ಬೆಂಗಳೂರು; ಪೋಷಕರೇ ಎಚ್ಚರ! 8 ತಿಂಗಳ ಮಗು, 6 ವರ್ಷದ ಬಾಲಕಿಯನ್ನು ಕದ್ದು ಬಿಹಾರಕ್ಕೆ ಹೋಗುತ್ತಿದ್ದ ದಂಪತಿ ಅರೆಸ್ಟ್

ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ 11.30 ಗಂಟೆ ಸುಮಾರಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎಂಟು ತಿಂಗಳ ಮಗುವನ್ನು ಕಳ್ಳತನ ಮಾಡಿ ಯಶವಂತಪುರ ರೈಲ್ವೇ ಸ್ಟೇಷನ್​ನಿಂದ ಬಿಹಾರಕ್ಕೆ ತೆರಳುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ.

ಬೆಂಗಳೂರು; ಪೋಷಕರೇ ಎಚ್ಚರ! 8 ತಿಂಗಳ ಮಗು, 6 ವರ್ಷದ ಬಾಲಕಿಯನ್ನು ಕದ್ದು ಬಿಹಾರಕ್ಕೆ ಹೋಗುತ್ತಿದ್ದ ದಂಪತಿ ಅರೆಸ್ಟ್
ಮಕ್ಕಳ ಜೊತೆ ಮಾತನಾಡುತ್ತಿರುವ ಆರೋಪಿ
Follow us
ರಾಚಪ್ಪಾಜಿ ನಾಯ್ಕ್
| Updated By: ಆಯೇಷಾ ಬಾನು

Updated on: Dec 13, 2023 | 2:08 PM

ಬೆಂಗಳೂರು, ಡಿ.13: ಪುಟ್ಟ ಮಕ್ಕಳನ್ನ ಒಬ್ಬಂಟಿಯಾಗಿ ಬಿಡುವ ಪೋಷಕರೇ ಎಚ್ಚರ. ಭ್ರೂಣ ಪತ್ತೆ, ಹತ್ಯೆ ಕೇಸ್ ಬೆನ್ನಲ್ಲೇ ಮಕ್ಕಳ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ (Child Trafficking). ಬೆಂಗಳೂರಿಗೆ ಮಕ್ಕಳ ಕದಿಯುವ ಬಿಹಾರಿ ಗ್ಯಾಂಗ್ (Bihari Gang) ಕಾಲಿಟ್ಟಿದೆ. ಎಳೆ ಕೂಸನ್ನೂ ಬಿಡಲ್ಲ. ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಯೊಂದರ ಮುಂದೆ ಆಟ ಆಡುತ್ತ ಕೂತಿದ್ದ ಇಬ್ಬರು ಮಕ್ಕಳನ್ನು ಕದ್ದು ಬಿಹಾರಕ್ಕೆ ಎಸ್ಕೇಪ್ ಆಗುತ್ತಿದ್ದ ದಂಪತಿಯನ್ನು ರೈಲ್ವೇ ಪೊಲೀಸರು ಬಂಧಿಸಿ ಕಳ್ಳಾಟ ಬಯಲು ಮಾಡಿದ್ದಾರೆ.

ಪ್ರಮೀಳಾ ದೇವಿ, ಬಲರಾಮ್ ಎಂಬ ದಂಪತಿ ಕೊಡಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಮಧ್ಯಾಹ್ನ 11.30 ಗಂಟೆ ಸುಮಾರಿಗೆ ಆರು ವರ್ಷದ ಹೆಣ್ಣು ಮಗು ಹಾಗೂ ಎಂಟು ತಿಂಗಳ ಮಗುವನ್ನು ಕಳ್ಳತನ ಮಾಡಿ ಯಶವಂತಪುರ ರೈಲ್ವೇ ಸ್ಟೇಷನ್​ನಿಂದ ಬಿಹಾರಕ್ಕೆ ತೆರಳಲು ಸಜ್ಜಾಗಿದ್ದರು. ಈ ವೇಳೆ ದಂಪತಿ ಅನುಮಾನಸ್ಪದವಾಗಿ ಕಂಡ ಹಿನ್ನಲೆ ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿದ್ದು ಕಳ್ಳತನದ ಕೃತ್ಯ ಬಯಲಾಗಿದೆ. ಇನ್ನು ಮತ್ತೊಂದೆಡೆ ಮಕ್ಕಳನ್ನು ಕಳೆದುಕೊಂಡ ಪೋಷಕರು ಕೊಡಿಗೆಹಳ್ಳಿಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಿಸಿದ್ದು ಸದ್ಯ ಕೊಡಿಗೆಹಳ್ಳಿ ಪೊಲೀಸರಿಗೆ ಮಕ್ಕಳು ಹಾಗೂ ಆರೋಪಿಗಳನ್ನು ಒಪ್ಪಿಸಲಾಗಿದೆ.

ಇನ್ನು ಮಹಿಳೆಯೊಬ್ಬರು ರಸ್ತೆ ಬದಿ ಆಟ ಆಡುತ್ತ ಕುಳಿತಿದ್ದ ಇಬ್ಬರು ಮಕ್ಕಳಿಗೆ ವಿಳಾಸ ಕೇಳುವ ನೆಪದಲ್ಲಿ ಮಾತನಾಡಿಸಿ, ತಿಂಡಿಯ ಆಮೀಷವೊಡ್ಡಿ ಅವರನ್ನು ಕರೆದುಕೊಂಡು ಹೋಗುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಇದನ್ನೂ ಓದಿ: ಕಿರುಕುಳ ಆರೋಪ: ಜೈಲರ್​ಗೆ ಶೋಕಾಸ್ ನೋಟಿಸ್​ ನೀಡಿದ ದಾವಣಗೆರೆ ಜಿಲ್ಲಾ ಕೋರ್ಟ್​​

6ಲಕ್ಷ ರೂ. ಮೌಲ್ಯದ ಬೆಳ್ಳುಳ್ಳಿ ಕಳ್ಳತನ

ಟೊಮ್ಯಾಟೋ ಬೆಲೆ ಏರಿಕೆಯಾಗಿ ಗ್ರಾಹಕರ ಜೇಬು ಸುಟ್ಟಿತ್ತು. ಕಳ್ಳರು ಟೋಮ್ಯಾಟೋ ಲಾರಿಯನ್ನೇ ಅಬೇಸ್ ಮಾಡಿದ್ರು. ಇದೀಗ ಬೆಳ್ಳುಳ್ಳಿ ಸರದಿ. ಗೋದಾಮಿನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳುಳ್ಳಿಗೆ ಕಳ್ಳರು ಕನ್ನ ಹಾಕಿದ್ದಾರೆ. ಬೆಳ್ಳುಳ್ಳಿ ಬೆಲೆ ಕೆಜಿಗೆ 250 ರೂಪಾಯಿ ದಾಟಿದೆ. ಕಾಲು ಕೇಜಿಗೆ 80 ರೂಪಾಯಿವರೆಗೂ ಮಾರಾಟವಾಗ್ತಿದೆ. ಹೀಗಾಗಿ ಬೆಳ್ಳುಳ್ಳಿಗೆ ಬಾರೀ ಡಿಮ್ಯಾಂಡ್ ಬಂದಿದ್ದು, ಕಳ್ಳರ ಕಣ್ಣು ಬೆಳ್ಳುಳ್ಳಿ ಮೇಲೆ ಬಿದ್ದಿದೆ.

ಚಿತ್ರದುರ್ಗದ ದಂಡಿನಕುರುಬರಹಟ್ಟಿ ಗ್ರಾಮದಲ್ಲಿ ಗೋದಾಮಿನಲ್ಲಿ ಸಂಗ್ರಹಿಸಿಟ್ಟಿದ್ದ, ಸುಮಾರು 6 ಲಕ್ಷ ರೂಪಾಯಿ ಮೌಲ್ಯದ ಬೆಳ್ಳುಳ್ಳಿಗೆ ಕಳ್ಳರು ಕನ್ನ ಹಾಕದ್ದಾರೆ. ವ್ಯಾಪಾರಿ ಬಸವ ಕಿರಣ್ ಅನ್ನೋರು ಮಧ್ಯಪ್ರದೇಶದಿಂದ ಖರೀದಿಸಿ ತಂದು ಜಯಶೀಲರೆಡ್ಡಿ ಎಂಬವವವರ ಗೋದಾಮಿನಲ್ಲಿ ಇಟ್ಟಿದ್ರು. ಆದ್ರೆ, ಬೆಳ್ಳುಳ್ಳಿಗೆ ಒಳ್ಳೇ ರೇಟ್ ಇರೋದ್ರಿಂದ ರಾತ್ರೋರಾತ್ರಿ ಗೋದಾಮಿನಲ್ಲಿದ್ದ ಬೆಳ್ಳುಳ್ಳಿ ಕಳ್ಳರ ಪಾಲಾಗಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ