ತಂದೆ ಜೀವಂತವಾಗಿರುವಾಗಲೂ ಅವರ ಮಕ್ಕಳು ಕುಟುಂಬದ ಅರ್ಚಕ ಸಂಪ್ರದಾಯ ಮುಂದುವರಿಸಬಹುದು: ಕರ್ನಾಟಕ ಸರ್ಕಾರ

ಇಲ್ಲಿಯವರೆಗೆ, ಅಂತಹ ಮಕ್ಕಳಿಗೆ ಅವರ ತಂದೆ-ತಾಯಿ ತೀರಿಕೊಂಡ ನಂತರವೇ ಹುದ್ದೆಗಳನ್ನು ನೀಡಲಾಗುತ್ತಿತ್ತು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪುರೋಹಿತರ ಮಕ್ಕಳು ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಲು ಇಲಾಖೆಯು ಇದೀಗ ಅಧಿಸೂಚನೆಯನ್ನು ಹೊರಡಿಸಿದೆ.

ತಂದೆ ಜೀವಂತವಾಗಿರುವಾಗಲೂ ಅವರ ಮಕ್ಕಳು ಕುಟುಂಬದ ಅರ್ಚಕ ಸಂಪ್ರದಾಯ ಮುಂದುವರಿಸಬಹುದು: ಕರ್ನಾಟಕ ಸರ್ಕಾರ
ಕರ್ನಾಟಕದಲ್ಲಿ ಪುರೋಹಿತರ ಮಕ್ಕಳು ಕುಟುಂಬದ ಅರ್ಚಕ ಸಂಪ್ರದಾಯ ಮುಂದುವರಿಸಬಹುದು
Follow us
ಸಾಧು ಶ್ರೀನಾಥ್​
|

Updated on:Dec 01, 2023 | 11:04 AM

ದತ್ತಿ ಇಲಾಖೆಗೆ (endowments department) ಸೇರಿದ ದೇವಸ್ಥಾನಗಳಲ್ಲಿ (temples) ಕೆಲಸ ಮಾಡುವ ಪುರೋಹಿತರ (ಅರ್ಚಕ- Purohit, priest) ಮಕ್ಕಳಿಗೆ ಅವರ ತಂದೆ ಜೀವಂತವಾಗಿರುವಾಗಲೂ ಅರ್ಚಕರಾಗಿ ಕೆಲಸ ಮಾಡಲು ರಾಜ್ಯ ಸರ್ಕಾರ (Karnataka Government) ಮೊದಲ ಬಾರಿಗೆ ಅನುಮತಿ ನೀಡಿದೆ.

ಇಲ್ಲಿಯವರೆಗೆ, ಅಂತಹ ಮಕ್ಕಳಿಗೆ ಅವರ ತಂದೆ-ತಾಯಿ ತೀರಿಕೊಂಡ ನಂತರವೇ ಹುದ್ದೆಗಳನ್ನು ನೀಡಲಾಗುತ್ತಿತ್ತು. ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಪುರೋಹಿತರ ಮಕ್ಕಳು ತಮ್ಮ ಕುಟುಂಬದ ಸಂಪ್ರದಾಯವನ್ನು ಮುಂದುವರಿಸಲು ಇಲಾಖೆಯು ಇದೀಗ ಅಧಿಸೂಚನೆಯನ್ನು ಹೊರಡಿಸಿದೆ ಎಂದು www.newindianexpress.com ವರದಿ ಮಾಡಿದೆ.

ರಾಜ್ಯವು 34,000 ದತ್ತಿ ದೇವಾಲಯಗಳನ್ನು ಹೊಂದಿದೆ. ಕರ್ನಾಟಕ ಹಿಂದೂ ಧಾರ್ಮಿಕ ಮತ್ತು ದತ್ತಿ ಕಾಯಿದೆ ( Karnataka Hindu Religious and Charitable Endowments Act) 1997, ಸೆಕ್ಷನ್ 9(1) ಪ್ರಕಾರ, ಸಿ ದರ್ಜೆಯ ದೇವಾಲಯಗಳಲ್ಲಿ ಕೆಲಸ ಮಾಡುವ ಪುರೋಹಿತರ ಪುತ್ರರು ತಮ್ಮ ತಂದೆ ಮರಣ ಹೊಂದಿದರೆ ವಂಶಪಾರಂಪರ್ಯವಾಗಿ ಅರ್ಚಕ ವೃತ್ತಿ ಮುಂದುವರಿಸಬಹುದು. ಆದರೆ, ದೇವಸ್ಥಾನದ ಪೂಜೆಗೆ ಹಾಜರಾಗಲು ಸಾಧ್ಯವಾಗದ ವಯಸ್ಸಾದ ಅರ್ಚಕರಿಗೆ ಅವರ ಮಕ್ಕಳು ಅಥವಾ ವಾರಸುದಾರರಿಗೆ ಕೆಲಸ ನೀಡಲಾಗುವುದಿಲ್ಲ ಎಂದಿತ್ತು.

ಇದನ್ನೂ ಓದಿ: ಕರ್ನಾಟಕದ ಮುಜರಾಯಿ ಇಲಾಖೆ ಅರ್ಚಕರಿಗೆ ಗುಡ್ ನ್ಯೂಸ್, ತಸ್ತಿಕ್​​ ಹಣ ರಿಲೀಸ್​

ಇದೀಗ ಸರಕಾರ ಆದೇಶ ಹೊರಡಿಸಿದ್ದು, ಪುರೋಹಿತರು ಮೃತಪಟ್ಟರೆ ಅಥವಾ ಆರೋಗ್ಯ ಮತ್ತು ವಯೋಸಹಜ ಸಮಸ್ಯೆಗಳಿಂದಾಗಿ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲು ಸಾಧ್ಯವಾಗದೇ ಇದ್ದಲ್ಲಿ ವಂಶಪಾರಂಪರ್ಯ ಹಕ್ಕುಗಳನ್ನು ಮಕ್ಕಳಿಗೆ ನೀಡಲಾಗುವುದು ಎಂದು ಹೇಳಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:00 am, Fri, 1 December 23

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ