JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ; ವಾರ ಕಳೆದರೂ, ಎಷ್ಟೇ ತನಿಖೆ ನಡೆಸಿದರೂ ಸಿಕ್ತಿಲ್ಲ ಯಾವುದೇ ಸುಳಿವು
ಮಾರ್ಚ್ 29 ರಂದು ನಂದಗುಡಿಯ ಜಮೀನಿಗೆ ಹೋಗಿದ್ದ ಲೋಹಿತ್ ನಾಪತ್ತೆಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಲೋಹಿತ್ ಕಾರು ಪತ್ತೆಯಾಗಿತ್ತು.
ದೇವನಹಳ್ಳಿ: JDS ಮಾಜಿ ಕಾರ್ಪೊರೇಟರ್ ಪತಿ ನಿಗೂಢ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ನಾಪತ್ತೆಯಾಗಿ ವಾರ ಕಳೆದ್ರೂ ಯಾವುದೇ ಸುಳಿವು ಪತ್ತೆಯಾಗಿಲ್ಲ. ಮಾರ್ಚ್ 29ರಂದು ನಿಗೂಢವಾಗಿ ನಾಪತ್ತೆಯಾಗಿದ್ದ ಬಿನ್ನಿಪೇಟೆ ಮಾಜಿ ಕಾರ್ಪೊರೇಟರ್ ಐಶ್ವರ್ಯಾ ಪತಿ ಲೋಹಿತ್ಗಾಗಿ ತೀವ್ರ ಶೋಧ ನಡೆಯುತ್ತಿದೆ. ಹಾಘೂ ನಿಗೂಢ ನಾಪತ್ತೆಗೆ ಕಾರಣವೇನು? ಇದರ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಾರ್ಚ್ 29 ರಂದು ನಂದಗುಡಿಯ ಜಮೀನಿಗೆ ಹೋಗಿದ್ದ ಲೋಹಿತ್ ನಾಪತ್ತೆಯಾಗಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನ ನಂದಗುಡಿ ಬಳಿ ಹೆದ್ದಾರಿ ಪಕ್ಕದಲ್ಲಿ ಲೋಹಿತ್ ಕಾರು ಪತ್ತೆಯಾಗಿತ್ತು. ದೇಗುಲ ಬಳಿ ಟೈರ್ ಪಂಕ್ಚರ್ ಆದ ಸ್ಥಿತಿಯಲ್ಲಿ ಕಾರು ಪತ್ತೆಯಾಗಿತ್ತು. ದೇಗುಲದ ಬಳಿ ಲೋಹಿತ್ ಚಪ್ಪಲಿ, ಬೆಲ್ಟ್ ಪತ್ತೆಯಾಗಿತ್ತು. ಈ ಪ್ರಕರಣ ಭೇದಿಸಲು 2 ವಿಶೇಷ ಪೊಲೀಸ್ ತಂಡ ಸಿದ್ಧಪಡಿಸಲಾಗಿತ್ತು. 4 ಸಾವಿರಕ್ಕೂ ಹೆಚ್ಚು ಫೋನ್ ಕರೆಗಳ ಬಗ್ಗೆ ಪರಿಶೀಲನೆ ನಡೆಸಿ ಹೊಸಕೋಟೆ ಟೋಲ್ ಬಳಿಯ ಸಿಸಿ ಕ್ಯಾಮರಾ ಸೇರಿದಂತೆ, ರಸ್ತೆಬದಿಯ 100ಕ್ಕೂ ಅಧಿಕ ಸಿಸಿ ಕ್ಯಾಮರಾಗಳ ಪರಿಶೀಲನೆ ನಡೆಸಲಾಗಿತ್ತು.
ಅಲ್ಲದೆ ಈ ವೇಳೆ ಲೋಹಿತ್ ಕಾರು ಆಗಮಿಸಿದ್ದ ಒಂದು ಗಂಡೆ ಒಳಗಿನ ಎಲ್ಲಾ ಕಾರುಗಳ ಪರಿಶೀಲನೆ ನಡೆಸಲಾಗಿತ್ತು. ನಂದಗುಡಿ ಮೀಸಲು ಅರಣ್ಯ ಪ್ರದೇಶದಲ್ಲಿಯೂ ನೀಲಗಿರಿ ತೋಪುಗಳಲ್ಲಿ ಡ್ರೋನ್ ಮೂಲಕ ಸರ್ಚಿಂಗ್ ಮಾಡಲಾಗಿತ್ತು. ಲೋಹಿತ್ ಪತ್ತೆಗಾಗಿ ಎಲ್ಲಾ ಆಯಾಮಗಳಲ್ಲಿಯೂ ಶೋಧ ನಡೆದಿದೆ. ಆದ್ರೆ ಎಷ್ಟೇ ಪ್ರಯತ್ನ ಮಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಲೋಹಿತ್ ಸುಳಿವು ಸಿಗದ ಹಿನ್ನೆಲೆ ಕುಟುಂಬಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಜತೆಗೆ ಪೊಲೀಸರಿಗೆ ತಲೆ ನೋವಾಗಿದೆ.
ಎಲ್ಲ ಆಯಾಮದಲ್ಲೂ ತನಿಖೆ ನಡೆಯುತ್ತಿದೆ ಕಳೆದ 11 ದಿನಗಳಿಂದ ಪೊಲೀಸರು ತೀವ್ರ ಶೋಧ ಮುಂದುವರೆಸಿದ್ದಾರೆ. ಹೊಸಕೋಟೆ ತಾಲೂಕಿನ ನಂದಗುಡಿ ಠಾಣಾ ವ್ಯಾಪ್ತಿಯ ಅರಣ್ಯ ಪ್ರದೇಶದ 200 ಮೀಟರ್ ಅಂತರದಲ್ಲಿ ಲೋಹಿತ್ ಕಾರು ಪತ್ತೆಯಾಗಿದೆ. ಕುಟುಂಬಸ್ಥರು ಘಟನೆ ಸಂಬಂಧಿಸಿದಂತೆ ದೂರು ನೀಡಿದ್ದಾರೆ. ತನಿಖೆಯಲ್ಲಿ 4 ವಿಶೇಷ ತಂಡಗಳಾಗಿ ಸಿಬ್ಬಂದಿ ಕಾರ್ಯಚರಣೆ ನಡೆಸ್ತಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿದೆ ಎಂದು ಪ್ರಕರಣ ಸಂಬಂಧ ಬೆಂಗಳೂರು ಗ್ರಾಮಾಂತರ ಎಸ್ಪಿ ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಅರಣ್ಯ ಪ್ರದೇಶ ಡ್ರೋಣ್ ಬಳಸಿ ಕಾರ್ಯಚರಣೆ ಮಾಡ್ತಿದ್ದೇವೆ. ಕಾರಿನ ಮೇಲೆ ರಕ್ತದ ಕೆಲ ಗುರುತುಗಳು ಸಿಕ್ಕಿವೆ. ರಕ್ತದ ಮಾದರಿ ಸಂಗ್ರಹಿಸಿ ಎಫ್ಎಸ್ಎಲ್ ರವಾನೆ ಮಾಡಿದ್ದೇವೆ. ಅನಿಮಲ್ ಬ್ಲಡ್ ಅಥವಾ ಮನುಷ್ಯನ ಬ್ಲಡ್ ಅನ್ನೋದರ ಬಗ್ಗೆ ಸಂಶಯವಿತ್ತು. ಮನುಷ್ಯನ ಬ್ಲಡ್ ಅನ್ನೋದು ಕನ್ಫರ್ಮ್ ಆಗಿದೆ. ಕಾರಿನ ಬಳಿಕ ಕೇವಲ 4-5 ಮಾರ್ಕ್ ಕಂಡು ಬಂದಿದೆ, ಹೆಚ್ಚಿನ ಪ್ರಮಾಣದಲ್ಲಿ ರಕ್ತ ಕಂಡು ಬಂದಿಲ್ಲ. ವಿಟ್ನೆಸ್ ಗಳು ಸೇರಿದಂತೆ ಕೆಲವರನ್ನು ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದೇವೆ. ಎಸ್ ಪಿ ಲಕ್ಷ್ಮೀ ಗಣೇಶ್ ಖುದ್ದು ಘಟನಾ ಸ್ಥಳಕ್ಕೆ ತೆರಳಿ ಕಾರ್ಯಚರಣೆ ಗಮನಿಸ್ತಿದ್ದಾರೆ. ಹಣಕ್ಕಾಗಿ ಕಿಡ್ನಾಪ್ ಮಾಡಿದ್ದಾರಾ? ಅನ್ನೋದರ ಆಯಾಮದಲ್ಲೂ ತನಿಖೆ ನಡೆಸ್ತಿದ್ದೇವೆ. ನಾಪತ್ತೆಯಾಗಿರುವ ಲೋಹಿತ್ ಫೋನ್ ಸ್ವಿಚ್ ಆಫ್ ಆಗಿದೆ. ಕಾರ್ ಹಿಂಭಾಗದ ಟಯರ್ ಪಂಚರ್ ಆಗಿರುವ ತರ ಕಂಡು ಬಂದಿದೆ. ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಪ್ರಕರಣ ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿದ್ದೇವೆ. ಟೋಲ್ ನಲ್ಲಿ ಸಿಸಿಟಿವಿ ಪರಿಶೀಲನೆ ವೇಳೆ ಲೋಹಿತ್ ಓರ್ವನೆ ತೆರಳಿರುವುದು ಕಂಡು ಬಂದಿದೆ ಎಂದು ಎಸ್ಪಿ ವಂಶಿಕೃಷ್ಣ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪುಟಿನ್ ಆಪ್ತ ಟಿವಿ ನಿರೂಪಕನ ಇಟಲಿ ಮನೆಯ ಗೋಡೆಗಳ ಮೇಲೆ ಹಂತಕ, ಯುದ್ಧ ಬೇಡ ಎಂಬ ಸ್ಲೋಗನ್ಗಳು
Published On - 9:02 am, Thu, 7 April 22