ಮತ್ತೆ ಶುರು ಲವ್ ಜಿಹಾದ್ ವಿರುದ್ಧ ಸಮರ: ಟಾಸ್ಕ್ ಫೋರ್ಸ್ ಆಕ್ಟಿವ್, ಅನ್ಯಧರ್ಮೀಯರ ಜತೆ ಹಿಂದೂ ಯುವತಿಯರು ಕಂಡರೆ ಮಾಹಿತಿ
ಹಿಂದೂ ಯುವತಿಯರನ್ನು ಲವ್ ಜಿಹಾದ್ಗೆ ಕೆಡವಲು ಸ್ಕೆಚ್ ಹಾಕುವ ಸಾಧ್ಯೆತೆ ಇದೆ. ಹೀಗಾಗಿ ಹಿಂದೂ ಸಂಘಟನೆಗಳು ಌಂಟಿ ಲವ್ ಜಿಹಾದ್ ಟಾಸ್ಕ್ಫೋರ್ಸ್ ಌಕ್ಟಿವ್ ಮಾಡಲು ಮುಂದಾಗಿದ್ದಾರೆ. ರಾಜಶೇಖರಾನಂದಶ್ರೀಗಳು, ವಿಹೆಚ್ಪಿ ಜಂಟಿಯಾಗಿ ಟಾಸ್ಕ್ಫೋರ್ಸ್ ಆರಂಭಿಸಿದ್ದಾರೆ.
ಮಂಗಳೂರು: ಕರಾವಳಿಯಲ್ಲಿ ಧರ್ಮಯುದ್ಧ ಮತ್ತೊಂದು ಮಜಲಿಗೆ ಹೊರಳಿದೆ. ರಾಜ್ಯದಲ್ಲಿ ಲವ್ ಜಿಹಾದ್ ವಿರುದ್ಧದ ಸಮರ ಮತ್ತೆ ಌಕ್ಟಿವ್ ಆಗಿದೆ. ಕರಾವಳಿಯಲ್ಲಿ ಹಿಜಾಬ್, ಹಲಾಲ್, ಆಜಾನ್ ವಿಚಾರಕ್ಕೆ ಹಿಂದೂ ಸಂಘಟನೆಗಳು ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದ್ರೆ ಲವ್ ಜಿಹಾದ್ ವಿರುದ್ಧ ಸದ್ದಿಲ್ಲದೇ ಹಿಂದೂ ಸಂಘಟನೆ ಮಾಸ್ಟರ್ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅನ್ಯಧರ್ಮೀಯರ ಜತೆ ಹಿಂದೂ ಯುವತಿಯರು ಕಂಡರೆ ಮಾಹಿತಿ ನೀಡುವಂತೆ ಅಲರ್ಟ್ ಮಾಡಲಾಗುತ್ತಿದೆ. ಧರ್ಮ ಸಂಘರ್ಷ ಬೆಳವಣಿಗೆ ಬೆನ್ನಲ್ಲೇ ಹಿಂದೂ ಯುವತಿಯರನ್ನು ಲವ್ ಜಿಹಾದ್ಗೆ ಕೆಡವಲು ಸ್ಕೆಚ್ ಹಾಕುವ ಸಾಧ್ಯೆತೆ ಇದೆ. ಹೀಗಾಗಿ ಹಿಂದೂ ಸಂಘಟನೆಗಳು ಌಂಟಿ ಲವ್ ಜಿಹಾದ್ ಟಾಸ್ಕ್ಫೋರ್ಸ್ ಌಕ್ಟಿವ್ ಮಾಡಲು ಮುಂದಾಗಿದ್ದಾರೆ. ರಾಜಶೇಖರಾನಂದಶ್ರೀಗಳು, ವಿಹೆಚ್ಪಿ ಜಂಟಿಯಾಗಿ ಟಾಸ್ಕ್ಫೋರ್ಸ್ ಆರಂಭಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲೂಕಿನ ಗುರುಪುರದ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಏ.5ರಂದು ಭಿನ್ನ ಕೋಮಿನ ಜೋಡಿ ಪೊಲೀಸರಿಗೆ ಒಪ್ಪಿಸಿದ್ದರು. ಎಲ್ಲಾದರೂ ಅನ್ಯಕೋಮಿನ ಜೋಡಿ ಕಂಡುಬಂದರೆ ಌಂಟಿ ಲವ್ ಜಿಹಾದ್ ಟಾಸ್ಕ್ಫೋರ್ಸ್ಗೆ ಮಾಹಿತಿ ರವಾನಿಸುವಂತೆ ಸೂಚಿಸಲಾಗಿದೆ. ಈ ಟಾಸ್ಕ್ಫೋರ್ಸ್, ಜೋಡಿಯನ್ನು ತಡೆದು ಪೊಲೀಸರಿಗೆ ಒಪ್ಪಿಸುತ್ತೆ ಎಂದು ಹಿಂದೂ ಪರ ಸಂಘಟನೆಗಳ ಮೂಲಗಳಿಂದ ಮಾಹಿತಿ ಸಿಕ್ಕಿದೆ.
ಪ್ರಚಲಿತ ಸಂದರ್ಭದಲ್ಲಿ ಪ್ರೀತಿ, ಪ್ರೇಮ, ನಾಟಕ, ಮೋಸ ನಡೆಯೋ ಸಾಧ್ಯತೆ ಇದೆ ಇನ್ನು ಇದಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಪ್ರಚಲಿತ ಸಂದರ್ಭದಲ್ಲಿ ಪ್ರೀತಿ, ಪ್ರೇಮ, ನಾಟಕ, ಮೋಸ ನಡೆಯೋ ಸಾಧ್ಯತೆ ಇದೆ. ಆದ್ರಿಂದ ಹಿಂದೂ ಸಮಾಜದ ಹೆಣ್ಣು ಮಕ್ಕಳು, ವಿದ್ಯಾರ್ಥಿನಿಯರು, ಕೆಲಸಕ್ಕೆ ಹೋಗುವ ಯುವತಿಯರು ಜಾಗೃತರಾಗಿರಿ. ಹಿಂದೂ ಸಂಘಟನೆಯ ಕಾರ್ಯಕರ್ತರು ನಾವು ಜಾಗೃತಿ ವಹಿಸಬೇಕು. ಈ ವಿವಾದ ಹಿನ್ನಲೆಯಲ್ಲಿ ಅತಿ ಹೆಚ್ಚು ಜಾಗ್ರತೆ ವಹಿಸುವ ಅವಶ್ಯಕತೆಯಿದೆ ಎಂದಿದ್ದಾರೆ.
ಇದನ್ನೂ ಓದಿ: ಸ್ವದೇಶಗಳಲ್ಲೇ ಪ್ರಾಯೋಗಿತ ತರಬೇತಿ ಪಡೆದುಕೊಳ್ಳಲು ಅವಕಾಶ ಕೊಟ್ಟ ಉಕ್ರೇನ್ ವೈದ್ಯಕೀಯ ವಿಶ್ವವಿದ್ಯಾಲಯಗಳು
ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ; ಪೋಷಕರಿಂದ ಲವ್ ಜಿಹಾದ್ ಆರೋಪ
Published On - 2:28 pm, Fri, 8 April 22