ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ವಂಚನೆ: ಚೈತ್ರಾ ಕುಂದಾಪುರ ಆ್ಯಂಡ್​ ಗ್ಯಾಂಗ್​​ ಇಂದು ಪರಪ್ಪನ ಅಗ್ರಹಾರ ಜೈಲಿಗೆ ?

Chaitra Kundapura Case: ಬಿಜೆಪಿ ಎಂಎಲ್ಎ ಟಿಕೆಟ್​ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎ3 ಅಭಿನವ ಹಾಲಶ್ರೀ ಸ್ವಾಮೀಜಿ ಹೊರತುಪಡಿಸಿ ಎಲ್ಲ ಆರೋಪಿಗಳನ್ನು ಸಿಸಿಬಿ ಪೊಲೀಸರು ಇಂದು ನ್ಯಾಯಾದೀಶರ ಮುಂದೆ ಹಾಜರುಪಡಿಸಲಿದ್ದಾರೆ.

ಬಿಜೆಪಿ ಟಿಕೆಟ್​ ಕೊಡಿಸುವುದಾಗಿ ವಂಚನೆ: ಚೈತ್ರಾ ಕುಂದಾಪುರ ಆ್ಯಂಡ್​ ಗ್ಯಾಂಗ್​​ ಇಂದು ಪರಪ್ಪನ ಅಗ್ರಹಾರ ಜೈಲಿಗೆ ?
ಚೈತ್ರಾ ಕುಂದಾಪುರ
Edited By:

Updated on: Sep 23, 2023 | 8:28 AM

ಬೆಂಗಳೂರು ಸೆ.22: ಬಿಜೆಪಿ (BJP) ಎಂಎಲ್ಎ ಟಿಕೆಟ್​ ಕೊಡಿಸುವುದಾಗಿ ಉದ್ಯಮಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ​​ಸಿಸಿಬಿ ಪೊಲೀಸರು (CCB Police) ತನಿಖೆ ವೇಳೆ ಆರೋಪಿಗಳಿಂದ ಮೂರು ಕೋಟಿ ರೂ. ಅಧಿಕ ವಂಚನೆ ಹಣವನ್ನು ಜಪ್ತಿ ಮಾಡಿಕೊಂಡಿದ್ದಾರೆ. ಸಿಸಿಬಿ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಈ ವೇಳೆ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಇನ್ನು ಇಂದು (ಸೆ.23) ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶನಿವಾರ ನ್ಯಾಯಾದೀಶರ ಮುಂದೆ ಹಾಜರು ಪಡಿಸಲಿದ್ದಾರೆ.

ಎ3 ಅಭಿನವ ಹಾಲಶ್ರೀ ಸ್ವಾಮೀಜಿ ಹೊರತುಪಡಿಸಿ ಎ1 ಚೈತ್ರಾ ಕುಂದಾಪುರ, ಎ2 ಗಗನ್ ಕಡೂರು, ಎ4 ರಮೇಶ್, ಎ5 ಚೆನ್ನನಾಯ್ಕ್, ಎ6 ಧನರಾಜ್, ಎ7 ಶ್ರೀಕಾಂತ್ ಆರೋಪಿಗಳನ್ನು ಇಂದು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ. ಸದ್ಯ ಸಿಸಿಬಿ ವಶಕ್ಕೆ ಪಡೆಯುವ ಸಾಧ್ಯತೆಗಳಿಲ್ಲದ ಹಿನ್ನೆಲೆಯಲ್ಲಿ ಬಂಧಿತ ಆರೋಪಿಗಳನ್ನು ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೆ ನೀಡುವ ಸಾಧ್ಯತೆ ಇದೆ.

ಚೈತ್ರಾ ಕುಂದಾಪುರ ಪ್ರಕರಣ

ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್​  ಗೋವಿಂದಬಾಬು ಪೂಜಾರಿ ಎಂಬುವರಿಗೆ ಬೈಂದೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ಹೇಳಿದ್ದರು. ಇದನ್ನು ನಂಬಿದ ಗೋವಿಂದಬಾಬು ಪೂಜಾರಿಯವರು ಚೈತ್ರಾ ಕುಂದಾಪುರ ಮತ್ತು ಅವರ ಗ್ಯಾಂಗ್​ಗೆ ಐದು ಕೋಟಿ ರೂ. ಹಣ ನೀಡಿದ್ದರು. ಟಿಕೆಟ್​ ಸಿಗದಿದ್ದಾಗ, ಹಣ ವಾಪಸ್​​ ಕೇಳಿದ್ದಾರೆ. ಆದರೆ ಹಣ ನೀಡದೆ ತಲೆಮರೆಸಿಕೊಂಡಿದ್ದಾರೆ. ಇದನ್ನು ತಿಳಿದ ಗೋವಿಂದಬಾಬು ಪೂಜಾರಿ ಅವರು ಪೊಲೀಸರಿಗೆ ದೂರು ನಿಡಿದ್ದಾರೆ.

ಇದನ್ನೂ ಓದಿ: ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಬಗ್ಗೆ ನನಗೆ ಮೂರು ತಿಂಗಳ ಹಿಂದೆಯೇ ಗೊತ್ತಿತ್ತು: ಸೂಲಿಬೆಲೆ

ಹಿಂದೂ ಕಾರ್ಯಕರ್ತರೇ ಚೈತ್ರಾ ಕುಂದಾಪುರಳ ಟಾರ್ಗೆಟ್?

ಚೈತ್ರಾ ಕುಂದಾಪುರ ಹಿಂದುತ್ವ, ಕೇಸರಿಯನ್ನೇ ಬಂಡವಾಳವನ್ನಾಗಿಸಿಕೊಂಡು ಕಾರ್ಯಕರ್ತರನ್ನೇ ವಂಚಿಸುತ್ತಿದ್ದರೇ ಎಂಬ ಅನುಮಾನಕ್ಕೆ ಸದ್ಯ ದಾಖಲಾದ ಪ್ರಕರಣಗಳೇ ಪುಷ್ಠಿ ನೀಡುತ್ತವೆ. ಬೈಂದೂರಿನ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರಿಗೆ ಟಿಕೆಟ್ ಕೊಡಿಸುವ ಭರವಸೆ ನೀಡಿದ ಚೈತ್ರಾ ಆ್ಯಂಡ್ ಗ್ಯಾಂಗ್ ಐದು ಕೋಟಿ ಪಡೆದು ನಂತರ ವಂಚಿಸಿತ್ತು.

ಈ ನಡುವೆ ಮತ್ತೊಂದು ವಂಚನೆ ಪ್ರಕರಣ ದಾಖಲಿಸಿದ ಸುಧೀನ್ ಬಿಜೆಪಿ ಕಾರ್ಯಕರೇ ಆಗಿದ್ದಾರೆ. ಬಟ್ಟೆ ಅಂಗಡಿ ಉದ್ಯಮ ನಡೆಸಲು ನಿರ್ಧರಿಸಿದ್ದಾರೆ. ಆದರೆ ಇವರಿಗೂ ಚೈತ್ರಾ ಕುಂದಾಪುರ ಐದು ಲಕ್ಷ ವಂಚಿಸಿದ್ದಾರೆ ಎಂಬುದು ಇದೀಗ ಬೆಳಕಿಗೆ ಬಂದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:21 am, Sat, 23 September 23