ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ; ಪೋಷಕರಿಂದ ಲವ್ ಜಿಹಾದ್ ಆರೋಪ

ಹುಬ್ಬಳ್ಳಿಯಲ್ಲಿ ಹಿಂದೂ ಯುವತಿ ಜೊತೆ ಮುಸ್ಲಿಂ ಯುವಕನ ಮದುವೆ; ಪೋಷಕರಿಂದ ಲವ್ ಜಿಹಾದ್ ಆರೋಪ
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ ಯುವತಿ

ಇಬ್ರಾಹಿಂ ಹಿಂದೂ ಹುಡುಗ ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಹುಡುಗಿಯನ್ನ ಎರಡನೇ ತಾರೀಖಿನಂದು ಕರೆದುಕೊಂಡು ಹೋಗಿ ಗದಗನಲ್ಲಿ ರಿಜಿಸ್ಟ್ರಾರ್ ಮದುವೆಯಾಗಿದ್ದಾನೆ.

TV9kannada Web Team

| Edited By: sandhya thejappa

Apr 07, 2022 | 12:56 PM

ಹುಬ್ಬಳ್ಳಿ: ಜಿಲ್ಲೆಯಲ್ಲಿ ಹಿಂದೂ (Hindu) ಯುವತಿ ಜೊತೆ ಮುಸ್ಲಿಂ (Muslim) ಯುವಕನ ಮದುವೆ ನಡೆದಿದ್ದು, ಇದು ಲವ್ ಜಿಹಾದ್ (Love Jihad) ಎಂದು ಯುವತಿ ಪೋಷಕರು ಆರೋಪಿಸಿದ್ದಾರೆ. ಹುಬ್ಬಳ್ಳಿಯ ಕಮರಿಪೇಟೆ ನಿವಾಸಿ ಸ್ನೇಹಾಳನ್ನ ಇಬ್ರಾಹಿಂ ಪ್ರೀತಿಸಿದ್ದ. ಗದಗನಲ್ಲಿ ಈ ಜೋಡಿ ರಿಜಿಸ್ಟ್ರಾರ್ ಮದುವೆ ಕೂಡಾ ಆಗಿದೆ. ಯುವತಿಯ ತಲೆಕೆಡಿಸಿದ್ದಾರೆಂದು ಆರೋಪಿಸಿರುವ ಪೋಷಕರು, ಲವ್ ಜಿಹಾದ್ ಮಾಡಿ ಹುಡುಗಿಯನ್ನ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇಬ್ರಾಹಿಂ ಹಿಂದೂ ಹುಡುಗ ಎಂದು ಯುವತಿಯನ್ನು ಪರಿಚಯಿಸಿಕೊಂಡಿದ್ದ ಎಂದು ಹೇಳಲಾಗುತ್ತಿದೆ. ಹುಡುಗಿಯನ್ನ ಎರಡನೇ ತಾರೀಖಿನಂದು ಕರೆದುಕೊಂಡು ಹೋಗಿ ಗದಗನಲ್ಲಿ ರಿಜಿಸ್ಟ್ರಾರ್ ಮದುವೆಯಾಗಿದ್ದಾನೆ. ಇಬ್ರಾಹಿಂ ಹುಡುಗಿ ಸಹೋದರನಿಂದ ಪರಿಚಯವಾಗಿದ್ದ. ಇನ್ನು ನಿನ್ನೆ ಇಡೀ ದಿನ ಹುಬ್ಬಳ್ಳಿಯ ಉಪನಗರ ಠಾಣೆಯಲ್ಲಿ ಸಂಬಂಧಿಕರು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನಕಲಿ ದಾಖಲಾತಿ ಸೃಷ್ಟಿಸಿ ಮದುವೆಯಾಗಿದ್ದಾನೆ ಎಂದು ಆರೋಪಿಸಿದ್ದಾರೆ.

ಫೆಬ್ರವರಿ 11 ರಂದು ಸ್ನೇಹಾ ಮನೆಯಲ್ಲೆ ಇದ್ದರೂ ಮದುವೆಯಾಗಿದ್ದಾಗಿ ದಾಖಲೆ ಇದೆ. ಹೀಗಾಗೇ ಲವ್ ಜಿಹಾದ್ ಪೋಷಕರು ಆರೋಪ ಮಾಡಿದ್ದಾರೆ. ಹುಡುಗಿಯನ್ನ ಪೊಲೀಸರು ಕರೆತರದೆ ಇದ್ದರೆ ಪ್ರತಿಭಟನೆ ಉಗ್ರ ಸ್ವರೂಪ ತಾಳಲಿದೆ ಎಂದು ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಪೊಲೀಸರಿಗೆ ನಾಳೆ ಮಧ್ಯಾಹ್ನ 12 ರವೆಗೆ ಗಡುವು ನೀಡಿದ ಪ್ರಮೋದ್, ನಾಳೆ ಗಲಾಟೆಯಾದರೆ ಸರ್ಕಾರವೇ ಹೊಣೆ ಎಂದಿದ್ದಾರೆ.

ಸ್ನೇಹಾ ಎಪ್ರಿಲ್ 2 ರಿಂದ ಕಾಣಿಸ್ತಾ ಇರಲಿಲ್ಲ. ಆವತ್ತೆ ದೂರು ನೀಡಿದ್ದರೂ ಪೊಲೀಸರು ಉದಾಸೀನ ಮಾಡಿದ್ದಾರೆ. ದೂರು ನೀಡಿ ಐದು ದಿನ ಕಳೆದರೂ ಯುವತಿಯನ್ನು ಹುಡುಕಿಲ್ಲ ಅಂತ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ವಿಡಿಯೋ ಹೇಳಿಕೆ ರಿಲೀಸ್: ಮದುವೆಯಾದ ಯುವತಿ ವಿಡಿಯೋ ಹೇಳಿಕೆ ರಿಲೀಸ್ ಮಾಡಿದ್ದಾಳೆ. ನನ್ನನ್ನು ಯಾರೂ ಒತ್ತಾಯಪೂರ್ವಕವಾಗಿ ಕರೆದೊಯ್ದಿಲ್ಲ. ನಾನು ಒಪ್ಪಿಕೊಂಡು ಪ್ರೀತಿಯಿಂದ ಹೋಗಿದ್ದೇನೆ ಎಂದು ಯುವತಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಪೊಲೀಸ್ ಠಾಣೆಗೆ ಬಂದ ಯುವತಿ: ಯುವತಿಯನ್ನ ಪೊಲೀಸರು ಕೇಶ್ವಾಪುರ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ಯುವತಿಯ ಮನವೊಲಿಕಗೆ ಸಂಬಂಧಿಕರು ಹಾಗೂ ಪೋಷಕರು ಆಗಮಿಸಿದ್ದಾರೆ.

ಇದನ್ನೂ ಓದಿ

ಮೌಂಟ್ ಎವರೆಸ್ಟ್ ಶಿಖರದಿಂದ 360 ಡಿಗ್ರಿ ನೋಟದ ಮನಮೋಹಕ ವಿಡಿಯೋ ಮೂಲಕ ಬದುಕಿನ ಪಾಠ ಹೇಳಿದ ಆನಂದ್ ಮಹೀಂದ್ರಾ

JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ; ವಾರ ಕಳೆದರೂ, ಎಷ್ಟೇ ತನಿಖೆ ನಡೆಸಿದರೂ ಸಿಕ್ತಿಲ್ಲ ಯಾವುದೇ ಸುಳಿವು

Follow us on

Related Stories

Most Read Stories

Click on your DTH Provider to Add TV9 Kannada