒಂದು ಗ್ರಾಂಗೆ 5 ಸಾವಿರ ರೂಪಾಯಿ. 2016ರ ನಂತರ ಇದೇ ಮೊದಲ ಬಾರಿಗೆ ಈ ಡ್ರಗ್ ಪತ್ತೆಯಾಗಿದೆ.
1950ರಿಂದ ಮಲೇರಿಯಾಗೆ ಔಷಧವಾಗಿ ಮೆಥಕ್ವಾಲೋನ್ ಡ್ರಗ್ನ ಬಳಸಲಾಗುತ್ತಿತ್ತು. ಮಾದಕ ಲೋಕದ ‘ಐಸ್’ ಎಂದೇ ಖ್ಯಾತಿ ಹೊಂದಿದೆ. ಮೆಥಕ್ವಾಲೋನ್ ಡ್ರಗ್ ಸೇವಿಸಿ 30 ನಿಮಿಷ ಬಳಿಕ ನಶೆ ಏತ್ತದೆ ಎಂಟು ಗಂಟೆಗಳ ಕಾಲ ಮಾದಕ ಲೋಕದಲ್ಲಿ ತೇಲಿಸುತ್ತದೆ.
ಗಾಂಜಾ ಜಪ್ತಿ: ಮತ್ತೊಂದು ಪ್ರಕರಣದಲ್ಲಿ ಕಾರ್ಯಾಚರಣೆ ನಡೆಸಿದ ಗೋವಿಂದಪುರ ಪೊಲೀಸರು, ಒಡಿಸ್ಸಾ ಮೂಲದ ಮೂವರು ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಬೆಂಗಳೂರಿಗೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಬಳಿಕ ತನ್ನದೇ ಗಿರಾಕಿ ಹುಡುಕಿಕೊಂಡು ಮಾರಾಟ ಮಾಡುತಿದ್ದರು. ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಬಂಧಿತರಿಂದ 1.45 ಕೋಟಿ ಮೌಲ್ಯದ 290 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.
ಕೊಡಗಿನಲ್ಲಿ ಬಾಲಕ ಅನುಮಾನಾಸ್ಪದ ಸಾವು: ಕೊಡಗು: ಕುಶಾಲನಗರ ತಾಲೂಕಿನ ಕೂಡು ಮಂಗಳೂರು ಗ್ರಾಮದಲ್ಲಿ ಬಾಲಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ನೇಣುಬಿಗಿದ ಸ್ಥಿತಿಯಲ್ಲಿ ಬಾಲಕ ಪತ್ತೆಯಾಗಿದ್ದಾನೆ. ಮೂಕಾಂಬಿಕ ಪ್ರೌಢಶಾಲಾ ವಿದಾರ್ಥಿ ಮಂಜುನಾಥ್ (15) ಮೃತ ಬಾಲಕ. ಬಾಲಕನ ಅಜ್ಜ, ಅಜ್ಜಿ ವಿರುದ್ಧ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕನನ್ನು ಹೊಡೆದು ಹತ್ಯೆಗೈದಿರುವ ಆರೋಪ ಕೇಳಿಬಂದಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಲಾಗಿದೆ.
ಇದನ್ನೂ ಓದಿ
Published On - 2:37 pm, Fri, 8 April 22