ಒಂದು ವಾರ್ಡ್​ಗೆ ಒಂದೇ ಗಣಪತಿ, 3 ದಿನದೊಳಗೆ ವಿಸರ್ಜನೆ; ಆಯೋಜಕರಿಗೆ 2 ಡೋಸ್​ ಲಸಿಕೆ ಕಡ್ಡಾಯ: ಗೌರವ್​ ಗುಪ್ತಾ

| Updated By: Skanda

Updated on: Sep 07, 2021 | 1:10 PM

Ganesha Chaturthi 2021: ಎಲ್ಲಿ ಮೂರ್ತಿ ಇಡಬೇಕು ಎಂದು ಇನ್ಸ್‌ಪೆಕ್ಟರ್, ಎಸಿಪಿಗಳು ಪರಿಶೀಲಿಸಿ ಸ್ಥಳ ಗುರುತಿಸುತ್ತಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. 3 ದಿನಕ್ಕಿಂತ ಹೆಚ್ಚು ಗಣೇಶಮೂರ್ತಿಯನ್ನ ಇಡುವಂತಿಲ್ಲ

ಒಂದು ವಾರ್ಡ್​ಗೆ ಒಂದೇ ಗಣಪತಿ, 3 ದಿನದೊಳಗೆ ವಿಸರ್ಜನೆ; ಆಯೋಜಕರಿಗೆ 2 ಡೋಸ್​ ಲಸಿಕೆ ಕಡ್ಡಾಯ: ಗೌರವ್​ ಗುಪ್ತಾ
ಗೌರವ್ ಗುಪ್ತಾ
Follow us on

ಬೆಂಗಳೂರು: ಗಣೇಶೋತ್ಸವ ಆಚರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದು, 1 ವಾರ್ಡ್‌ಗೆ 1 ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾತ್ರ ಅವಕಾಶ. ಗಣೇಶ ಮೂರ್ತಿ ಕೂರಿಸುವ ಆಯೋಜಕರು 2 ಡೋಸ್ ಕೊರೊನಾ ಲಸಿಕೆಯನ್ನು ಪಡೆದಿರಬೇಕು. ಎಲ್ಲಿ ಮೂರ್ತಿ ಇಡಬೇಕು ಎಂದು ಇನ್ಸ್‌ಪೆಕ್ಟರ್, ಎಸಿಪಿಗಳು ಪರಿಶೀಲಿಸಿ ಸ್ಥಳ ಗುರುತಿಸುತ್ತಾರೆ. ಈ ಬಗ್ಗೆ ಪೊಲೀಸ್ ಆಯುಕ್ತರು, ಅಧಿಕಾರಿಗಳ ಜತೆ ಚರ್ಚಿಸಿದ್ದೇವೆ. 3 ದಿನಕ್ಕಿಂತ ಹೆಚ್ಚು ಗಣೇಶಮೂರ್ತಿಯನ್ನ ಇಡುವಂತಿಲ್ಲ ಎಂದು ತಿಳಿಸಿದ್ದಾರೆ.

ಸ್ಥಳೀಯ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಕೆಲ ನಿರ್ಧಾರ ತೆಗೆದುಕೊಳ್ಳಲಾಗುವುದು. ಸಾರ್ವಜನಿಕರಿಗೆ ಅನುಮತಿ, ಸ್ವಚ್ಛತೆ ಕಾಪಾಡುವ ಬಗ್ಗೆ ಪಾಲಿಕೆಯ ವಾರ್ಡ್ ಅಧಿಕಾರಿಗಳು ನೋಡಿಕೊಳ್ಳುತ್ತಾರೆ. ಕೊವಿಡ್ ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕಿದೆ. ಗಣೇಶ ಮೂರ್ತಿಯನ್ನು 3 ದಿನ ಮಾತ್ರ ಇಡಲು ಅನುಮತಿ ಇದೆ. ಮೂರ್ತಿಯನ್ನು ಮನೆಯಲ್ಲಿ ಅಥವಾ ಮೊಬೈಲ್ ಟ್ಯಾಂಕ್‌ನಲ್ಲಿ ವಿಸರ್ಜನೆ ಮಾಡಬೇಕು. ಇಲ್ಲದಿದ್ದರೆ ಕೃತಕ ವಿಸರ್ಜನಾ ಕೇಂದ್ರಗಳಲ್ಲಿ ಮಾಡಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಹೇಳಿಕೆ ನೀಡಿದ್ದಾರೆ.

ಗೌರಿ ಗಣೇಶ ಹಬ್ಬದ ಹಿನ್ನಲೆ ಕೆಲವು ನಿರ್ಧಾರ ಮಾಡಲಾಗಿದೆ. ವಾರ್ಡ್ ಮತ್ತು ಪೊಲೀಸ್ ಇನ್ಸ್ಪೆಕ್ಟರ್​ಗಳ ಮಟ್ಟದಲ್ಲಿ ಹೇಗೆ ಕೆಲಸ ಮಾಡಬೇಕು ಎಂದು ತಿಳಿಸಲಾಗುತ್ತದೆ. ವಾರ್ಡ್ ಒಂದಕ್ಕೆ ಒಂದು ಕಡೆ ಗಣೇಶ ಮಾತ್ರ ಇಡಬೇಕು ಮತ್ತು ಯಾವ ಜಾಗದಲ್ಲಿ ಇಡಬೇಕು ಎಂಬ ಬಗ್ಗೆ ಪೊಲೀಸ್ ಇನ್ಸ್ಪೆಕ್ಟರ್ ಹಾಗು ಎಸಿಪಿಗಳು ಪರಿಶೀಲನೆ ನಡೆಸಿ ಸ್ಥಳ ಗುರುತು ಮಾಡುತ್ತಾರೆ. ಎಲ್ಲಾ ಗಣೇಶ ಇಡುವ ಕಡೆ ಅಯೋಜಕರು ಎರಡು ಡೋಸ್​ ಕೊರೊನಾ ವ್ಯಾಕ್ಸಿನ್​ ಪಡೆದಿರಬೇಕು. ಶಾಂತಿಯುತವಾಗಿ ಗಣೇಶ ಚತುರ್ಥಿ ನಡೆಸಬೇಕು. ಇದಕ್ಕೆ ಅನುವಾಗುವಂತೆ ಸೂಕ್ಷ್ಮವಾಗಿ ಕೆಲಸ ಮಾಡಬೇಕಿದೆ. ಜತೆಗೆ, ಕೊವಿಡ್ ಹರಡದಂತೆ ಕ್ರಮ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದಕ್ಕೆ ಅನುಮತಿ ಪಡೆಯಬೇಕು. ಬಿಬಿಎಂಪಿ, ಸ್ಥಳೀಯ ಪೊಲೀಸರ ಅನುಮತಿಯನ್ನು ಪಡೆಯಬೇಕು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿಕೆ ನೀಡಿದ್ದಾರೆ. ಗಣೇಶೋತ್ಸವದಲ್ಲಿ ಯಾವುದೇ ಮೆರವಣಿಗೆ, ಡಿಜೆಗೆ ಅವಕಾಶವಿಲ್ಲ. ಮನರಂಜನೆ ಕಾರ್ಯಕ್ರಮಗಳಿಗೂ ಅವಕಾಶ ಇರುವುದಿಲ್ಲ ಎಂದು ಕಮಲ್ ಪಂತ್ ತಿಳಿಸಿದ್ದಾರೆ.

ಇದನ್ನೂ ಓದಿ:
ಸರ್ಕಾರದ ನಿರ್ಬಂಧ ಕಡೆಗಣಿಸಿ, ಕೋಟೆ ನಾಡಿನಲ್ಲಿ 21 ದಿನ ಅದ್ಧೂರಿ ಗಣೇಶೋತ್ಸವಕ್ಕೆ ಭರದ ಸಿದ್ಧತೆ ನಡೆಸಿದ ಭಜರಂಗ ದಳ

ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ನಿಷೇಧಿಸಿ; ಪುದುಚೇರಿ ಲೆ. ಗವರ್ನರ್​​ಗೆ ನಾರಾಯಣಸ್ವಾಮಿ ಒತ್ತಾಯ

(City police commissioner says Ganesha Festival celebration only for three days)

Published On - 1:01 pm, Tue, 7 September 21