AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ಸಿಸಿಬಿ ದಾಳಿ; ಆಸ್ತಿಪತ್ರ, ಚೆಕ್​ಗಳು ಜಪ್ತಿ

ಅನಿಲ್ ಎಂಬುವವರ ಮೇಲೆ ಅಮಾಯಕರಿಗೆ ಬೆದರಿಸಿ ನಿವೇಶನ ಕಬಳಿಸಿರುವ ದೂರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರದ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ್​​ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಅನಿಲ್​ ಮನೆಯಲ್ಲಿ ಸಿಕ್ಕ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಜೊತೆಗೆ ನಗರದ ಅನೇಕ ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ನಡೆದಿದೆ.

ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ಸಿಸಿಬಿ ದಾಳಿ; ಆಸ್ತಿಪತ್ರ, ಚೆಕ್​ಗಳು ಜಪ್ತಿ
ಸಿಸಿಬಿ
Shivaprasad B
| Updated By: ಆಯೇಷಾ ಬಾನು|

Updated on:Dec 21, 2023 | 9:03 AM

Share

ಬೆಂಗಳೂರು,ಡಿ.21: ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ಸಿಸಿಬಿ (CCB) ದಾಳಿ ನಡೆಸಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಬೆಂಗಳೂರಿನ (Bengaluru) ಅನ್ನಪೂರ್ಣೇಶ್ವರಿ ನಗರ ರೌಡಿಶೀಟರ್ ಅನಿಲ್ ಕುಮಾರ್, ಯಶವಂತಪುರ ರೌಡಿಶೀಟರ್ ಗಿರೀಶ್ ಅಲಿಯಾಸ್​​​ ರಾಬರಿ ಗಿರಿ, ವಿವೇಕನಗರ ರೌಡಿಶೀಟರ್​ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿ ಅನೇಕರ ಮನೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ತಲಾಶ್ ಮಾಡಿದ್ದಾರೆ. ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್​ಗಳು ಪತ್ತೆಯಾಗಿವೆ.

ಸಿಸಿಬಿ ಅಧಿಕಾರಿಗಳು ಏಕಾಏಕಿ ರೌಡಿಶೀಟರ್ಸ್​, ಮೀಟರ್​ ಬಡ್ಡಿ ನಡೆಸ್ತಿದ್ದವರ ಮನೆ ಮೇಲೆ ದಾಳಿ ಮಾಡಿ ತಪಾಸಣೆ ನಡೆಸಿದ್ದಾರೆ. ಬೋರ್ ವೆಲ್ ಅನಿಲ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್​ಗಳು ಪತ್ತೆಯಾಗಿವೆ. ಅನಿಲ್ ಮೇಲೆ ಅಮಾಯಕರಿಗೆ ಬೆದರಿಸಿ ನಿವೇಶನ ಕಬಳಿಸಿರುವ ದೂರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರದ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಅನಿಲ್​​ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಅನಿಲ್​ ಮನೆಯಲ್ಲಿ ಸಿಕ್ಕ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ. ಉದ್ಯಮಿ ಕೃಷ್ಣೇಗೌಡ ಕಚೇರಿ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಿನದ‌ ಲೆಕ್ಕದಲ್ಲಿ ಬಡ್ಡಿ ವ್ಯವಹಾರ ನಡೆಸುತ್ತಿದ್ದ ಕೃಷ್ಣೇಗೌಡರ ಕಚೇರಿಯಲ್ಲಿ ಅಗ್ರಿಮೆಂಟ್ ಪೇಪರ್, ಚೆಕ್​ಗಳು ಪತ್ತೆಯಾಗಿವೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಹನಿಟ್ರ್ಯಾಪ್ ಬಲೆಗೆ ಬಿದ್ದ ಉದ್ಯಮಿ: ದಂಪತಿ ಸಹಿತ ನಾಲ್ವರನ್ನು ಬಂಧಿಸಿದ ಸಿಸಿಬಿ

ಆಸ್ತಿ ತೆರಿಗೆ ರಶೀದಿಗೆ QRಕೋಡ್ ಅಳವಡಿಸಿ

ಆಸ್ತಿ ತೆರಿಗೆ ರಶೀದಿ, ಖಾತಾ, ನಕ್ಷೆ ಮಂಜೂರಾತಿಗೆ ಕ್ಯೂಆರ್ ಕೋಡ್ ನೀಡಿ ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಬಿಬಿಎಂಪಿಗೆ ನ್ಯಾ.ಸೂರಜ್ ಗೋವಿಂದರಾಜ್​ ಅವರಿದ್ದ ಹೈಕೋರ್ಟ್ ಪೀಠ ನಿರ್ದೇಶನ ಮಾಡಿದೆ. ಡಿಜಿಲಾಕರ್ ವ್ಯವಸ್ಥೆಯಿರುವ ಈ ಕಾಲದಲ್ಲೂ ಬಿಬಿಎಂಪಿ ತಂತ್ರಜ್ಞಾನ ಅಳವಡಿಸಿಕೊಂಡಿಲ್ಲ. ಕೋರ್ಟ್​ಗಳಲ್ಲೂ ತೀರ್ಪುಗಳಿಗೆ ಕ್ಯೂಆರ್ ಕೋಡ್ ಹಾಕಲಾಗುತ್ತಿದೆ. ಆಸ್ತಿಯ ನಕಲಿ ಖಾತಾ ತಡೆಗೆ QRಕೋಡ್ ಅಳವಡಿಸಬೇಕು ಎಂದು ಬಿಬಿಎಂಪಿ ದಾಖಲೆಗಳ ಡಿಜಿಟಲೀಕರಣ ಮಾಡಲು ಮುಂದಾಗಬೇಕು ಎಂದು ಬಿಬಿಎಂಪಿಗೆ ಹೈಕೋರ್ಟ್​​ ಸೂಚಿಸಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:01 am, Thu, 21 December 23

ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಜಾಲಹಳ್ಳಿಯಲ್ಲಿ ಫ್ಲೈಓವರ್ ಪಿಲ್ಲರ್ ಎಡೆಯಲ್ಲಿ ಆರಾಮವಾಗಿ ಮಲಗಿದ ವ್ಯಕ್ತಿ!
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಬೆತ್ ಮೂನಿಯ ಭರ್ಜರಿ ಸೆಂಚುರಿಯೊಂದಿಗೆ ಗೆದ್ದು ಬೀಗಿದ ಸ್ಕಾಚರ್ಸ್
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ಗಿಲ್ಲಿ-ಕಾವ್ಯಾ ನಡುವೆ ಇನ್ನೂ ಮುಗಿದಿಲ್ಲ ಹುಸಿಮುನಿಸು
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ದಾಂಪತ್ಯದಲ್ಲಿ ಈ ಐದು ವಿಷಯಗಳನ್ನು ಗಂಡನಿಗೆ ಹೆಂಡತಿ ಹೇಳಲೇಬಾರದು!
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ಗುರುಗಳ ಲಹರಿ ಇರುವ ಈ ದಿನ ಹೇಗಿರಲಿದೆ ನಿಮ್ಮ ಭವಿಷ್ಯ? ಇಲ್ಲಿದೆ ವಿವರಣೆ
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೇವಸ್ಥಾನದೊಳಗೆ ದೇವರೆದುರು ಕುಳಿತಿದ್ದಾಗಲೇ ಪ್ರಾಣ ಬಿಟ್ಟ ಭಕ್ತ!
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ದೆಹಲಿ ಸ್ಫೋಟದ ಶೀಘ್ರ ತನಿಖೆಗೆ ನಿರ್ಧಾರ; ಸಚಿವ ಅಶ್ವಿನಿ ವೈಷ್ಣವ್
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಕಾರು ಡಿಕ್ಕಿ ಹೊಡೆದ ರಭಸಕ್ಕೆ ಗಿರಕಿ ಹೊಡೆದ ಆಟೋ: ಎದೆ ಝಲ್​ ಎನ್ನುವ ದೃಶ್ಯ
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಬೋಟ್ಸ್ವಾನದೊಂದಿಗಿನ ಸಂಬಂಧ ಗಟ್ಟಿಗೊಳಿಸಲು ಬದ್ಧ; ರಾಷ್ಟ್ರಪತಿ ಮುರ್ಮು
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್
ಹುಲಿವೇಷದ ಕುರಿತ ‘ಮಾರ್ನಮಿ’ ಸಿನಿಮಾ ಬಗ್ಗೆ ಮನಸಾರೆ ಮಾತಾಡಿದ ಕಿಚ್ಚ ಸುದೀಪ್