ಹಲ್ದಿರಾಮ್ ತಿಂಡಿ ಪೊಟ್ಟಣದಲ್ಲಿ ‘ಉರ್ದು’ ಯಾಕೆ? ಎಂದು ಕೇಳಿದ ಟಿವಿ ರಿಪೋರ್ಟರ್; ಸಾಮಾಜಿಕ ಮಾಧ್ಯಮಗಳಲ್ಲಿ ‘ಉರ್ದು’, ‘ಹಲ್ದಿರಾಮ್’ ಟ್ರೆಂಡಿಂಗ್
ಉರ್ದು ಮತ್ತು ಹಲ್ದಿರಾಮ್ ಸದ್ಯ ಸೋಷ್ಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ದು, ಇದಕ್ಕೆ ಕಾರಣ ಟಿವಿ ವರದಿಗಾರ್ತಿಯೊಬ್ಬರು ಹಲ್ದಿರಾಮ್ ಸ್ಟೋರ್ ಮ್ಯಾನೇಜರ್ನಲ್ಲಿ ತಿಂಡಿ ಪೊಟ್ಟಣದಲ್ಲಿ ಉರ್ದು ಭಾಷೆಯಲ್ಲಿ ಏನು ಬರೆದಿದ್ದೀರಿ? ಈ ಪೊಟ್ಟಣದಲ್ಲಿ ಮಾತ್ರ ಯಾಕೆ ಉರ್ದು?
ದೆಹಲಿ: ಹಿಜಾಬ್, ಹಲಾಲ್ ಮಾಂಸ, ಆಜಾನ್ ಚರ್ಚೆಗಳ ನಡುವೆ ಹಲ್ದಿರಾಮ್ ತಿಂಡಿ ಪೊಟ್ಟಣದಲ್ಲಿ ಉರ್ದು ಭಾಷೆಯಲ್ಲಿ ಬರೆದಿರುವುದು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಉರ್ದು (Urdu) ಮತ್ತು ಹಲ್ದಿರಾಮ್ (Haldiram’s )ಸದ್ಯ ಸೋಷ್ಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿದ್ದು, ಇದಕ್ಕೆ ಕಾರಣ ಟಿವಿ ವರದಿಗಾರ್ತಿಯೊಬ್ಬರು ಹಲ್ದಿರಾಮ್ ಸ್ಟೋರ್ ಮ್ಯಾನೇಜರ್ನಲ್ಲಿ ತಿಂಡಿ ಪೊಟ್ಟಣದಲ್ಲಿ ಉರ್ದು ಭಾಷೆಯಲ್ಲಿ ಏನು ಬರೆದಿದ್ದೀರಿ? ಈ ಪೊಟ್ಟಣದಲ್ಲಿ ಮಾತ್ರ ಯಾಕೆ ಉರ್ದು? ಇದರ ಹಿಂದಿನ ಉದ್ದೇಶ ಏನು ಎಂದು ಪ್ರಶ್ನೆ ಕೇಳಿದ್ದು. ವರದಿಗಾರ್ತಿಗೆ ಉತ್ತರಿಸಿದ ಸ್ಟೋರ್ ಮ್ಯಾನೇಜರ್ “ನೀವು ಏನು ಬೇಕಾದರೂ ಮಾಡಬಹುದು ಮೇಡಂ, ಹಲ್ದಿರಾಮ್ಸ್ ಅಂತಹ ತಂತ್ರಗಳನ್ನು ಪ್ರೋತ್ಸಾಹಿಸುವುದಿಲ್ಲ ಎಂದಿದ್ದಾರೆ .ಆದರೆ ಪಟ್ಟು ಬಿಡದ ವರದಿಗಾರ್ತಿ ಉರ್ದುನಲ್ಲಿ ಬರೆದಿರುವುದೇನು? ನವರಾತ್ರಿಯಲ್ಲಿ (Navratri) ಉಪವಾಸ ಮಾಡುವ ಹಿಂದೂಗಳಿಗೆ ದ್ರೋಹ ಇದು ಎಂದು ಹೇಳಿದ್ದಾರೆ. ನಿಮಗೆ ಬೇಕಾದರೆ ತೆಗೆದುಕೊಳ್ಳಿ, ಇಲ್ಲಾಂದ್ರೆ ಬಿಡಿ. ಹಿಂದಿ,ಇಂಗ್ಲಿಷ್ ನಲ್ಲಿ ಬರೆದಿರುವುದೂ ಇದೆ, ಅದು ಬಿಟ್ಟು ಉರ್ದುನಲ್ಲಿ ಬರೆದಿರುವುದನ್ನೇ ಓದಬೇಕು ಎಂದು ಯಾಕೆ ಹೇಳುತ್ತೀರಿ? ಎಂದು ಸ್ಟೋರ್ ಮ್ಯಾನೇಜರ್ ಟಿವಿ ವರದಿಗಾರ್ತಿಗೆ ಉತ್ತರಿಸಿದ್ದಾರೆ.
Ab HaldiRAM bhi anti-national ho gaya. pic.twitter.com/OM7FuWegoy
— Cryptic Miind (@Cryptic_Miind) April 5, 2022
ಸ್ಟೋರ್ ಮ್ಯಾನೇಜರ್ ಮತ್ತು ಟಿವಿ ವರದಿಗಾರ್ತಿಯ ಸಂಭಾಷಣೆಯ ವಿಡಿಯೊ ವೈರಲ್ ಆಗಿದ್ದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಯಿತು. ಕೆಲವರು ಪ್ಯಾಕೆಟ್‌ನಲ್ಲಿನ ಬರಹ ಉರ್ದು ಅಲ್ಲ ಅರೇಬಿಕ್ ಎಂದು ಹೇಳಿದ್ದಾರೆ. ಅದು ಮಧ್ಯಪ್ರಾಚ್ಯಕ್ಕೆ ರಫ್ತು ಮಾಡುವಂತದ್ದು ಎಂದು ನೆಟ್ಟಿಗರು ಹೇಳಿದ್ದಾರೆ. ಇನ್ನು ಕೆಲವರು ಉರ್ದು ಪಠ್ಯವನ್ನು ಬಳಸಿಕೊಂಡಿರುವ ಭಾರತೀಯ ರೈಲ್ವೆಯ ಬೋರ್ಡ್ ಗಳಿಂದ ಹಿಡಿದು ಕರೆನ್ಸಿ ನೋಟುಗಳವರೆಗೆ ಎಲ್ಲದರ ಉದಾಹರಣೆಗಳನ್ನು ಒದಗಿಸಿದ್ದಾರೆ. ಬಲಪಂಥೀಯ ನಿಲುವಿನ ಸುದರ್ಶನ್ ಟಿವಿ ಚಾನೆಲ್ ನ ವರದಿಗಾರ್ತಿ ಹಲ್ದಿರಾಮ್ ತಿಂಡಿಪೊಟ್ಟಣದಲ್ಲಿನ ಉರ್ದು ಬರಹಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದೇ ಈ ಚರ್ಚೆಗೆ ಕಾರಣ.
Here is some Urdu text. Will this reporter go to the Railways and ask what it is about? #Haldirams pic.twitter.com/DGZ8KDUoXv
— Drama Prasad Mukherjee (@KSasiKL1987) April 5, 2022
Boycott Gang lets start boycott indian currency… #Urdu #haldiram #Haldirams pic.twitter.com/cW6pDgmiTp
— Prince Siddique (@PrinceSidd786) April 5, 2022
ಈ ಹಿಂದೆ ಸುಪ್ರೀಂಕೋರ್ಟ್ ಇಸ್ಲಾಮೋಫೋಬಿಕ್ ವಿಷಯಕ್ಕಾಗಿ ಸುದರ್ಶನ್ ಟಿವಿಯನ್ನು ಖಂಡಿಸಿದೆ. ಆದರೆ ಸರ್ಕಾರವು “ಸರ್ಕಾರಿ ಸೇವೆಯಲ್ಲಿ ಮುಸ್ಲಿಮರ ನುಸುಳುವ ಪಿತೂರಿ” ನಂತಹ ವಿಷಯಗಳ ಕುರಿತು ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಅನುಮತಿ ನೀಡಿದೆ.
“ನಾಗರಿಕ ಸೇವೆಗಳನ್ನು ನುಸುಳುವ ಷಡ್ಯಂತ್ರದಲ್ಲಿ ಸಮುದಾಯವು ತೊಡಗಿಸಿಕೊಂಡಿದೆ ಎಂದು ಬಿಂಬಿಸುವ ಕುತಂತ್ರದ ಪ್ರಯತ್ನವನ್ನು ಮಾಡಲಾಗಿದೆ. ಸಂಚಿಕೆಗಳಲ್ಲಿ ಹಲವಾರು ಹೇಳಿಕೆಗಳನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿದೆ. ಕೇವಲ ಸ್ಪಷ್ಟವಾಗಿ ತಪ್ಪಾಗಿಲ್ಲ. ಆದರೆ ಸತ್ಯವನ್ನು ನಿರ್ಲಕ್ಷಿಸುವ ಉದ್ದೇಶದಿಂದ ಮಾಡಲಾಗಿದೆ ಎಂದು ಹೇಳಿದ ಸುಪ್ರೀಂಕೋರ್ಟ್ ಕಾರ್ಯಕ್ರಮವನ್ನು ನಿಲ್ಲಿಸಿತ್ತು.
“ನಾಗರಿಕ ಸೇವೆಗಳಲ್ಲಿ ಮುಸ್ಲಿಮರ ಒಳನುಸುಳುವಿಕೆ ಕುರಿತು ಸುದರ್ಶನ್ ಟಿವಿ ಶೋ ಕಪಟ ಮತ್ತು ಕ್ರೋಧದಿಂದ ಕೂಡಿದ್ದು. ಏಕೆಂದರೆ ಅದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸುತ್ತದೆ” ಎಂದು ಎರಡು ವರ್ಷಗಳ ಹಿಂದೆ ಚಾನೆಲ್‌ನ ದ್ವೇಷದ ವಿರುದ್ಧ ಕಾನೂನು ಮುಖಾಮುಖಿಯ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದ್ದರು.
“ನಾನು ಒಂದು ಸಂಚಿಕೆಯನ್ನು ನೋಡಿದ್ದೇನೆ ಮತ್ತು ಅದನ್ನು ವೀಕ್ಷಿಸಲು ನೋವಾಗುತ್ತದೆ. ಅನೇಕ ಚಿತ್ರಗಳು ಆಕ್ಷೇಪಾರ್ಹವಾಗಿವೆ ಮತ್ತು ಅವುಗಳನ್ನು ತೆಗೆದುಹಾಕಬೇಕಾಗಿದೆ ಎಂದು ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಹೇಳಿದ್ದರು.
ಇದನ್ನೂ ಓದಿ: Fact Check ಬಿರ್ಭೂಮ್ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆಯಾಗಿದೆಯೇ?; ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದ್ದು ಸುಳ್ಳು ಸುದ್ದಿ
Published On - 4:10 pm, Wed, 6 April 22