ಬೆಂಗಳೂರು: ಚಾಮರಾಜಪೇಟೆ (Chamarajpet) ಈದ್ಗಾ ಮೈದಾನ (Idgah Maidan) ವಿವಾದಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ (BBMP) ಮೈದಾನದ ಕುರಿತು ನಾಳೆ (ಜುಲೈ 23) ಯಾರೂ ದಾಖಲೆ ಕೊಡದಿದ್ದರೆ ಮೈದಾನ ಪಾಲಿಕೆ ಆಸ್ತಿಯಾಗುತ್ತೆ ಎಂಬ ವಿಚಾರವಾಗಿ ವಕ್ಫ್ ಬೋರ್ಡ್ (Waqf Board) ಅಧ್ಯಕ್ಷ ಮೌಲಾನಾ ಶಾಫಿ ಸಅದಿ ಸುದ್ದಿಗೋಷ್ಠಿ ನಡೆಸಿ ಹಾಗೆ ಘೋಷಣೆ ಮಾಡಿದರೆ ಅದು ನ್ಯಾಯಾಂಗ ನಿಂದನೆ ಆಗುತ್ತೆ ಎಂದು ಹೇಳಿದ್ದಾರೆ. ಮುಂದಿನದ್ದು ನಾವು ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನಲ್ಲಿ ನಮ್ಮ ಪ್ರತಿವಾದಿ ಬಿಬಿಎಂಪಿ. ಹೀಗಿರುವಾಗ ಪ್ರತಿವಾದಿಗಳು ವಾದಿಗಳ ಬಳಿ ದಾಖಲೆ ತಂದು ಕೊಡಲಿ ಎಂದು ಕೇಳುವುದರಲ್ಲಿ ಅರ್ಥವಿದೆಯಾ..? 8/7/2022 ರಂದು ದಾಖಾಲೆಗಳನ್ನು ಸಲ್ಲಿಸಲು ಹೆಚ್ಚಿನ ಸಮಯ ಬೇಕೆಂದು ಪತ್ರ ಸಲ್ಲಿಸಿದ್ದೇವೆ. ನಾವು ಅವರು ಕೇಳಿದ ದಾಖಾಲೆಗಳನ್ನ ಸಲ್ಲಿಸದ ಮೇಲೂ ಧೃಡೀಕರಣ ಪತ್ರ ಕೇಳಿದರು. ಹೀಗಾಗಿ ನಾವು ಹೆಚ್ಚಿನ ಸಮಯವನ್ನ ಕೇಳಿದ್ದೇವೆ ಎಂದರು.
1964ರಲ್ಲಿ ವಕ್ಫ್ ಬೋರ್ಡ್ ಆಸ್ತಿ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೂನ್ 14ರಂದು ಬಿಬಿಎಂಪಿಯಿಂದ ನಮಗೆ ನೋಟಿಸ್ ಬಂದಿತ್ತು.ಜೂನ್ 17ರಂದು ಪಾಲಿಕೆಗೆ ದಾಖಲೆಗಳನ್ನು ನೀಡಿದ್ದೇವೆ. ಒಟ್ಟು 10 ಎಕರೆ 10 ಗುಂಟೆ ಜಾಗದಲ್ಲಿ ವಕ್ಫ್ ಬೋರ್ಡ್ ಆಸ್ತಿ ಇತ್ತು. ಅದರಲ್ಲಿ 8 ಎಕರೆ ಜಾಗ ಕಬಳಿಕೆಯಾಗಿದೆ ಎಂದು ಆರೋಪಿಸಿದ್ದಾರೆ.
ಇದಕ್ಕೆ ಪರ್ಯಾಯವಾಗಿ ಸರ್ಕಾರ ನಮಗೆ 6-7 ಎಕರೆ ಜಾಗ ನೀಡಿದೆ. ಬೆಂಗಳೂರಿನ ಮೈಸೂರು ರಸ್ತೆಯಲ್ಲಿ 6-7 ಎಕರೆ ಜಾಗ ನೀಡಿದೆ. ಆದರೆ 2 ಎಕರೆ 10 ಗುಂಟೆ ಜಾಗ ಅಲ್ಲೇ ಮುಂದುವರಿದಿದೆ. ಕೆಲವರು 2 ಎಕರೆ 10 ಗುಂಟೆ ಪರ್ಯಾಯವಾಗಿ ಕೊಟ್ಟಿದ್ದು ಅಂತಾರೆ. ಈ ಬಗ್ಗೆ ನಾವು ಪಾಲಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದೇವೆ. ಅದಕ್ಕೆ ಬಿಬಿಎಂಪಿ ನಮಗೆ ಉತ್ತರ ಕೊಟ್ಟಿಲ್ಲ. ಈ ಹಿನ್ನೆಲೆ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸ್ವತಃ ಬಿಬಿಎಂಪಿ ಆಯುಕ್ತರೇ ಇದು ವಕ್ಫ್ ಬೋರ್ಡ್ ಆಸ್ತಿ ಎಂದು ಹೇಳಿತ್ತು. ಆದರೂ ಇಷ್ಟೆಲ್ಲಾ ವಿವಾದ ಆಗಿದೆ ಬಿಬಿಎಂಪಿ ಅಧಿಕಾರಿಗಳು ಧೃಡೀಕರಣ ಪತ್ರ ಕೊಡುವಂತೆ ಕೇಳುತ್ತಿದ್ದಾರೆ. ಸಧ್ಯ ನಮ್ಮ ಬಳಿ ಹಳೆಯ ಖಾತೆಗಳಿವೆ ಆ ಖಾತೆಯಲ್ಲಿ ಮುಸ್ಲಿಂ ದರ್ಗ ಎನ್ನುವ ಖಾತೆ ಇದೆ. ಈದ್ಗ ಮೈದಾನ ಎನ್ನುವ ಖಾತೆಯಿಲ್ಲ ಎಂದು ತಿಳಿಸಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ವಕ್ಫ್ ಬೋರ್ಡ್ ಬಳಿ ಇರುವ ದಾಖಲೆ
1. 1964ರ ರಾಜ್ಯಪತ್ರ
2. ಸರ್ವೇ ವರದಿ ಕಂದಾಯ ಇಲಾಖೆ – 1968
3. ಸ್ವತ್ತಿನ ಮೂಲ ಪತ್ರ & ಕ್ರಯ ಪತ್ರ
4. 1968ರಿಂದ ಸ್ವತ್ತಿನ ಪಹಣಿ
BDA ರಚಿಸಿರುವ ನಕ್ಷೆ ನಮ್ಮ ಬಳಿ ಇಲ್ಲ. ಆಗ BDA ಅಸ್ತಿತ್ವದಲ್ಲಿ ಇರಲಿಲ್ಲ, ಹೀಗಾಗಿ ಈಗ ನಾವು ಅದಕ್ಕೆ BDA ಯಲ್ಲಿ ಮನವಿ ಸಲ್ಲಿಸಿದ್ದೇವೆ
ಚಾಮರಾಜಪೇಟೆ ಮೈದಾನ ವಿವಾದದ ಸಂಬಂಧ ಮುಖ್ಯಮಂತ್ರಿ ಬಸವಾರಾಜ ಬೊಮ್ಮಾಯಿ ಬಿಬಿಎಂಪಿ ಮುಖ್ಯ ಆಯುಕ್ತ, ಜಂಟಿ ಆಯುಕ್ತರ ಜೊತೆ ತಡರಾತ್ರಿ ಸಭೆ ನಡೆಸಿದ್ದರು. ಇಂದು (ಜುಲೈ 22) ಬೆಳಗ್ಗೆ ಜಂಟಿ ಆಯುಕ್ತರನ್ನು ಕರೆಸಿಕೊಂಡು ಮತ್ತೊಮ್ಮೆ ಸಭೆ ಮಾಡಿದ್ದಾರೆ. ಆದಷ್ಟು ಬೇಗ ವಿವಾದ ಬಗೆಹರಿಸಿ ಎಂದು ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.