AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಇಂದು 163 ಜನರಿಗೆ ಕೊರೊನಾ: 994 ಜನರಲ್ಲಿ ಸೋಂಕು ಸಕ್ರಿಯ

ರಾಜ್ಯದಲ್ಲಿ ಇಂದು 163 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು 50 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2.54ರಷ್ಟಿದೆ. ಕಳೆದ 24 ಗಂಟೆಯಲ್ಲಿ 6,396 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ರಾಜ್ಯದಲ್ಲಿ 994 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿವೆ. ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ. 

ರಾಜ್ಯದಲ್ಲಿ ಇಂದು 163 ಜನರಿಗೆ ಕೊರೊನಾ: 994 ಜನರಲ್ಲಿ ಸೋಂಕು ಸಕ್ರಿಯ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jan 12, 2024 | 8:01 PM

Share

ಬೆಂಗಳೂರು, ಜನವರಿ 12: ರಾಜ್ಯದಲ್ಲಿ ಇಂದು 163 ಜನರಿಗೆ ಕೊರೊನಾ ಸೋಂಕು (Coronavirus) ದೃಢಪಟ್ಟಿದ್ದು, ಬೆಂಗಳೂರಿನಲ್ಲಿ ಇಂದು 50 ಜನರಿಗೆ ಕೊರೊನಾ ದೃಢಪಟ್ಟಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇ.2.54ರಷ್ಟಿದೆ. ಕಳೆದ 24 ಗಂಟೆಯಲ್ಲಿ 6,396 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, ರಾಜ್ಯದಲ್ಲಿ 994 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿವೆ. 162 ಕೊರೊನಾ ಸೋಂಕಿತರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.

ಯಾವೆಲ್ಲ ಜಿಲ್ಲೆಗಳಲ್ಲಿ ಕೊರೊನಾ 

ಬಾಗಲಕೋಟೆ 1, ಬಳ್ಳಾರಿ 5, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 8, ಚಾಮರಾಜನಗರ 3, ಚಿಕ್ಕಬಳ್ಳಾಪುರ 2, ಚಿಕ್ಕಮಗಳೂರು 4, ಚಿತ್ರದುರ್ಗ 5, ದಕ್ಷಿಣ ಕನ್ನಡ 7, ಧಾರವಾಡ 6, ಗದಗ 3, ಹಾಸನ 10, ಕಲಬುರಗಿ 3, ಕೋಲಾರ 1, ಕೊಪ್ಪಳ 2, ಮಂಡ್ಯ 8, ಮೈಸೂರು 27, ರಾಯಚೂರು 2, ಶಿವಮೊಗ್ಗ 2, ತುಮಕೂರು 9, ಉತ್ತರ ಕನ್ನಡ 1, ವಿಜಯನಗರ 2 ಕೇಸ್ ದೃಢಪಟ್ಟಿವೆ.

ಇದನ್ನೂ ಓದಿ: ಕೋವಿಡ್​ನಿಂದ ಮೃತಪಟ್ಟವರ ಅಂತ್ಯಕ್ರಿಯೆ ಸ್ಮಶಾನ, ಚಿತಾಗಾರದಲ್ಲಿ ನಿರಾಕರಿಸದಂತೆ ಸುತ್ತೋಲೆ

ಕೊರೊನಾ ವೈರಸ್​​ನ ಒಮಿಕ್ರಾನ್ ರೂಪಾಂತರ ಜೆಎನ್​.1 ಹರಡುವಿಕೆ ತೀವ್ರಗೊಂಡ ಬೆನ್ನಲ್ಲೇ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತ್ತು. ರಾಜ್ಯದಲ್ಲಿ ಇದುವರೆಗೆ ಕೊವಿಡ್​ಗೆ 26 ಜನರು ಮೃತಪಟ್ಟಿದ್ದಾರೆ. ಈ ಪೈಕಿ 21 ಡೆತ್​ಗಳ ಆಡಿಟ್​ ಮಾಡಲಾಗಿದೆ. ಈ ಪೈಕಿ 2 ಕೇಸ್ ಕೊವಿಡ್​​ನಿಂದ ಆಗಿದೆ ಅಂದಿದ್ದಾರೆ. 18 ಡೆತ್​ ಕೇಸ್​ ಕೊವಿಡ್​ಗೆ ಸಂಬಂಧವಿಲ್ಲ ಎಂದು ಇತ್ತೀಚೆಗೆ ಸಚಿವ ದಿನೇಶ್ ಗುಂಡೂರಾವ್​ ಮಾಹಿತಿ ನೀಡಿದ್ದರು.

ಇದನ್ನೂ ಓದಿ: ಕೋವಿಡ್ ಪರಿಣಾಮ: ಬೆಂಗಳೂರಿನ ಶೇ 30ರಷ್ಟು ಮಂದಿಯಲ್ಲಿ ಹೆಚ್ಚಾದ ಗೊರಕೆ ಸಮಸ್ಯೆ

ಕೊವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆ ನಡೆಸುವ ಕುರಿತಾಗಿ ಆರೋಗ್ಯ ಇಲಾಖೆಯಿಂದ ಸುತ್ತೋಲೆ ಹೊರಡಿಸಿದೆ. ರಾಜ್ಯದ ಜಿಲ್ಲೆಗಳಲ್ಲಿ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ 19 ಸೋಂಕಿನಿಂದ ಮರಣ ಹೊಂದಿದವರ ಅಂತ್ಯಕ್ರಿಯೆಯನ್ನು ಸಾಮಾನ್ಯ ಚಿತಾಗಾರ, ಸ್ಮಶಾನ ಮತ್ತು ರುದ್ರಭೂಮಿಯಲ್ಲಿ ನಡೆಸುವಂತೆ ಸೂಚಿಸಲಾಗಿದೆ.

ಕೋವಿಡ್ ಸೋಂಕಿನ ಪರಿಣಾಮ ಬೆಂಗಳೂರಿನ ಜನರಲ್ಲಿ ಗೊರಕೆ ಸಮಸ್ಯೆ ಹೆಚ್ಚಾಗುತ್ತಿರುವ ಬಗ್ಗೆ ವರದಿಯಾಗಿದೆ. ಕೊರೊನಾ ಬಳಿಕ ರಾಜಧಾನಿ ಬೆಂಗಳೂರಿನ ಶೇ 30 ರಷ್ಟು ಜನರಲ್ಲಿ ಗೊರಕೆ ಸಮಸ್ಯೆ ಕಾಣಿಸಿದೆ ಎನ್ನಲಾಗುತ್ತಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.