ರಂಜಾನ್ ಮುಗಿದ ಬಳಿಕ ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸುವೆ: ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್ ತಂದೆ ಘೋಷಣೆ
ಮನೆಗೆ ಹಣ ಕೊಡಲು ಕೆಲ ಮುಖಂಡರು ಬಂದರು. ಅವರು ಬಂದಿದ್ದಾಗ ಹಣ ಗಿಫ್ಟ್ ಕೊಡಬೇಡಿ ಅಂತಾ ಮನವಿ ಮಾಡಿದೆ. ನಮಗೆ ದೇವರು ಕಷ್ಟ ಕೊಟ್ಟಿಲ್ಲ. ನೆಮ್ಮದಿಯಾಗಿ ಜೀವನ ನಡೆಸುವಷ್ಟು ಹಣ ಕೊಟ್ಟಿದ್ದಾನೆ. ರಂಜಾನ್ ಮುಗಿದ ಬಳಿಕ ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸುತ್ತೇನೆ ಎಂದು ಮಂಡ್ಯದಲ್ಲಿ ಮುಸ್ಕಾನ್ ತಂದೆ ಮೊಹಮದ್ ಹುಸೇನ್ ಪ್ರಕಟಿಸಿದ್ದಾರೆ.
ಮಂಡ್ಯ: ಹಿಜಾಬ್ ವಿಷಯ ಇಡೀ ರಾಜ್ಯವನ್ನು ಕಂಗೆಡಿಸಿದಾಗ ದಿಢೀರನೆ ರೋಷಾವೇಶಕ್ಕೆ ಬಿದ್ದು ಅಲ್ಲಾ ಹು ಅಕ್ಬರ್ ಎಂದಿದ್ದ ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್ ಈಗ ಮತ್ತೆ ಸುದ್ದಿಗೆ ಬಂದಿದ್ದಾಳೆ. ‘ಅಲ್ಲಾ ಹು ಅಕ್ಬರ್ ಎಂದಿದ್ದ ಮಂಡ್ಯ ವಿದ್ಯಾರ್ಥಿನಿ ಮಸ್ಕಾನ್ ಭಾರತದ ಶ್ರೇಷ್ಠ ಮಹಿಳೆ’ ಎಂದು ಅಲ್ ಖೈದಾ ನಾಯಕ ಮೂಗುತೂರಿಸಿದ್ದಾನೆ. ಈ ಬಗ್ಗೆ ವಿಡಿಯೋ ಸಂದೇಶ ನೀಡಿ, ಆ ಹುಡುಗಿಯನ್ನು ಹಾಡಿಹೊಗಳಿದ್ದಾನೆ. ಇದನ್ನು ಕೆರಳಿ ಕೆಂಡವಾಗಿರುವ ರಾಜ್ಯದ ನಾಯಕರು ಮೋಸ್ಟ್ ವಾಂಟೆಡ್ ಅಲ್ ಖೈದಾ ಉಗ್ರ ಸಂಘಟನೆಯ ಅಲ್ ಜವಾಹಿರಿನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ವತಃ ಮಸ್ಕಾನ್ ತಂದೆಯೇ ಜವಾಹಿರಿ ಕೇಳಿಕೆಯನ್ನು ಉಗ್ರವಾಗಿ ಖಂಡಿಸಿದ್ದಾರೆ.
ಮನೆಗೆ ಹಣ ಕೊಡಲು ಕೆಲ ಮುಖಂಡರು ಬಂದರು. ಅವರು ಬಂದಿದ್ದಾಗ ಹಣ ಗಿಫ್ಟ್ ಕೊಡಬೇಡಿ ಅಂತಾ ಮನವಿ ಮಾಡಿದೆ. ನಮಗೆ ದೇವರು ಕಷ್ಟ ಕೊಟ್ಟಿಲ್ಲ. ನೆಮ್ಮದಿಯಾಗಿ ಜೀವನ ನಡೆಸುವಷ್ಟು ಹಣ ಕೊಟ್ಟಿದ್ದಾನೆ. ಹಣ ಕೊಡುವುದನ್ನು ನಮ್ಮ ಧರ್ಮದಲ್ಲಿ ಅದಿಯಾ ಅಂತ ಹೇಳುತ್ತಾರೆ. ಅದಿಯಾ ಕೊಡುತ್ತಿದ್ದೇವೆ, ಇದನ್ನು ಬೇಡ ಅನ್ನಬಾರದು ಅಂತ ಹೇಳುತ್ತಿದ್ದರು. ರಂಜಾನ್ ಮುಗಿದ ಬಳಿಕ ಮಗಳಿಗೆ ಕೊಟ್ಟ ದುಡ್ಡಿನಿಂದ ಆಸ್ಪತ್ರೆಗೆ ಅಂಬುಲೆನ್ಸ್ ಕೊಡಿಸುತ್ತೇನೆ ಎಂದು ಮಂಡ್ಯದಲ್ಲಿ ಮುಸ್ಕಾನ್ ತಂದೆ ಮೊಹಮದ್ ಹುಸೇನ್ ಪ್ರಕಟಿಸಿದ್ದಾರೆ.
Also read:
ಯುವತಿಯ ತಂದೆ ಮೊಹಮದ್ ಹುಸೇನ್ ಇನ್ನೂ ಏನೆಲ್ಲಾ ಹೇಳಿದರು? ವಿಡಿಯೋ ನೋಡಿ
Published On - 5:39 pm, Wed, 6 April 22