AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಟ್ವಿಟರ್​ ಖಾತೆ ಹ್ಯಾಕ್​; ಹ್ಯಾಕರ್ಸ್​​ಗಳಿಂದ 100ಕ್ಕೂ ಹೆಚ್ಚು ಟ್ವೀಟ್​ಗಳು !

2021ರ ಡಿಸೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್​ ಅಕೌಂಟ್​ ಹ್ಯಾಕ್ ಆಗಿತ್ತು. ಹೀಗೆ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಭಾರತದಲ್ಲಿ ಬಿಟ್​ ಕಾಯಿನ್​ ಚಲಾವಣೆ ಕಾನೂನು ಬದ್ಧವಾಗಿದೆ ಎಂದು ಟ್ವೀಟ್ ಮಾಡಿದ್ದರು.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್​ ಕಚೇರಿ ಟ್ವಿಟರ್​ ಖಾತೆ ಹ್ಯಾಕ್​; ಹ್ಯಾಕರ್ಸ್​​ಗಳಿಂದ 100ಕ್ಕೂ ಹೆಚ್ಚು ಟ್ವೀಟ್​ಗಳು !
ಸಿಎಂಒ ಟ್ವಿಟರ್ ಅಕೌಂಟ್​ ಮರುಸ್ಥಾಪಿಸಲಾಗಿದೆ.
TV9 Web
| Updated By: Lakshmi Hegde|

Updated on:Apr 09, 2022 | 8:06 AM

Share

ಉತ್ತರ ಪ್ರದೇಶ ಮುಖ್ಯಮಂತ್ರಿ ಕಚೇರಿಯ ಟ್ವಿಟರ್ ಇಂದು ಮುಂಜಾನೆ ಹೊತ್ತಿಗೆ ಅಕೌಂಟ್​ ಹ್ಯಾಕ್​ ಆಗಿತ್ತು. ಸುಮಾರು 4 ತಾಸುಗಳ ಬಳಿಕ  ಭಾಗಶಃ ಸರಿಪಡಿಸಲಾಗಿದ್ದು, ಹ್ಯಾಕ್​ ಮಾಡಿದ ಕಿಡಿಗೇಡಿಗಳು ಮಾಡಿದ್ದ ಟ್ವೀಟ್​ಗಳನ್ನೆಲ್ಲ ಡಿಲೀಟ್ ಮಾಡಲಾಗಿದೆ. ಯುಪಿ ಮುಖ್ಯಮಂತ್ರಿ ಕಚೇರಿಯ ಟ್ವಿಟರ್​ನ್ನು ಹ್ಯಾಕ್​ ಮಾಡಿದವರು ಆ ಖಾತೆಯಿಂದ 100ಕ್ಕೂ ಅಧಿಕ ಟ್ವೀಟ್ ಮಾಡಿದ್ದರು. ಅಲ್ಲದೆ, ಟ್ವಿಟರ್​ ಖಾತೆಯ ಪ್ರೊಫೈಲ್​​ನಲ್ಲಿದ್ದ ಯೋಗಿ ಆದಿತ್ಯನಾಥ್​ ಫೋಟೋವನ್ನೂ ತೆಗೆದುಹಾಕಿದ್ದರು.  BAYC/MAYC  ಮೊಬೈಲ್​ ಗೇಮ್​ಗೆ ಸಂಬಂಧಿಸಿದ ಟ್ವೀಟ್​​ಗಳನ್ನು ಹಾಕಿದ್ದರು. ಪ್ರೊಫೈಲ್​ ಫೋಟೋವೂ ಕೂಡ ಈ ಗೇಮ್​ನಲ್ಲಿ ಬರುವ ವಾನರನದ್ದೇ ಇತ್ತು. ಅದರ ಪ್ರೊಫೈಲ್​ ಫೋಟೋ ಬದಲಾಗಿದ್ದು ಮತ್ತು ಟ್ವೀಟ್​ಗಳನ್ನು ನೋಡಿದ ನೆಟ್ಟಿಗರು ಅನೇಕರು ದೂರು ನೀಡಿದ್ದಾರೆ. ಈ ಟ್ವಿಟರ್ ಖಾತೆ ಹ್ಯಾಕ್​ ಆಗಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಅಂತೂ ಅದನ್ನು ಭಾಗಶಃ ಸರಿಪಡಿಸಿರುವ ತಂತ್ರಜ್ಞರ ತಂಡ, ಮತ್ತೆ ಸಿಎಂ ಯೋಗಿ ಫೋಟೋವನ್ನೇ ಹಾಕಿಟ್ಟಿದೆ.

CMO Hack

ಟ್ವಿಟರ್ ಹ್ಯಾಕ್ ಆದಾಗ ಅದರಲ್ಲಿದ್ದ ಪ್ರೊಫೈಲ್​

ಸರ್ಕಾರಿ ಕಚೇರಿಗಳ ಟ್ವಿಟರ್ ಖಾತೆಗಳು ಹ್ಯಾಕ್​ ಆಗುತ್ತಿರುವುದು ಇದೇ ಮೊದಲೇನೂ ಅಲ್ಲ. 2021ರ ಡಿಸೆಂಬರ್​ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್​ ಅಕೌಂಟ್​ ಹ್ಯಾಕ್ ಆಗಿತ್ತು. ಹೀಗೆ ಹ್ಯಾಕ್ ಮಾಡಿದ್ದ ಕಿಡಿಗೇಡಿಗಳು, ಭಾರತದಲ್ಲಿ ಬಿಟ್​ ಕಾಯಿನ್​ ಚಲಾವಣೆ ಕಾನೂನು ಬದ್ಧವಾಗಿದೆ. ಅದಕ್ಕೆ ಸಂಬಂಧಪಟ್ಟು ಕಾನೂನು ರಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ಟ್ವೀಟ್ ಮಾಡಿದ್ದರು. ಬಳಿಕ ಪ್ರಧಾನಿ ಮಂತ್ರಿ ಕಚೇರಿಯ ಟ್ವಿಟರ್​ ಅಕೌಂಟ್​​ನಿಂದ ಟ್ವೀಟ್ ಮಾಡಿ, ಪಿಎಂ ಮೋದಿ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಅದನ್ನು ಮರುಸ್ಥಾಪಿಸಲು ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ. ಬಿಟ್​ಕಾಯಿನ್​ ಕುರಿತು ಮಾಡಲಾದ ಯಾವುದೇ ಟ್ವೀಟ್​​ನ್ನೂ ನಂಬಬೇಡಿ ಎಂದು ತಿಳಿಸಲಾಗಿತ್ತು.

ಅದಾಗಿ ಸರಿಯಾಗಿ ಒಂದು ತಿಂಗಳ ಬಳಿಕ, ಅಂದರೆ 2022ರ ಜನವರಿ 12ರಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್​ ಮಾಡಿದ್ದ ಹ್ಯಾಕರ್ಸ್​ಗಳು, ಖಾತೆಯ ಹೆಸರನ್ನು ಎಲೋನ್​ ಮಸ್ಕ್​ (Elon Musk) ಎಂದು ಬದಲಿಸಿದ್ದರು. ಹಾಗೇ, ಗ್ರೇಟ್​ ಜಾಬ್​ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್​ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿತ್ತು. ಹ್ಯಾಕರ್ಸ್​​ಗಳ ಕೈಯಿಂದ ವಾಪಸ್​ ಅಕೌಂಟ್​​ನ್ನು ಪಡೆದು, ಪ್ರೊಫೈಲ್​​ನ್ನು ಬದಲಿಸಿಕೊಂಡು, ಟ್ವೀಟ್​ಗಳನ್ನೂ ಡಿಲೀಟ್​ ಮಾಡಿತ್ತು.

ಇದನ್ನೂ ಓದಿ: ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗ ಉತ್ಸವಕ್ಕೆ ಅಧಿಕೃತ ಚಾಲನೆ; ರಥದಲ್ಲಿ ದೇವರ ಮೂರ್ತಿ ಪ್ರತಿಷ್ಠಾಪಿಸಿ ವಿಶೇಷ ಅಲಂಕಾರ

Published On - 8:03 am, Sat, 9 April 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?