9 ಪತ್ನಿಯರೊಂದಿಗೆ ಸುಖವಾಗಿದ್ದವನಿಗೆ ಒಬ್ಬಳಿಂದ ವಿಚ್ಛೇದನ; ಇನ್ನಿಬ್ಬರನ್ನು ಮದುವೆಯಾಗುವುದೇ ಗುರಿಯೆಂದ ಮಾಡೆಲ್
ಅಗಾಥಾಗೆ ಬಹುಪತ್ನಿತ್ವ ಇಷ್ಟವಾಗುತ್ತಿಲ್ಲವಂತೆ. ನಾನು ಅವಳಿಗೊಬ್ಬಳಿಗೇ ಮಾತ್ರ ಸೇರಿದವನಾಗಿರಬೇಕು ಎಂದು ಆಕೆ ಬಯಸುತ್ತಾಳೆ. ಅಂದರೆ ಏಕಪತ್ನಿತ್ವ ಅನುಸರಿಸಬೇಕು ಎಂಬುದು ಅಗಾಥಾ ಬಯಕೆ.
ತನಗೆ ಏಕಪತ್ನಿತ್ವದಲ್ಲಿ ನಂಬಿಕೆಯಿಲ್ಲ, ನಾನದನ್ನು ವಿರೋಧಿಸುತ್ತೇನೆ ಎನ್ನುತ್ತ, 2021ರಲ್ಲಿ 9 ಯುವತಿಯರನ್ನು ಮದುವೆಯಾಗಿ ಸುದ್ದಿಯಾಗಿದ್ದ ಬ್ರೆಜಿಲ್ನ ಮಾಡೆಲ್ ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಇದೀಗ ಅವರ ಪತ್ನಿಯಲ್ಲಿ ಒಬ್ಬರು ಡಿವೋರ್ಸ್ ಕೊಡಲು ಮುಂದಾಗಿದ್ದಾರೆ. ಆಕೆಯ ನಿರ್ಧಾರದಿಂದ ಬೇಸರಗೊಂಡಿದ್ದೇನೆ ಎಂದು ಹೇಳಿಕೊಂಡಿರುವ ಬ್ರೆಜಿಲ್ನ ಮಾಡೆಲ್, ಹಾಗಂತ 10 ಪತ್ನಿಯರನ್ನು ಹೊಂದುವ ನನ್ನ ಕನಸನ್ನು ನನಸು ಮಾಡಿಕೊಳ್ಳದೆ ಬಿಡುವುದಿಲ್ಲ ಎಂದೂ ಹೇಳಿಕೊಂಡಿದ್ದಾರೆ. ಬ್ರೆಜಿಲ್ನ ಈ ಮಾಡೆಲ್ ಹೆಸರು ಆರ್ಥರ್ ಒ ಉರ್ಸೋ. ಬ್ರೆಜಿಲ್ನಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇಲ್ಲದೆ ಇದ್ದರೂ ಕೂಡ, ತಾನು ಬಹುಪತ್ನಿತ್ವವನ್ನೇ ಇಷ್ಟಪಡುತ್ತೇನೆ. ಏಕಪತ್ನಿತ್ವದ ವಿರುದ್ಧ ಪ್ರತಿಭಟಿಸುತ್ತೇನೆ ಎಂದು ಹೇಳಿದ್ದ ಇವರು 9 ಯುವತಿಯರನ್ನು ಏಕಕಾಲದಲ್ಲಿ ಮದುವೆಯಾಗಿದ್ದರು. ಹಾಗೇ, ಇನ್ನೊಬ್ಬಳನ್ನು ವಿವಾಹವಾಗುವ ಮೂಲಕ 10 ಹೆಂಡಿರ ಮುದ್ದಿನ ಗಂಡನಾಗಬೇಕು ಎಂಬ ಕನಸನ್ನೂ ಹೊಂದಿದ್ದರು. ಆದರೆ ಇವರ ಪತ್ನಿಯರಲ್ಲಿ ಒಬ್ಬರಾದ ಅಗಾಥಾ ಉರ್ಸೋರನ್ನು ಬಿಟ್ಟು ಹೊರಟಿದ್ದಾರೆ. ಈ ಬಗ್ಗೆ ನೋವಾದರೂ ಡಿವೋರ್ಸ್ಗೆ ಸಮ್ಮತಿ ನೀಡುವುದಾಗಿ ಉರ್ಸೋ ಹೇಳಿಕೊಂಡಿದ್ದಾರೆ.
ಅಗಾಥಾಗೆ ಬಹುಪತ್ನಿತ್ವ ಇಷ್ಟವಾಗುತ್ತಿಲ್ಲವಂತೆ. ನಾನು ಅವಳಿಗೊಬ್ಬಳಿಗೇ ಮಾತ್ರ ಸೇರಿದವನಾಗಿರಬೇಕು ಎಂದು ಆಕೆ ಬಯಸುತ್ತಾಳೆ. ಅಂದರೆ ಏಕಪತ್ನಿತ್ವ ಅನುಸರಿಸಬೇಕು ಎಂಬುದು ಅಗಾಥಾ ಬಯಕೆ. ಆದರೆ ನಾನಿದಕ್ಕೆ ಒಪ್ಪುವುದಿಲ್ಲ. ನಾನು 9 ಪತ್ನಿಯರೊಂದಿಗೆ ಇರಲು ಇಷ್ಟಪಡುತ್ತೇನೆ. ಎಲ್ಲವನ್ನೂ ಹಂಚಿಕೊಳ್ಳಲೇಬೇಕು ಎಂದು ಉರ್ಸೋ ಹೇಳಿದ್ದಾಗಿ ಜಾಮ್ ಪ್ರೆಸ್ ಮಾಧ್ಯಮ ವರದಿ ಮಾಡಿದೆ. ಹಾಗೇ, ಆಕೆಗೆ ಡಿವೋರ್ಸ್ ಕೊಡುವ ಬಗ್ಗೆ ಬೇಸರವಿದೆ. ಹಾಗಂತ ವಿಚ್ಛೇದನ ನೀಡದೆ ಇರುವುದಿಲ್ಲ. ಆದರೆ ಹೀಗೆ ದಾಂಪತ್ಯ ಜೀವನ ನಡೆಸುವುದರಿಂದ ನಾನು ಏಕಪತ್ನಿತ್ವದ ಸುಖದಿಂದ ವಂಚಿತಳಾಗುತ್ತಿದ್ದೇನೆ ಎಂದು ಆಕೆ ಹೇಳಿದ್ದು ಕೇಳಿ ನನಗೆ ಅಚ್ಚರಿಯಾಯಿತು ಎಂದೂ ತಿಳಿಸಿದ್ದಾರೆ.
ಅಗಾಥಾ ನಿರ್ಧಾರಕ್ಕೆ ಉರ್ಸೋ ಅವರ ಉಳಿದ 8 ಪತ್ನಿಯರು ವಿರೋಧ ವ್ಯಕ್ತಪಡಿಸಿದ್ದಾಗಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಅಗಾಥಾ ಕೇವಲ ಒಂದು ಪ್ರಯೋಗಕ್ಕಾಗಿ ಉರ್ಸೋನನ್ನು ವಿವಾಹವಾಗಿದ್ದಾಳೆ ಬಿಟ್ಟರೆ, ಆಕೆಗೆ ನಿಜಕ್ಕೂ ಉರ್ಸೋ ಮೇಲೆ ಪ್ರೀತಿಯಿಲ್ಲ ಎನ್ನುತ್ತಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಉರ್ಸೋ ಮಾತ್ರ ತಾನು 10 ಪತ್ನಿಯರನ್ನು ಹೊಂದುವುದು ನಿಶ್ಚಿತ ಎಂದು ಬಿಟ್ಟಿದ್ದಾರೆ. ಶೀಘ್ರದಲ್ಲೇ ಇನ್ನಿಬ್ಬರು ಮದುವೆಯಾಗುತ್ತೇನೆ ಎಂದೂ ಹೇಳಿಕೊಂಡಿದ್ದಾರೆ.
View this post on Instagram
Published On - 5:07 pm, Wed, 6 April 22