ಬೆಂಗಳೂರಿನ ರೇಸ್​ಕೋರ್ಸ್ ಬುಕ್ಕಿಂಗ್ ಕೌಂಟರ್​ಗಳ ಮೇಲೆ ಸಿಸಿಬಿ ಪೊಲೀಸ್ ದಾಳಿ

CCB Police Raids on race course: ಬೆಂಗಳೂರುಇನ ರೇಸ್​ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ.

ಬೆಂಗಳೂರಿನ ರೇಸ್​ಕೋರ್ಸ್ ಬುಕ್ಕಿಂಗ್ ಕೌಂಟರ್​ಗಳ ಮೇಲೆ ಸಿಸಿಬಿ ಪೊಲೀಸ್ ದಾಳಿ
ಸಿಸಿಬಿ
Updated By: ರಮೇಶ್ ಬಿ. ಜವಳಗೇರಾ

Updated on: Jan 12, 2024 | 9:28 PM

ಬೆಂಗಳೂರು, (ಜನವರಿ 12): ನಗರದ ರೇಸ್​ಕೋರ್ಸ್ (Bengaluru race course ) ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ಪೊಲೀಸರು (CCB Police) ದಾಳಿ ಮಾಡಿದ್ದಾರೆ. ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಹಾಗೂ ಜಿಎಸ್​ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಮೇಲೆ ರೇಸ್​ಕೋರ್ಸ್ ಬುಕ್ಕಿಂಗ್ ಕೌಂಟರ್ ಮೇಲೆ ಸಿಸಿಬಿ ದಾಳಿ ಮಾಡಿದ್ದು, ಬುಕ್ಕಿ ಕೌಂಟರ್​ಗಳನ್ನ ಲಾಕ್​ ಮಾಡಿದ್ದಾರೆ. ಅಲ್ಲದೇ ಕೌಂಟರ್​ನಲ್ಲಿನ ಸಿಬ್ಬಂದಿ ಹೊರ ಹೋಗದಂತೆ ಲಾಕ್ ಪರಿಶೀಲನೆ ನಡೆಸಿದ್ದಾರೆ.

ಜನರಿಂದ ಹೆಚ್ಚು ಹಣ ಪಡೆದು ಕಡಿಮೆ ಮೊತ್ತಕ್ಕೆ ಟಿಕೆಟ್ ಮಾರಾಟ, ನಿಗದಿತ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ, ಜಿಎಸ್​ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಹಿನ್ನೆಲೆಯಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಬರೋಬ್ಬರಿ 3 ಕೋಟಿ 47 ಲಕ್ಷ ರೂ. ಹಣ  ಜಪ್ತಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಎಎ ಅಸೋಸಿಯೇಟ್ಸ್,ಸಾಮ್ರಾಟ್ ಅಂಡ್ ಕೋ. ನೀಲಕಂಠ, ಮೆಟ್ರೊ ಅಸೋಸಿಯೇಟ್ಸ್, ಶೆಟ್ಟಿ ಅಸೋಸಿಯೇಟ್ಸ್, ಮೇಘನ ಎಂಟರ್ ಪ್ರೈಸಸ್,ಮಂಜು ಅಸೋಸಿಯೇಟ್ಸ್, ಮಾರುತಿ ಎಂಟರ್ ಪ್ರೈಸಸ್,ಆದಿತ್ಯ ಎಂಟರ್ ಪ್ರೈಸಸ್, ಪರಸ್ ಅಂಡ್ ಕೋ,ಬನಶಂಕರಿ ಎಂಟರ್ ಪ್ರೈಸಸ್, ಶ್ರೀಹರಿ ಎಂಟರ್ ಪ್ರೈಸಸ್,ತೇಜಸ್ವಿನಿ ಎಂಟರ್ ಪ್ರೈಸಸ್, ಸೂರ್ಯ ಅಂಡ್ ಕೋ, ಹೆಚ್ಎನ್ಎಸ್ ಅಂಡ್ ಕೋ,ಸಾಯಿ ರತನ್,ವಿಕ್ರಾಂತ್ ಎಂಟರ್ ಪ್ರೈಸಸ್, ನಿರ್ಮಲ್ ಅಂಡ್ ಕೋ,ಶ್ರೀರಾಮ ಎಂಟರ್ ಪ್ರೈಸಸ್, ಚಾಮುಂಡೇಶ್ವರಿ ಎಂಟರ್ ಪ್ರೈಸಸ್, ಆರ್‌.ಆರ್ ಎಂಟರ್ ಪ್ರೈಸಸ್, ರಾಯಲ್ ಇಎನ್ ಟಿಪಿ,ಆರ್.ಕೆ.ಎಂಟರ್ ಪ್ರೈಸಸ್
ಶ್ರೀವಾರಿ ಆ್ಯಂಡ ಕಂಪನಿ, ಕಾರ್ತಿಕ್ ಆ್ಯಂಡ ಕಂಪನಿ, ಅಮೃತಾಯ ಕೌಂಟರ್ ಗಳಲ್ಲಿ ಸಿಸಿಬಿ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

Published On - 6:39 pm, Fri, 12 January 24