ಈ ಸ್ಟಾರ್ ನಟಿಯರ ಸಿನಿಮಾ ಸಂಭಾವನೆ ಬಗ್ಗೆ ಇಲ್ಲಿದೆ ಮಾಹಿತಿ..
ಸ್ಟಾರ್ ಹೀರೋಗಳಿಗೆ ಹೋಲಿಕೆ ಮಾಡಿದರೆ ನಾಯಕಿಯರಿಗೆ ಸಿಗುವ ಸಂಭಾವನೆ ಕಡಿಮೆಯೇ. ಆದಾಗ್ಯೂ ಕೆಲವು ಹೀರೋಯಿನ್ಗಳು ಭರ್ಜರಿ ಮೊತ್ತದ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಾರೆ. ದಕ್ಷಿಣ ಭಾರತದ ಈ ನಟಿಯರು ಪ್ರತಿ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ? ಆ ಬಗ್ಗೆ ಈ ಸ್ಟೋರಿಯಲ್ಲಿದೆ ಸಂಪೂರ್ಣ ಮಾಹಿತಿ.
ಸ್ಟಾರ್ ಹೀರೋಗಳಿಗೆ ಹೋಲಿಕೆ ಮಾಡಿದರೆ ನಾಯಕಿಯರಿಗೆ ಸಿಗುವ ಸಂಭಾವನೆ ಕಡಿಮೆಯೇ. ಆದಾಗ್ಯೂ ಕೆಲವು ಹೀರೋಯಿನ್ಗಳು ಭರ್ಜರಿ ಮೊತ್ತದ ಸಂಭಾವನೆ ಜೇಬಿಗೆ ಇಳಿಸಿಕೊಳ್ಳುತ್ತಾರೆ. ಯಾವ ಸ್ಟಾರ್ ಹೀರೋಗೂ (Star Hero) ಕಡಿಮೆ ಇಲ್ಲ ಎಂಬಂತೆ ರೆಮ್ಯುನರೇಷನ್ ಪಡೆಯುತ್ತಾರೆ. ಕೆಲವು ನಟಿಯರು ಮಹಿಳಾ ಪ್ರಧಾನ ಸಿನಿಮಾಗಳನ್ನು ಮಾಡಿದರೆ ಅದಕ್ಕೆ ಪಡೆಯುವ ಮೊತ್ತವೇ ಬೇರೆ. ಹಾಗಾದರೆ ದಕ್ಷಿಣ ಭಾರತದ ಈ ನಟಿಯರು ಪ್ರತಿ ಚಿತ್ರಕ್ಕೆ ಎಷ್ಟು ಸಂಭಾವನೆ ಪಡೆಯುತ್ತಾರೆ? ಆ ಬಗ್ಗೆ ಈ ಸ್ಟೋರಿಯಲ್ಲಿದೆ ಸಂಪೂರ್ಣ ಮಾಹಿತಿ.
ತಮನ್ನಾ ಭಾಟಿಯಾ
ನಟಿ ತಮನ್ನಾ ಭಾಟಿಯಾ ಇತ್ತೀಚೆಗೆ ತಮ್ಮ ಗ್ಲಾಮರ್ ಮೂಲಕ ಎಲ್ಲರ ಮನ ಗೆದ್ದಿದ್ದಾರೆ. ಅವರ ನಟನೆಯ ಹಲವು ಸಿನಿಮಾ ಹಾಗೂ ವೆಬ್ ಸೀರಿಸ್ಗಳು ಇತ್ತೀಚೆಗೆ ರಿಲೀಸ್ ಆಗಿವೆ. ವಿಜಯ್ ವರ್ಮಾ ಜೊತೆಗಿನ ರಿಲೇಶನ್ಶಿಪ್ ವಿಚಾರಕ್ಕೂ ಅವರು ಸುದ್ದಿಯಲ್ಲಿದ್ದಾರೆ. ಪ್ರತಿ ಸಿನಿಮಾಗೆ ಅವರು ಪಡೆಯುವ ಸಂಭಾವನೆ 2-3 ಕೋಟಿ ರೂಪಾಯಿ.
ನಯನತಾರಾ
ನಟಿ ನಯನತಾರಾ ಅವರು ‘ಜವಾನ್’ ಸಿನಿಮಾ ಮೂಲಕ ಬಾಲಿವುಡ್ನಲ್ಲಿ ಮೆರೆಯುತ್ತಿದ್ದಾರೆ. ಶಾರುಖ್ ಖಾನ್ ನಟನೆಯ ಈ ಸಿನಿಮಾ ಕೋಟಿ ಕೋಟಿ ರೂಪಾಯಿ ಬಾಚಿಕೊಳ್ಳುತ್ತಿದೆ. ನಟಿ ನಯನತಾರಾ ಅವರು ಪ್ರತಿ ಚಿತ್ರಕ್ಕೆ 8-10 ಕೋಟಿ ರೂಪಾಯಿ ಪಡೆಯುತ್ತಾರೆ. ‘ಜವಾನ್’ ಸಿನಿಮಾಗಾಗಿ ಅವರು 11 ಕೋಟಿ ರೂಪಾಯಿ ಪಡೆದಿದ್ದರು. ಈ ಚಿತ್ರದಲ್ಲಿ ಅವರ ಪಾತ್ರಕ್ಕೂ ತೂಕ ಇದೆ.
ಅನುಷ್ಕಾ ಶೆಟ್ಟಿ
‘ಬಾಹುಬಲಿ 2’ ಮೂಲಕ ಅಪಾರ ಜನಪ್ರಿಯತೆ ಪಡೆದ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಹೆಚ್ಚು ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿಲ್ಲ. ಅವರ ನಟನೆಯ ‘ಮಿಸ್ ಶೆಟ್ಟಿ ಮಿಸ್ಟರ್ ಪೊಲಿಶೆಟ್ಟಿ’ ಇತ್ತೀಚೆಗೆ ರಿಲೀಸ್ ಆಗಿದೆ. ಸಮಂತಾ ಮೊದಲಾದವರ ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ. ಅನುಷ್ಕಾ ಶೆಟ್ಟಿ ಅವರು ಪ್ರತಿ ಚಿತ್ರಕ್ಕೆ 6 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ಸಮಂತಾ
ಯಾವುದೇ ರೀತಿಯ ಪಾತ್ರಕೊಟ್ಟರೂ ಅದನ್ನು ಮಾಡಿ ತೋರಿಸುವ ತಾಕತ್ತು ಸಮಂತಾಗೆ ಇದೆ. ಆ್ಯಕ್ಷನ್ ಸಿನಿಮಾ ಕೊಟ್ಟರೆ ಆ್ಯಕ್ಷನ್, ರೊಮ್ಯಾಂಟಿಕ್ ಕೊಟ್ಟರೆ ರೊಮ್ಯಾಂಟಿಕ್. ಹೀಗೆಯೇ ಸಿಕ್ಕ ಎಲ್ಲಾ ಪಾತ್ರಗಳನ್ನು ಸಮಂತಾ ಸಮರ್ಥವಾಗಿ ನಿಭಾಯಿಸುತ್ತಾರೆ. ಸಮಂತಾ ಅವರು ಪ್ರತಿ ಸಿನಿಮಾಗೆ 6-8 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಅವರು ‘ಖುಷಿ’ ಸಿನಿಮಾ ಗೆಲುವಿನ ಖುಷಿಯಲ್ಲಿದ್ದಾರೆ.
ರಶ್ಮಿಕಾ ಮಂದಣ್ಣ
ನಟಿ ರಶ್ಮಿಕಾ ಮಂದಣ್ಣ ಅವರು ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಚ್ಯೂಸಿ ಆಗಿಲ್ಲ. ಹಲವು ಸಿನಿಮಾಗಳನ್ನು ಒಪ್ಪಿ ಅವರು ನಟಿಸುತ್ತಿದ್ದಾರೆ. ‘ಪುಷ್ಪ 2’ ಚಿತ್ರದ ಮೂಲಕ ಅವರ ಜನಪ್ರಿಯತೆ ಹೆಚ್ಚಿದೆ. ಅವರು ಪ್ರತಿ ಸಿನಿಮಾಗೆ 2-3 ಕೋಟಿ ರೂಪಾಯಿ ಚಾರ್ಜ್ ಮಾಡುತ್ತಾರೆ ಎಂದು ವರದಿ ಆಗಿದೆ. ‘ಪುಷ್ಪ’ ಚಿತ್ರಕ್ಕಾಗಿ ಅವರು ಕೊಂಚ ಹೆಚ್ಚಿನ ಸಂಭಾವನೆಯನ್ನೇ ಕೇಳಿದ್ದಾರೆ.
ಪೂಜಾ ಹೆಗ್ಡೆ
ನಟಿ ಪೂಜಾ ಹೆಗ್ಡೆ ನಡೆ ಇತ್ತೀಚೆಗೆ ಸಾಕಷ್ಟು ಅನುಮಾನ ಹುಟ್ಟಿಸಿದೆ. ಅವರು ಒಪ್ಪಿಕೊಂಡ ಎಲ್ಲಾ ಸಿನಿಮಾಗಳಿಂದ ಹೊರಬರುತ್ತಿದ್ದಾರೆ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಇದಕ್ಕೆ ಉತ್ತರ ಸಿಕ್ಕಿಲ್ಲ. ಪೂಜಾಗೆ ದಕ್ಷಿಣ ಭಾರತ ಹಾಗೂ ಬಾಲಿವುಡ್ ಎರಡರಲ್ಲೂ ಬೇಡಿಕೆ ಇದೆ. ಅವರು ಚಿತ್ರಕ್ಕೆ 3-4 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
ರಕುಲ್ ಪ್ರೀತ್ ಸಿಂಗ್
ಕನ್ನಡ ಚಿತ್ರರಂಗದಿಂದ ಬಣ್ಣದ ಬದುಕು ಆರಂಭಿಸಿದ ರಕುಲ್ ಪ್ರೀತ್ ಸಿಂಗ್ ಅವರು ನಂತರ ಬಾಲಿವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡರು. ಟಾಲಿವುಡ್ನಲ್ಲೂ ಅವರಿಗೆ ಬೇಡಿಕೆ ಇದೆ. ರಕುಲ್ ಪ್ರತಿ ಚಿತ್ರಕ್ಕ 1.5-2 ಕೋಟಿ ರೂಪಾಯಿ ಪಡೆಯುತ್ತಾರೆ. ಅವರು ಬಾಲಿವುಡ್ ನಿರ್ಮಾಪಕ ಜಾಕಿ ಭಗ್ನಾನಿ ಅವರನ್ನು ಪ್ರೀತಿಸುತ್ತಿದ್ದಾರೆ.
ಕೀರ್ತಿ ಸುರೇಶ್
‘ಮಹಾನಟಿ’ ಸಿನಿಮಾ ಮೂಲಕ ತಾವೋರ್ವ ಅದ್ಭುತ ನಟಿ ಎಂಬುದನ್ನು ಸಾಬೀತು ಮಾಡಿದ್ದಾರೆ ಕೀರ್ತಿ ಸುರೇಶ್. ಅವರ ಬೇಡಿಕೆ ಹೆಚ್ಚುತ್ತಲೇ ಇದೆ. ಅವರು 2-3 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.
ಕಾಜಲ್ ಅಗರ್ವಾಲ್
ನಟಿ ಕಾಜಲ್ ಅಗರ್ವಾಲ್ ಅವರು ಕುಟುಂಬದ ಕಡೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರ ಜೊತೆಗೆ ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ‘ಇಂಡಿಯನ್ 2’ ಮೊದಲಾದ ಚಿತ್ರಗಳು ಅವರ ಕೈಯಲ್ಲಿ ಇವೆ. ಅವರು ಪ್ರತಿ ಸಿನಿಮಾಗೆ ಚಾರ್ಜ್ ಮಾಡೋದು 3-4 ಕೋಟಿ ರೂಪಾಯಿ.
ಇದನ್ನೂ ಓದಿ: ಜವಾನ್ ಸಿನಿಮಾ ನಟ-ನಟಿಯರಿಗೆ ಶಾರುಖ್ ನೀಡಿರುವ ಸಂಭಾವನೆ ಎಷ್ಟು?
ಶ್ರೀನಿಧಿ ಶೆಟ್ಟಿ
‘ಕೆಜಿಎಫ್ 2’ ಚಿತ್ರದ ಮೂಲಕ ಭರ್ಜರಿ ಖ್ಯಾತಿ ಪಡೆದವರು ಶ್ರೀನಿಧಿ ಶೆಟ್ಟಿ. ಅವರು ಪ್ರತಿ ಸಿನಿಮಾಗೆ 2-3 ಕೋಟಿ ರೂಪಾಯಿ ಪಡೆಯುತ್ತಾರೆ. ತಮಿಳಿನಲ್ಲಿ ಅವರು ನಟಿಸಿದ ‘ಕೋಬ್ರಾ’ ಚಿತ್ರಕ್ಕೆ 6 ಕೋಟಿ ರೂಪಾಯಿ ಸಂಭಾವನೆ ಪಡೆದರು ಎಂದು ವರದಿ ಆಗಿತ್ತು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ