ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ; ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ಬದಲು ಸಂಧ್ಯಾರತಿಗೆ ನಿರ್ಧಾರ

ಮುಸ್ಲಿಮರು ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವುದು ಸರಿಯಲ್ಲ. ಅದನ್ನು ಶಾಸ್ತ್ರವು ಕೂಡ ಒಪ್ಪಲ್ಲ ಎಂದ ಸ್ಥಾನಿಕ ಶ್ರೀನಿವಾಸನ್ ಹೇಳಿದ್ದಾರೆ. ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರು ಮೂರ್ತಿ ಕೆತ್ತಬೇಕು. ಹೀಗಾಗಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸಬಾರದು.

ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ; ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ಬದಲು ಸಂಧ್ಯಾರತಿಗೆ ನಿರ್ಧಾರ
ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್
Follow us
TV9 Web
| Updated By: ಆಯೇಷಾ ಬಾನು

Updated on:Apr 07, 2022 | 11:49 AM

ಮಂಡ್ಯ: ಹಿಜಾಬ್, ಹಲಾಲ್, ಆಜಾನ್, ಮಾವಿನಹಣ್ಣಿನ ಅಭಿಯಾನದ ಬಳಿಕ ಮತ್ತೊಂದು ಅಭಿಯಾನ ಶುರುವಾಗಿದೆ. ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸದಂತೆ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್ ನೇತೃತ್ವದಲ್ಲಿ ಅಭಿಯಾನ ಶುರುವಾಗಿದೆ.

ಮುಸ್ಲಿಮರು ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವುದು ಸರಿಯಲ್ಲ. ಅದನ್ನು ಶಾಸ್ತ್ರವು ಕೂಡ ಒಪ್ಪಲ್ಲ ಎಂದ ಸ್ಥಾನಿಕ ಶ್ರೀನಿವಾಸನ್ ಹೇಳಿದ್ದಾರೆ. ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರು ಮೂರ್ತಿ ಕೆತ್ತಬೇಕು. ಹೀಗಾಗಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸಬಾರದು. ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ ಮಾಡುವೆ. ರಾಜ್ಯದ ದೇವಾಲಯಗಳಿಗೆ ಭೇಟಿ ನೀಡಿ ಅಭಿಯಾನ ಮಾಡುತ್ತೇನೆ ಎಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನಿಕ ಶ್ರೀನಿವಾಸನ್ ತಿಳಿಸಿದ್ದಾರೆ.

‘ಸಲಾಂ’ ತೆಗೆದು ಸಂಧ್ಯಾರತಿ ಎಂದು ಹೆಸರಿಡಲು ಸ್ಥಾನಿಕರ ಅಭಿಪ್ರಾಯ ಇನ್ನು ಮತ್ತೊಂದು ಕಡೆ ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ವಿವಾದ ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲಾಡಳಿತ ದೀವಟಿಗೆ ಸಲಾಂ ವಿಚಾರವಾಗಿ ದೇವಾಲಯ ಆಡಳಿತ ಮಂಡಳಿಯಿಂದ ವರದಿ ಕೇಳಿತ್ತು. ಚೆಲುವನಾರಾಯಣಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ ಬಳಿ ಜಿಲ್ಲಾಧಿಕಾರಿ ವರದಿ ಕೇಳಿದರು.

ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ದೇಗುಲದಲ್ಲಿ ಆರತಿ ನಡೆಯುತ್ತಿದೆ. ‘ಸಲಾಂ’ ಪದ ಬದಲಿಸಲು ಜಿಲ್ಲಾ ಧಾರ್ಮಿಕ ಪರಿಷತ್ ಮನವಿ ಸಲ್ಲಿಸಿತ್ತು. ಮನವಿಯನ್ನ ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಸಲಾಂ ಪದ ಕೈಬಿಡಬೇಕೆಂಬುದು ದೇಗುಲದ ಸ್ಥಾನಿಕರ ಅಭಿಪ್ರಾಯ. ‘ಸಲಾಂ’ ತೆಗೆದು ಸಂಧ್ಯಾರತಿ ಎಂದು ಹೆಸರಿಡಲು ಸ್ಥಾನಿಕರ ಅಭಿಪ್ರಾಯ ಪಟ್ಟಿದ್ದಾರೆ. EO, ಎಸಿಯವರಿಗೆ ಲಿಖಿತರೂಪದಲ್ಲಿ ಅರ್ಚಕರು‌ ಅಭಿಪ್ರಾಯ ತಿಳಿಸಿದ್ದಾರೆ.

ಧರ್ಮಕ್ಕಿಂತ ಮಿಗಿಲಾಗಿ ನಾವು ಭಾರತೀಯರು ಮುಸ್ಲಿಂರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಮಂಡ್ಯದಲ್ಲಿ ಸಚಿವ ಸಿ.ಎನ್.ಅಶ್ವತ್ಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ. ಯಾರ ಬಳಿ ಏನು ತೆಗೆದುಕೊಳ್ಳಬೇಕೆಂದು ನಾವು ಹೇಳಕ್ಕಾಗುತ್ತಾ? ಯಾರ ಜತೆ ಮಾತಾಡಬೇಕು, ಯಾರ ಜೊತೆ ಕುಳಿತುಕೊಳ್ಳಬೇಕು. ಇದನ್ನೆಲ್ಲಾ ನಾವು ಹೇಳುವುದಕ್ಕೆ ಆಗುತ್ತಾ. ನಾವು ಭಾರತೀಯರು, ಒಳ್ಳೆ ಸಂಬಂಧ ಇಟ್ಟುಕೊಂಡು ಬದುಕುವವರು. ಧರ್ಮಕ್ಕಿಂತ ಮಿಗಿಲಾಗಿ ನಾವು ಭಾರತೀಯರು. ರಾಷ್ಟ್ರಕವಿ ಕುವೆಂಪು ಹೇಳಿದಂತೆ ನಾವು ವಿಶ್ವಮಾನವರು. ದ್ವೇಷ, ವೈಮನಸ್ಸು ಬೆಳೆಸುವವರಿಗೆ ಪೂರಕವಾಗಿ ಇರಬೇಡಿ. ಅಲ್​ಖೈದಾ ಹೇಳಿಕೆಗೆ ಸೊಪ್ಪು ಹಾಕುವಂತಹ ಕೆಲಸ ಮಾಡಬೇಡಿ. ಅಲ್ಪಸಂಖ್ಯಾತರು ಅಲ್​​​ಖೈದಾ ಹೇಳಿಕೆಯನ್ನ ಖಂಡಿಸಬೇಕಿತ್ತು. ಹೇಳಿಕೆಯ ಬಗ್ಗೆ ಮೊದಲು ಸಿದ್ದರಾಮಯ್ಯನವರೇ ಖಂಡಿಸಿಲ್ಲ. ಅಲ್ಪಸಂಖ್ಯಾತರ ವೋಟ್‌ಗಾಗಿ ಕಾಂಗ್ರೆಸ್, ಜೆಡಿಎಸ್ ಪೈಪೋಟಿ ಮಾಡ್ತಿದೆ. ಉಗ್ರ ಸಂಘಟನೆಗಳು ಅವಕಾಶ ಸಿಗುವ ಕಡೆ ಹುನ್ನಾರ ಮಾಡುತ್ತೆ. ಅದಕ್ಕೆ ಸ್ಪಂದಿಸದಿದ್ದರೆ ತಾನಾಗಿಯೇ ಹೋಗುತ್ತೆ ಎಂದಿದ್ದಾರೆ.

ನಮ್ಮ ನಡಿಗೆ ಹಿಂದೂಗಳ ಅಂಗಡಿ ಕಡೆಗೆ ಅಭಿಯಾನ ಇನ್ನು ಮತ್ತೊಂದೆಡೆ ಕೊಪ್ಪಳ ಜಿಲ್ಲೆಗೂ ಹಿಂದೂ ಸಮಾಜದ ಅಭಿಯಾನ ಕಾಲಿಟ್ಟಿದೆ. ನಮ್ಮ ನಡಿಗೆ ಹಿಂದೂಗಳ ಅಂಗಡಿ ಕಡೆಗೆ ಎಂಬ ಅಭಿಯಾನ ಸಾಮಾಜಿಕ ಜಾಲತಾಣದಲ್ಲಿ ಶುರುವಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದಲ್ಲಿ ಅಭಿಯಾನ ಮಾಡಲಾಗುತ್ತಿದೆ. ವ್ಯವಹಾರಕ್ಕಾಗಿ ನಮ್ಮ ನಡಿಗೆ ಹಿಂದೂಗಳ ಅಂಗಡಿ ಕಡೆಗೆ. ಇದೊಂದು ದೊಡ್ಡ ಅಭಿಯಾನವಾಗಲಿ ಎಂದು ಹಿಂದೂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರು ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಹಿಂದೂಗಳ ಬಳಿಯೇ ಖರೀದಿಸೋಣ ಎಂದು ಸಂದೇಶ ರವಾನಿಸಲಾಗಿದ್ದು ಹಿಂದೂ ಸಮಾಜ ಗಂಗಾವತಿಯಿಂದ ಅಭಿಯಾನ ಆರಂಭವಾಗಿದೆ.

ಮುಸ್ಲಿಮರು ಕೆತ್ತಿದ ಮೂರ್ತಿಗಳು ಪೂಜೆಗೆ ಯೋಗ್ಯವಲ್ಲ ಎಂದು ಕಲಬುರಗಿ ನಗರದಲ್ಲಿ ಶ್ರೀರಾಮಸೇನೆಯ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಹೇಳಿಕೆ ನೀಡಿದ್ದಾರೆ. ಶಾಸ್ತ್ರೋಕ್ತವಾಗಿ ವಿಶ್ವಕರ್ಮ ಸಮುದಾಯದಿಂದ ಕೆತ್ತನೆ ಮಾಡಬೇಕು. ದೇವರ ಮೂರ್ತಿಗಳನ್ನು ಶಾಸ್ತ್ರೋಕ್ತವಾಗಿ ಕೆತ್ತನೆ ಮಾಡ್ತಾರೆ. ಮುಸ್ಲಿಮರು ಶಾಸ್ತ್ರೋಕ್ತವಾಗಿ ಮೂರ್ತಿ ಕೆತ್ತನೆ ಮಾಡಲ್ಲ. ಹೀಗಾಗಿ ಮುಸ್ಲಿಮರು ಕೆತ್ತಿದ ಮೂರ್ತಿ ಪ್ರತಿಷ್ಠಾಪಿಸಬಾರದು. ಮುಸ್ಲಿಮರು ಮೂರ್ತಿಗಳನ್ನು ಕೆತ್ತುವ ಬಗ್ಗೆ ಗೊತ್ತಿರಲಿಲ್ಲ. ಆದ್ರೆ H.D.ಕುಮಾರಸ್ವಾಮಿಯವರೇ ಅದನ್ನು ಪ್ರಸ್ತಾಪಿಸಿದರು. ಮುಸ್ಲಿಮರು ಕೆತ್ತಿದ ಮೂರ್ತಿ ಬಹಿಷ್ಕಾರಕ್ಕೆ HDK ಕಾರಣ ಎಂದು ಕಲಬುರಗಿ ನಗರದಲ್ಲಿ ಸಿದ್ದಲಿಂಗ ಸ್ವಾಮೀಜಿ ತಿಳಿಸಿದ್ದಾರೆ.

ಇದನ್ನೂ ಓದಿ: Shocking News: ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನನ್ನು ಕೊಂದ ಬಾಲಕ; ಪಾರಾಗಲು ಮಾಡಿದ್ದು ಕ್ರಿಮಿನಲ್​ ಐಡಿಯಾ

Parvathy: ವಿಭಿನ್ನ ಲುಕ್​ಗಳಲ್ಲಿ ಅಭಿಮಾನಿಗಳ ಮನಗೆಲ್ಲುವ ಪಾರ್ವತಿ; ಬಹುಭಾಷಾ ನಟಿಯ ಮಸ್ತ್ ಫೋಟೋಗಳು ಇಲ್ಲಿವೆ

Published On - 8:14 am, Thu, 7 April 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್