ಪೀಕ್ ಬೆಂಗಳೂರು: ಥಿಯೇಟರ್ನಲ್ಲಿ ಕುಳಿತು Jawan ಸಿನಿಮಾ ವೀಕ್ಷಣೆ ಜೊತೆ ಕಚೇರಿ ಕೆಲಸ ಮಾಡಿದ ಸಿನಿ ಅಭಿಮಾನಿ
ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ನಯನತಾರಾ ಅಭಿನಯದ ಜವಾನ್ ಸಿನಿಮಾ ದೇಶಾದ್ಯಂತ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲೂ ಸಿನಿಮಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ, ಚಿತ್ರಮಂದಿರಲ್ಲಿ ಜವಾನ್ ಸಿನಿಮಾ ವೀಕ್ಷಣೆ ಜೊತೆಗೆ ಲ್ಯಾಪ್ಟಾಪ್ ಹಿಡಿದು ಕಚೇರಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ಬೆಂಗಳೂರು, ಸೆ.10: ಬಾಲಿವುಡ್ ನಟ ಶಾರುಖ್ ಖಾನ್ ಮತ್ತು ನಟಿ ನಯನತಾರಾ ಅಭಿನಯದ ಜವಾನ್ ಸಿನಿಮಾ (Jawan Movie) ದೇಶಾದ್ಯಂತ ಥಿಯೇಟರ್ಗಳಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲೂ (Bengaluru) ಸಿನಿಮಾ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ನಡುವೆ, ಸಿನಿ ಅಭಿಮಾನಿಯೊಬ್ಬರು ಚಿತ್ರಮಂದಿರಲ್ಲಿ ಜವಾನ್ ಸಿನಿಮಾ ವೀಕ್ಷಣೆ ಜೊತೆಗೆ ಲ್ಯಾಪ್ಟಾಪ್ ಹಿಡಿದು ಕಚೇರಿ ಕೆಲಸ ಮಾಡುತ್ತಿರುವ ಫೋಟೋ ವೈರಲ್ ಆಗುತ್ತಿದೆ.
ನೀಲಂಗನ ನೂಪುರ್ ಎಂಬ ಎಕ್ಸ್ (ಟ್ವಿಟರ್) ಬಳಕೆದಾರರು ಈ ಫೋಟೋ ಹಂಚಿಕೊಂಡಿದ್ದು, “ಬೆಂಗಳೂರು INOX ನಲ್ಲಿ ನೋಡಿದ್ದೇನೆ. ಆದರೆ ಈ ಚಿತ್ರವನ್ನು ತೆಗೆದುಕೊಳ್ಳುವಾಗ ಯಾವುದೇ ಇಮೇಲ್‌ಗಳು ಅಥವಾ ಟೀಮ್ ಸೆಷನ್ ಅಡೆತಡೆಯಾಗಿಲ್ಲ.
When #Jawan first day is important but life is #peakbengaluru.
Observed at a #Bangalore INOX. No emails or Teams sessions were harmed in taking this pic.@peakbengaluru pic.twitter.com/z4BOxWSB5W
— Neelangana Noopur (@neelangana) September 8, 2023
ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಕೆಲವರು ಬೆಂಗಳೂರಿನಲ್ಲಿ ಇಂತಹ ಘಟನೆಗಳು ಸಾಮಾನ್ಯ ಎಂದು ಹೇಳಿ ಟ್ರಾಫಿಕ್ನಲ್ಲಿ ನಿಂತು ಲ್ಯಾಪ್ಟಾಪ್ ಹಿಡಿದು ಕಚೇರಿ ಕೆಲಸ ಮಾಡಿದ ಈ ಹಿಂದಿನ ಘಟನೆಗಳನ್ನು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: 80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ
ಕೆಲವರು ವ್ಯಕ್ತಿ ಕಚೇರಿ ಕೆಲಸವನ್ನು ಟೀಕಿಸಿದ್ದಾರೆ. ಇದು ಸಂಪೂರ್ಣವಾಗಿ ನಡವಳಿಕೆರಹಿತವಾಗಿದೆ ಮತ್ತು ಶಾಂತಿಯುತವಾಗಿ ಚಲನಚಿತ್ರಗಳನ್ನು ನೋಡುವ ಇತರ ಚಲನಚಿತ್ರ ವೀಕ್ಷಕರಿಗೆ ತೊಂದರೆಯಾಗುತ್ತದೆ. ನಾನಾಗಿದ್ದರೆ, ಬೌನ್ಸರ್ಗಳನ್ನ ಕರೆದು ಅವರನ್ನು ಹೊರಗೆ ಕರೆದೊಯ್ಯುವಂತೆ ಮಾಡುತ್ತಿದ್ದ ಅಂತ ನೆಟ್ಟಿಗರೊಬ್ಬರು ಹೇಳಿದ್ದಾರೆ.
ಹೇಳಿ ಕೇಳಿ ಬೆಂಗಳೂರಿನಲ್ಲಿರುವ ಜನರ ಜೀವನವೇ ಬ್ಯುಜಿಯಿಂದ ಕೂಡಿರುತ್ತದೆ. ಕೆಲವರು ಮನೆಯಲ್ಲಿ ತಿಂಡಿ, ಊಟ ಮಾಡಲು ಸಾಧ್ಯವಾಗದೆ ಆಟೋ, ಬಸ್ಗಳನ್ನು ಆಹಾರ ಸೇವಿಸುತ್ತಾ ಹೋಗುವುದುನ್ನು ನೋಡಬಹುದು. ಕೆಲವು ವಿದ್ಯಾರ್ಥಿಗಳು ಕೂಡ ಹೀಗೆ ಮಾಡುತ್ತಾರೆ.
ಇತ್ತೀಚೆಗಷ್ಟೇ, ಟ್ರಾಫಿಕ್ ಸಿಗ್ನಲ್ನಲ್ಲಿ ದ್ವಿಚಕ್ರ ವಾಹನದಲ್ಲಿ ಕುಳಿತು ಯುವತಿಯೊಬ್ಬಳು ಲ್ಯಾಪ್ಟಾಪ್ ಓಪನ್ ಮಾಡಿ ಕಚೇರಿ ಕೆಲಸ ಮಾಡುತ್ತಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sun, 10 September 23