80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ

‘ಜವಾನ್’ ಸಿನಿಮಾ ನಿರ್ದೇಶಕ ಅಟ್ಲಿ ಅವರು ಚಿತ್ರಕ್ಕೆ ಸೌತ್​ ಇಂಡಿಯಾದ ಫ್ಲೇವರ್ ಬೆರೆಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಹೀಗಾಗಿ ಬಾಲಿವುಡ್ ಜೊತೆ ದಕ್ಷಿಣ ಭಾರತದಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ಕಾರಣದಿಂದಲೇ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದೆ.

80ರ ದಶಕದ ಈ ಸಿನಿಮಾದ ರಿಮೇಕ್ ‘ಜವಾನ್’? ಆ ಚಿತ್ರದ ಕಥೆಯೂ ಹೀಗೆಯೇ ಇದೆ
ಶಾರುಖ್-ಸತ್ಯರಾಜ್
Follow us
|

Updated on:Sep 10, 2023 | 7:41 AM

ಶಾರುಖ್ ಖಾನ್ ನಟನೆಯಜವಾನ್’ ಚಿತ್ರವನ್ನು (Jawan Movie) ಒಂದಷ್ಟು ಮಂದಿ ಬಾಯ್ತುಂಬ ಹೊಗಳುತ್ತಿದ್ದಾರೆ. ಸಿನಿಮಾ ಗಳಿಕೆ ಮಾಡುತ್ತಿರುವ ರೀತಿಗೆ ಅನೇಕರು ದಂಗಾಗಿದ್ದಾರೆ. ಎರಡೇ ದಿನಕ್ಕೆ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ. ಇನ್ನೂ ಕೆಲವರು ಸಿನಿಮಾ ಬಗ್ಗೆ ಕೆಲವರು ಅಪಸ್ವರ ತೆಗೆದಿದ್ದಾರೆ. ದಕ್ಷಿಣ ಭಾರತದ ಕೆಲವು ಸಿನಿಮಾಗಳನ್ನು ರಿಮೇಕ್ ಮಾಡಿ ಈ ಚಿತ್ರವನ್ನು ಸಿದ್ಧಪಡಿಸಿದಂತಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಈ ಚಿತ್ರದ ಮೂಲವನ್ನು ಹುಡುಕಿ ತೆಗೆದಿದ್ದಾರೆ. 1989ರಲ್ಲಿ ಬಂದ ತಮಿಳಿನ ‘ತಾಯಿ ನಾಡು’ (Thai Naadu) ಸಿನಿಮಾದ ಕಥೆಯೂ ಹೀಗೆಯೇ ಇದೆ ಅನ್ನೋದು ಅನೇಕರ ಅಭಿಪ್ರಾಯ.

‘ತಾಯಿ ನಾಡು’ ಚಿತ್ರವನ್ನು ಆರ್. ಅರವಿಂದ್ ರಾಜ್ ನಿರ್ದೇಶನ ಮಾಡಿದ್ದರು. ಸತ್ಯರಾಜ್ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ‘ಜವಾನ್’ ರೀತಿಯೇ ತಂದೆ ಮಗನ ಪಾತ್ರ. ‘ತಾಯಿ ನಾಡು’ ಸಿನಿಮಾದಲ್ಲಿ ತಂದೆ ಮಿಲಿಟರಿಯಲ್ಲಿರುತ್ತಾನೆ. ಆದರೆ, ವೈರಿಗಳ ಕುತಂತ್ರಕ್ಕೆ ಬಲಿಯಾಗುತ್ತಾನೆ. ಆತ ಎದುರಾಳಿಗೆ ಮಾಹಿತಿ ಲೀಕ್ ಮಾಡುತ್ತಿದ್ದ ಎನ್ನುವ ಆರೋಪ ಹೊರಿಸಲಾಗುತ್ತದೆ. ನಂತರ ಆತನ ಕೊಲೆ ಮಾಡಲಾಗುತ್ತದೆ. ನಂತರ ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತದೆ. ತಂದೆಯ ಸಾವಿಗೆ ಕಾರಣರಾದವರನ್ನು ಮಗ ಹುಡುಕಿ ಹೋಗುತ್ತಾನೆ. ‘ಜವಾನ್’ ಸಿನಿಮಾ ಕಥೆಯೂ ಇದೇ ರೀತಿ ಇದೆ.

‘ಜವಾನ್’ ಸಿನಿಮಾ ನಿರ್ದೇಶಕ ಅಟ್ಲಿ ಅವರು ಚಿತ್ರಕ್ಕೆ ಸೌತ್​ ಇಂಡಿಯಾದ ಫ್ಲೇವರ್ ಬೆರೆಸಿದ್ದಾರೆ. ಈ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಹೀಗಾಗಿ ಬಾಲಿವುಡ್ ಜೊತೆ ದಕ್ಷಿಣ ಭಾರತದಲ್ಲೂ ಸಿನಿಮಾ ಅಬ್ಬರಿಸುತ್ತಿದೆ. ಈ ಕಾರಣದಿಂದಲೇ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿದೆ. ವೀಕೆಂಡ್​ನಲ್ಲಿ ಸಿನಿಮಾಗೆ ಯಾವ ರೀತಿಯಲ್ಲಿ ಗಳಿಕೆ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: 2ನೇ ದಿನವೂ ಸುನಾಮಿ ಎಬ್ಬಿಸಿದ ‘ಜವಾನ್​’; ಭಾರತದಲ್ಲಿ 120 ಕೋಟಿ ರೂ. ದಾಟಿದ ಕಲೆಕ್ಷನ್​

‘ಜವಾನ್’ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ನಯನತಾರಾ, ಸಾನ್ಯಾ ಮಲ್ಹೋತ್ರಾ, ಪ್ರಿಯಾ ಮಣಿ ಮೊದಲಾದವರು ನಟಿಸಿದ್ದಾರೆ. ವಿಲನ್ ಪಾತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ್ದಾರೆ. ಅವರು ಆ್ಯಕ್ಷನ್​ಗಿಂತ ಹಾವಭಾವದಲ್ಲೇ ವಿಲನ್​ಗಿರಿ ತೋರಿಸಿದ್ದಾರೆ. ಅವರ ಪಾತ್ರಕ್ಕೆ ಇನ್ನೂ ಏನೋ ಕಡಿಮೆ ಎನ್ನುವ ಫೀಲ್ ಅಭಿಮಾನಿಗಳಿಗೆ ಸಿಗುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:11 am, Sun, 10 September 23