ಮೂರೇ ದಿನಕ್ಕೆ 200 ಕೋಟಿ ರೂಪಾಯಿ ಸಮೀಪಿಸಿದ ‘ಜವಾನ್’ ಸಿನಿಮಾ ಕಲೆಕ್ಷನ್

‘ಜವಾನ್’ ಸಿನಿಮಾಗೆ ಭಾನುವಾರವೂ ಒಳ್ಳೆಯ ಬುಕಿಂಗ್ ಆಗುತ್ತಿದೆ. ಶನಿವಾರವೇ ಸಿನಿಮಾ ಈ ಮಟ್ಟದಲ್ಲಿ ಗಳಿಕೆ ಮಾಡಿದೆ ಎಂದರೆ ಭಾನುವಾರ ಯಾವ ರೀತಿಯಲ್ಲಿ ಕಮಾಯಿ ಮಾಡಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಇನ್ನು, ‘ಜವಾನ್’ ಸಿನಿಮಾ ಅಬ್ಬರದಿಂದ ‘ಗದರ್ 2’ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡಿದೆ.

ಮೂರೇ ದಿನಕ್ಕೆ 200 ಕೋಟಿ ರೂಪಾಯಿ ಸಮೀಪಿಸಿದ ‘ಜವಾನ್’ ಸಿನಿಮಾ ಕಲೆಕ್ಷನ್
ಶಾರುಖ್ ಖಾನ್
Follow us
ರಾಜೇಶ್ ದುಗ್ಗುಮನೆ
|

Updated on: Sep 10, 2023 | 7:38 AM

‘ಜವಾನ್’ ಸಿನಿಮಾ (Jawan Movie) ಸೆಪ್ಟೆಂಬರ್ 7ರಂದು ರಿಲೀಸ್ ಆಗಿ ಬಾಕ್ಸ್ ಆಫೀಸ್​ನಲ್ಲಿ ಅಬ್ಬರಿಸುತ್ತಿದೆ. ಶಾರುಖ್ ಖಾನ್ ಅವರು ತಾವೇ ಮಾಡಿದ ದಾಖಲೆಗಳನ್ನು ಸರಿಗಟ್ಟುತ್ತಿದ್ದಾರೆ. ‘ಜವಾನ್’ ಸಿನಿಮಾದ ಒಟ್ಟಾರೆ ಗಳಿಕೆ ಎಷ್ಟಾಗಬಹುದು ಎನ್ನುವ ಕುತೂಹಲ ಮೂಡಿದೆ. ಸದ್ಯ ಈ ಸಿನಿಮಾ ಹೋಗುತ್ತಿರುವ ವೇಗ ನೋಡಿದರೆ ಚಿತ್ರ ಹಲವು ದಾಖಲೆಗಳನ್ನು ಬರೆಯೋದು ಪಕ್ಕಾ ಎನ್ನಲಾಗುತ್ತಿದೆ. ಮೂರೇ ದಿನಕ್ಕೆ ಚಿತ್ರದ ಗಳಿಕೆ 200 ಕೋಟಿ ರೂಪಾಯಿ ಸಮೀಪಿಸಿದೆ. ಶನಿವಾರ (ಸೆಪ್ಟೆಂಬರ್ 9) ಈ ಚಿತ್ರ ಭರ್ಜರಿ ಕಮಾಯಿ ಮಾಡಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಆ್ಯಕ್ಷನ್ ಮೆರೆದಿದ್ದಾರೆ. ಈ ಚಿತ್ರದ ಮೂಲಕ ಅವರು ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. ತಮ್ಮದೇ ಸಂಸ್ಥೆ ‘ರೆಡ್ ಚಿಲ್ಲೀಸ್’ ಮೂಲಕ ಸಿನಿಮಾ ನಿರ್ಮಾಣ ಮಾಡಿರುವುದರಿಂದ ಅವರಿಗೆ ಭರ್ಜರಿ ಲಾಭ ಆಗುತ್ತಿದೆ. ಮೊದಲ ದಿನ ಸಿನಿಮಾ ಹಿಂದಿ ವರ್ಷನ್​ನಿಂದ 65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ 50 ಕೋಟಿ ರೂಪಾಯಿ ಗಳಿಸಿತ್ತು. ಮೂರನೇ ದಿನ ಚಿತ್ರಕ್ಕೆ 60+ ಕೋಟಿ ರೂಪಾಯಿ ಕಮಾಯಿ ಆಗಿದೆ. ಈ ಮೂಲಕ 175+ ಕೋಟಿ ರೂಪಾಯಿ ಗಳಿಕೆ ಆಗಿದೆ. ಇದೇ ರೀತಿ ಮುಂದುವರೆದರೆ ಸಿನಿಮಾ ಶೀಘ್ರವೇ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.

‘ಜವಾನ್’ ಸಿನಿಮಾಗೆ ಭಾನುವಾರವೂ ಒಳ್ಳೆಯ ಬುಕಿಂಗ್ ಆಗುತ್ತಿದೆ. ಶನಿವಾರವೇ ಸಿನಿಮಾ ಈ ಮಟ್ಟದಲ್ಲಿ ಗಳಿಕೆ ಮಾಡಿದೆ ಎಂದರೆ ಭಾನುವಾರ ಯಾವ ರೀತಿಯಲ್ಲಿ ಕಮಾಯಿ ಮಾಡಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಇನ್ನು, ‘ಜವಾನ್’ ಸಿನಿಮಾ ಅಬ್ಬರದಿಂದ ‘ಗದರ್ 2’ ಸಿನಿಮಾದ ಗಳಿಕೆಯಲ್ಲಿ ಇಳಿಕೆ ಕಂಡಿದೆ.

ಇದನ್ನೂ ಓದಿ: 80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ

‘ಜವಾನ್’ ಸಿನಿಮಾ ತಮಿಳು ಚಿತ್ರ ‘ತಾಯಿ ನಾಡು’ ಚಿತ್ರದ ರಿಮೇಕ್ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಎರಡೂ ಸಿನಿಮಾದ ಕಥೆಗೆ ಸಾಮ್ಯತೆ ಇದೆ. ಈ ಕಾರಣದಿಂದ ಈ ಹೋಲಿಕೆ ನಡೆದಿದೆ. ಆದರೆ, ಶಾರುಖ್ ಖಾನ್ ಅಭಿಮಾನಿಗಳು ಇದನ್ನು ಒಪ್ಪುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ