Gadag Jail: ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಬೈಬಲ್​ ಹಂಚುವ ಮೂಲಕ ಮತಾಂತರ ನಡೆಸಿದ ಆರೋಪ

Gadag district jail: ಅಧಿಕಾರಿಗಳ ಮೂಲಕ ಅವರ ಮೇಲೆ ಪರ ಧರ್ಮದ ಆಚಾರ ವಿಚಾರಗಳನ್ನ ಒತ್ತಾಯ ಪೂರ್ವಕಾಗಿ ಹೇರಲಾಗ್ತಿದೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಧರ್ಮ ಪ್ರಚಾರಕ್ಕೆ ಕಾರಾಗೃಹ ಪ್ರವೇಶಕ್ಕೆ ಅನುವು ನೀಡಿದ್ದಕ್ಕೆ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಎಸ್ ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿ, ಕಾರಾಗೃಹಕ್ಕೆ ಪ್ರವೇಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

Gadag Jail: ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಬೈಬಲ್​ ಹಂಚುವ ಮೂಲಕ ಮತಾಂತರ ನಡೆಸಿದ ಆರೋಪ
ಗದಗ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಧರ್ಮ ಗ್ರಂಥ ಹಂಚುವ ಮೂಲಕ ಮತಾಂತರ ಹುನ್ನಾರ ನಡೆಸಿದ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Apr 08, 2022 | 4:13 PM

ರಾಜ್ಯದಲ್ಲಿ ಮೊದಲೇ ಧರ್ಮ ಯುದ್ಧ ಆರಂಭವಾಗಿದೆ. ಇದರ ನಡುವೆ ಮತಾಂತರದ ಭೂತ ಆರಂಭವಾಗಿದೆ. ಕಾರಾಗೃಹದಲ್ಲಿನ ಖೈದಿಗಳನ್ನು ಮತಾಂತರ ಮಾಡಲು (religious conversion) ಸಂಚು ರೂಪಿಸಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಜೈಲಿನಲ್ಲಿ ಖೈದಿಗಳಿಗೆ ಕ್ರೈಸ್ತ ಧರ್ಮದ (Christian) ಪವಿತ್ರ ಬೈಬಲ್, ಎರಡನೇಯ ಭಾಗವಾದ ಹೊಸ ಒಡಂಬಡಿಕೆ ಎನ್ನುವ ಪುಸ್ತಕ ನೀಡಿ, ಮತಾಂತರ ಮಾಡಲಾಗುತ್ತಿದೆ ಎನ್ನುವ ಗಂಭೀರವಾದ ಆರೋಪ ಕೇಳಿ ಬಂದಿದೆ. ಹೀಗಾಗಿ ಮತಾಂತರ ವಿರುದ್ಧ ಹಿಂದೂ ಪರ ಸಂಘಟನೆಗಳು (VHP) ಸಿಡೆದೆದ್ದಿವೆ (Gadag district jail).

ಗದಗ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳಿಗೆ ಕ್ರೈಸ್ತರ ಧರ್ಮ ಗ್ರಂಥ ಹಂಚುವ ಮೂಲಕ ಮತಾಂತರ ಹುನ್ನಾರ ನಡೆಸಿರುವ ಆರೋಪ ಕೇಳಿ ಬಂದಿದೆ. ಕ್ರೈಸ್ತ ಧರ್ಮೀಯರು ಮಾರ್ಚ್ ತಿಂಗಳ 12 ನೇ ತಾರೀಕು ಕಾರಾಗೃಹ ವಿಸಿಟ್ ಮಾಡಿರುವ ವಿಚಾರ ಸದ್ಯ ಹೊಸ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಂದಹಾಗೆ ಬೆಂಗಳೂರು ಮೂಲದ ಪಾದ್ರಿ ಡ್ಯಾನಿಯಲ್ ಸೇರಿದಂತೆ ಏಳು ಜನರ ತಂಡ ಮಾರ್ಚ್ 12 ಕ್ಕೆ ಕಾರಾಗೃಹಕ್ಕೆ ವಿಸಿಟ್ ಮಾಡಿತ್ತು. ಪ್ರಾರ್ಥನೆ, ಕೈದಿಗಳ ಮನಃ ಪರಿವರ್ತನೆ ಕಾರ್ಯಕ್ರಮ ಹಿನ್ನೆಲೆ ತಂಡ ಭೇಟಿ ನೀಡಿತ್ತು ಎನ್ನಲಾಗಿದೆ.

ಆದ್ರೆ, ಪ್ರಾರ್ಥನೆ, ಭಜನೆ ಮಾಡೋದ್ರ ಜೊತೆಗೆ ಕ್ರೈಸ್ತರ ಧರ್ಮ ಗ್ರಂಥವಾಗಿರೋ ಬೈಬಲ್ ನ ಎರಡನೇ ಭಾಗ ಎಂದು ಕರೆಸಿಕೊಳ್ಳುವ ‘ಹೊಸ ಒಡಂಬಡಿಕೆ’ ಅನ್ನೋ ಪುಸ್ತಕವನ್ನ ಕೈದಿಗಳಿಗೆ ನೀಡಲಾಗಿದೆ. ಈ ಮೂಲಕ ವಿವಿಧ ಧರ್ಮೀಯ ಕೈದಿಗಳನ್ನ ಮತಾಂತರ ಮಾಡುವ ಹುನ್ನಾರ ನಡೆದಿದೆ ಅನ್ನೋ ಆರೋಪ ಕೇಳಿ ಬಂದಿದೆ. ಕಾರಾಗೃಹದಲ್ಲಿ ಪುಸ್ತಕ ಹಂಚುವುದರ ಜೊತೆಗೆ ಸುಮಾರು ಒಂದು ಗಂಟೆ ಕಾಲ ವಿವಿಧ ಕಾರ್ಯಕ್ರಮ ನಡೆದಿರೋ ಬಗ್ಗೆಯೂ ಮಾಹಿತಿ ಇದೆ.

ಜೈಲಿನಲ್ಲಿ ಇರೋ ಸುಮಾರು 90 ಕೈದಿಗಳು ಹಿಂದೂಗಳೇ ಆಗಿದ್ದಾರೆ.. ಇದೀಗ ಈ ವಿಷಯ ಜಿಲ್ಲೆಯಲ್ಲಿ ಭಾರಿ ಸಂಚಲನ ಮೂಡಿಸಿದ್ದು ಹಿಂದೂಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಗದಗ ಜೈಲ್ ನಲ್ಲಿ ಕ್ರೈಸ್ತರ ಹಾವಳಿ, ಮತ ಪ್ರಚಾರ, ಭಜನೆಯೊಂದಿಗೆ ಮಾಡ್ತಾಯಿದ್ದಾರೆ. ಇದನ್ನು ವಿಎಚ್​ಪಿ ಖಂಡಿಸುತ್ತದೆ. ಬೆಂಗಳೂರಿನಿಂದ ಆಗಮಿಸಿದವರಿಂದ ಇಲ್ಲಿ ಮತಪ್ರಚಾರ ನಡೆದಿದೆ. ರಾಜ್ಯಾದ್ಯಂತ ಜೈಲುಗಳಲ್ಲಿ ಮತಾಂತರ ನಡೆಸಿದೆ. ತಕ್ಷಣ ಇದು ನಿಲ್ಲಬೇಕು, ಇಲ್ಲವಾದ್ರೆ ಉಗ್ರ ಹೋರಾಟ ಮಾಡುವುದಾಗಿ ವಿಹಿಂಪ ಮುಖಂಡ ರಾಘವೇಂದ ಹಬೀಬ್ ಎಚ್ಚರಿಕೆ ನೀಡಿದ್ದಾರೆ.

ವಿಸಿಟ್ ನಂತರ ಕಾರಾಗೃಹದ ಆಚೆ ನಿಂತು ಡೆನಿಯಲ್ ಆ್ಯಂಡ್ ಟೀಂ ಫೋಟೋ ತೆಗೆಸಿಕೊಂಡಿದೆ. ಸದ್ಯ ಇದೇ ಪೋಟೋಗಳು ಈಗ ಭಾರಿ ಚರ್ಚೆಗೆ ಗ್ರಾಸವಾಗಿರುವುದು. ಜೈಲಿನಲ್ಲಿ ಸಹ ಕ್ರಿಶ್ಚಿಯನ್ ಪಾದ್ರಿಗಳು ತಮ್ಮ ಪ್ರಚಾರದ ಹುಚ್ಚನ್ನ ಹಬ್ಬಿಸಿದ್ದಾರೆ. ತಮ್ಮ ಧರ್ಮದ ಪ್ರಚಾರದ ತೆವಲು ಇದ್ದರೆ ಕೇವಲ ತಮ್ಮ ಧರ್ಮಕ್ಕೆ ಸೀಮಿತವಾದವರಿಗೆ ಪುಸ್ತಕ ಹಂಚಲಿ, ಇನ್ನೊಂದು ಕಾರ್ಯಕ್ರಮ ಮಾಡಲಿ, ಆದ್ರೆ ಜೈಲಿನಲ್ಲಿ ಇರೋ ಸುಮಾರು 90 ಕೈದಿಗಳು ಹಿಂದೂಗಳೇ ಆಗಿದ್ದಾರೆ.

ಅಧಿಕಾರಿಗಳ ಮೂಲಕ ಅವರ ಮೇಲೆ ಪರ ಧರ್ಮದ ಆಚಾರ ವಿಚಾರಗಳನ್ನ ಒತ್ತಾಯ ಪೂರ್ವಕಾಗಿ ಹೇರಲಾಗ್ತಿದೆ ಅಂತ ಆರೋಪಿಸಿದ್ದಾರೆ. ಹೀಗಾಗಿ ಧರ್ಮ ಪ್ರಚಾರಕ್ಕೆ ಕಾರಾಗೃಹ ಪ್ರವೇಶಕ್ಕೆ ಅನುವು ನೀಡಿದ್ದಕ್ಕೆ ಹಿಂದೂ ಪರ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿವೆ. ವಿಶ್ವ ಹಿಂದೂ ಪರಿಷತ್, ಬಜರಂಗದಳ ಕಾರ್ಯಕರ್ತರಿಂದ ಎಸ್ ಪಿ ಶಿವಪ್ರಕಾಶ್ ದೇವರಾಜು ಅವರಿಗೆ ಮನವಿ ಸಲ್ಲಿಸಿ, ಕಾರಾಗೃಹಕ್ಕೆ ಪ್ರವೇಶ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಆದ್ರೆ ಎಸ್ಪಿ ಅವರನ್ನು ಈ ಬಗ್ಗೆ ಕೇಳಿದ್ರೆ ಇದು ನನ್ನ ವ್ಯಾಪ್ತಿಗೆ ಬರಲ್ಲ ಎಂದಿದ್ದಾರೆ. ಮತಾಂತರ ಮಾಡುವ ಕೆಲಸ ಗದಗ ಜೈಲ್ ನಲ್ಲಿ ನಡೆದಿದೆ. ಇಷ್ಟೂ ದಿನ ಹಳ್ಳಿಗಳಲ್ಲಿ ಅನಕ್ಷರಸ್ಥರ ಟಾರ್ಗೆಟ್ ಮಾಡ್ತಾಯಿದ್ದರು. ಆದ್ರೆ, ಈಗ ಸರ್ಕಾರದ ಅಧೀನದಲ್ಲಿರೋ ಗದಗ ಜಿಲ್ಲಾ ಕಾರಾಗೃಹದಲ್ಲಿ ಮಾಡಿದ್ದು ಎಷ್ಟು ಸರಿ? ಅಂತಾ ಹಿಂದೂ ಮುಖಂಡ ಸ್ವರೂಪ ಪ್ರಶ್ನೆ ಎತ್ತಿದ್ದಾರೆ.

ಇನ್ನು ಈ ಬಗ್ಗೆ ಸ್ಪಷ್ಟೀಕರಣಕ್ಕಾಗಿ ಜೈಲಿನ ಮೇಲಾಧಿಕಾರಿಗಳನ್ನು ಸಂಪರ್ಕಿಸಿದರೂ ಅವರು ಸಂಪರ್ಕಕ್ಕೆ ಸಿಗಲಿಲ್ಲ. ಇತ್ತೀಚೆಗೆ ರಾಜ್ಯದಲ್ಲಿ ನಾನಾ ಧಾರ್ಮಿಕ ವಿಚಾರಗಳಿಗೆ ಧರ್ಮ ಸಂಘರ್ಷ ನಡೆಯುತ್ತಿದೆ. ಈ ನಡುವೆ ಪರ ಧರ್ಮದಲ್ಲಿರುವ ವಿಚಾರಗಳ ಪ್ರಚಾರಕ್ಕಾಗಿ ಜೈಲಿನಲ್ಲಿರೋ ಕೈದಿಗಳನ್ನ ಬಳಸಿಕೊಂಡಿರೋದು ಸದ್ಯ ಹೊಸ ವಿವಾದಕ್ಕೆ ನಾಂದಿ ಹಾಡಿದಂತಾಗಿದೆ. -ಸಂಜೀವ ಪಾಂಡ್ರೆ, ಟಿವಿ9, ಗದಗ

Published On - 4:08 pm, Fri, 8 April 22