ಬೆಂಗಳೂರು, ಡಿ.27: ಕರ್ನಾಟಕದ ತೆಂಗು ಬೆಳೆಗಾರರಿಗೆ (Coconut Growers) ಕೇಂದ್ರ ಸರ್ಕಾರ(Central Government) ಬಂಪರ್ ಕೊಡುಗೆ ನೀಡಿದೆ. ಇಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಬ್ಬರಿ ಖರೀದಿಯ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ದೊರೆತಿದೆ. ಅದರಂತೆ ಮಿಲ್ಲಿಂಗ್ ಕೊಬ್ಬರಿ ಹಾಗೂ ಪೂರ್ಣ ಕೊಬ್ಬರಿಗೆ ಕ್ರಮವಾಗಿ ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ ಹಾಗೂ 250 ರೂಪಾಯಿ ಹೆಚ್ಚಳ ಮಾಡಲಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ(R Ashoka) ಟ್ವೀಟ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಕೋರಿದ್ದಾರೆ.
ರೈತರ ಪರಿಶ್ರಮಕ್ಕೆ ನ್ಯಾಯ ಒದಗಿಸಲು, ಅನ್ನದಾತರ ಆದಾಯ ಹೆಚ್ಚಿಸಲು ಕೇಂದ್ರ ಬಿಜೆಪಿ ಸರ್ಕಾರ ಸದಾ ಬದ್ಧತೆ ತೋರಿದೆ. ರಾಜ್ಯದ ತೆಂಗು ಬೆಳೆಗಾರರ ಮನವಿಗೆ ಸ್ಪಂದಿಸಿದ ಪ್ರಧಾನಿ ಅವರಿಗೆ ಕೃತಜ್ಞತೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಕರ್ನಾಟಕದ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರದ ಬಂಪರ್ ಕೊಡುಗೆ!
ಇಂದಿನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೊಬ್ಬರಿ ಖರೀದಿಯ ಬೆಂಬಲ ಬೆಲೆಯನ್ನು ಹೆಚ್ಚಿಸಲು ಅನುಮೋದನೆ ದೊರೆತಿದ್ದು, ಮಿಲ್ಲಿಂಗ್ ಕೊಬ್ಬರಿ ಹಾಗೂ ಪೂರ್ಣ ಕೊಬ್ಬರಿಗೆ ಕ್ರಮವಾಗಿ
ಪ್ರತಿ ಕ್ವಿಂಟಾಲ್‌ಗೆ 300 ರೂಪಾಯಿ ಹಾಗೂ 250 ರೂಪಾಯಿ ಹೆಚ್ಚಳ ಮಾಡಲಾಗಿದೆ.ರೈತರ… pic.twitter.com/HmDeaIpVmS
— R. Ashoka (ಆರ್. ಅಶೋಕ) (@RAshokaBJP) December 27, 2023
2023 ಅಕ್ಟೋಬರ್ 02 ರಂದು ಕೇಂದ್ರದಿಂದ ಪ್ರತಿ ಕ್ವಿಂಟಾಲ್‌ಗೆ 20 ಸಾವಿರ ರೂ.ಗಳ ಕನಿಷ್ಠ ಬೆಂಬಲ ಬೆಲೆ ಮತ್ತು ರಾಜ್ಯ ಸರ್ಕಾರದಿಂದ ಪ್ರತಿ ಕ್ವಿಂಟಾಲ್‌ಗೆ 5 ಸಾವಿರ ರೂ.ಗಳ ಹೆಚ್ಚುವರಿ ಬೆಂಬಲ ಹಣ ನೀಡುವಂತೆ ಒತ್ತಾಯಿಸಿದ್ದರು. ಅಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ಕಳೆದ 5ರಿಂದ6 ವರ್ಷಗಳಿಂದ ಕೊಬ್ಬರಿ ಬೆಲೆ ಕ್ವಿಂಟಾಲ್‌ಗೆ 18 ಸಾವಿರ ರೂ.ಗಳಿಂದ ಕೇವಲ 7,000 ರೂ.ಗೆ ಕುಸಿದಿದ್ದರಿಂದ ರಾಜ್ಯದ ತೆಂಗು ಬೆಳೆಗಾರರು ತೀವ್ರ ಸಂಕಷ್ಟದಲ್ಲಿದ್ದಾರೆ. ಕೇಂದ್ರ ಸರ್ಕಾರದ ರೈತ ವಿರೋಧಿ ಆಮದು-ರಫ್ತು ನೀತಿಯೇ ಬೆಲೆ ಕುಸಿತಕ್ಕೆ ಪ್ರಮುಖ ಕಾರಣ ಎಂದು ಹೇಳಿದ್ದರು. ಇದೀಗ ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.