ಗೀಸರ್​ನಿಂದ ವಿಷಾನಿಲ ಸೋರಿಕೆ: ಸ್ನಾನಕ್ಕೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸಾವು – ಇರಲಿ ಎಚ್ಚರಿಕೆ

24 ರ ಹರೆಯದ ಸಂಪದ ನಗರದ ಹೊರವಲಯದ ಎಂಬಿಬಿಎಸ್ ಕಾಲೇಜೊಂದರಲ್ಲಿ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡ್ತಿದ್ಳು. ಸೆಪ್ಟೆಂಬರ್ 4 ರ ಹಿಂದಿನ ದಿನ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯ ಕರ್ತವ್ಯ ಮುಗಿಸಿ, ಮರು ದಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅಪಾಂಟ್ಮೆಂಟ್ನ ಐದನೇ ಮಹಡಿಯ ತನ್ನ ಫ್ಲಾಟ್ಗೆ ಹಿಂದಿರುಗಿದ್ಳು. ಎಂದಿನಂತೆ ಫ್ರೆಶ್ ಆಗಲು ತನ್ನ ರೂಮ್ಗೆ ಸ್ನಾನಕ್ಕೆ ಹೋಗುವುದಾಗಿ ಅಮ್ಮನಿಗೆ ಹೇಳಿ ಹೋದವಳು ಮತ್ತೆ ಸಿಕ್ಕಿದ್ದು ಶವವಾಗಿ.

ಗೀಸರ್​ನಿಂದ ವಿಷಾನಿಲ ಸೋರಿಕೆ: ಸ್ನಾನಕ್ಕೆ ಹೋಗಿದ್ದ ಎಂಬಿಬಿಎಸ್ ವಿದ್ಯಾರ್ಥಿನಿ ಸಾವು - ಇರಲಿ ಎಚ್ಚರಿಕೆ
ಮಹಾಲಕ್ಷ್ಮಿ ಲೇಔಟ್ ನಿವಾಸಿ ಸಂಪದ

ಬೆಂಗಳೂರು: ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿ ಸ್ನಾನಕ್ಕೆ ಹೋಗಿದ್ದ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿನಿ ಬಾತ್ರೂಮ್ನಲ್ಲಿ ಮೃತಪಟ್ಟ ಘಟನೆ ಮಹಾಲಕ್ಷ್ಮಿ ಲೇಔಟ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಹಾಲಕ್ಷ್ಮಿ ಲೇಔಟ್ ನಿವಾಸಿ ಸಂಪದ ಮೃತ ವಿದ್ಯಾರ್ಥಿನಿ.

24 ರ ಹರೆಯದ ಸಂಪದ ನಗರದ ಹೊರವಲಯದ ಎಂಬಿಬಿಎಸ್ ಕಾಲೇಜೊಂದರಲ್ಲಿ ಅಂತಿಮ ವರ್ಷದ ವಿದ್ಯಾಭ್ಯಾಸ ಮಾಡ್ತಿದ್ಳು. ಸೆಪ್ಟೆಂಬರ್ 4 ರ ಹಿಂದಿನ ದಿನ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯ ಕರ್ತವ್ಯ ಮುಗಿಸಿ, ಮರು ದಿನ ಮಹಾಲಕ್ಷ್ಮೀ ಲೇಔಟ್ನಲ್ಲಿರುವ ಅಪಾಂಟ್ಮೆಂಟ್ನ ಐದನೇ ಮಹಡಿಯ ತನ್ನ ಫ್ಲಾಟ್ಗೆ ಹಿಂದಿರುಗಿದ್ಳು. ಎಂದಿನಂತೆ ಫ್ರೆಶ್ ಆಗಲು ತನ್ನ ರೂಮ್ಗೆ ಸ್ನಾನಕ್ಕೆ ಹೋಗುವುದಾಗಿ ಅಮ್ಮನಿಗೆ ಹೇಳಿ ಹೋದವಳು ಮತ್ತೆ ಸಿಕ್ಕಿದ್ದು ಶವವಾಗಿ.

ಗೀಸರ್ನಿಂದ ವಿಷಾನಿಲ ಸೋರಿಕೆಯಾಗಿ ಸ್ನಾನಕ್ಕೆಂದು ಬಾತ್ ರೂಮ್ಗೆ ಹೋಗಿದ್ದ ಸಂಪದ ಅಲ್ಲೇ ಉಸಿರುಕಟ್ಟಿ ಮೃತಪಟ್ಟಿದ್ದಾರೆ. ಆದ್ರೆ ಬಾತ್ ರೂಮ್ಗೆ ಹೋಗಿ ಒಂದೂವರೆ ಗಂಟೆಯಾದ್ರೂ ಮಗಳು ಹೊರ ಬರಲಿಲ್ಲವೆಂದು ಇತ್ತ ಅಡಿಗೆ ಮನೆಯಲ್ಲಿ ತನ್ನ ಕೆಲಸದಲ್ಲಿ ನಿರತರಾಗಿದ್ದ ತಾಯಿ ಸ್ನಾನದ ಕೋಣೆಯ ಬಾಗಿಲು ಬಡಿದಿದ್ದಾರೆ. ಪ್ರತಿಕ್ರಿಯೆ ಬರದಿದ್ದಾಗ ಮಗನನ್ನ ಕರೆದಿದ್ದಾರೆ. ಆತಂಕಗೊಂಡು ಬಾತ್ ರೂಮ್ ಬಾಗಿಲು ಒಡೆದು ನೋಡಿದಾಗ, ಸಂಪದ ಅಂಗಾತ ಕುಸಿದು ಬಿದ್ದಿದ್ದಾರೆ‌. ಗಾಬರಿಗೊಂಡ ಆಕೆ ಸೋದರ ಮತ್ತು ತಾಯಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದರಾದ್ರೂ, ವೈದ್ಯರು ಅಷ್ಟರಲ್ಲಾಗಲೇ ಆಕೆ ಕೊನೆಯುಸಿರೆಳೆದಿರುವುದಾಗಿ ತಿಳಿಸಿದ್ದಾರೆ. ಬಳಿಕ ಮಹಾಲಕ್ಣ್ಮೀ ಲೇಔಟ್ ಪೊಲೀಸರು ಪರಿಶೀಲನೆ ನಡೆಸಿ, ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹ ಹಸ್ತಾಂತರಿಸಿ ಕೇಸ್ ದಾಖಲಿಸಿಕೊಂಡು ತನಿಖೆ‌ಮುಂದುವರೆಸಿದ್ದಾರೆ.

ಅದೇನೆ ಇರಲಿ ಭವಿಷ್ಯದಲ್ಲಿ ನೂರಾರು ಕನಸು ಕಟ್ಟಿ ಬದುಕಿ ಬಾಳಬೇಕಿದ್ದ ಸಂಪದ ಇನ್ನೂ ನೆನಪು ಮಾತ್ರ. ಎಂಬಿಬಿಎಸ್ ಪದವಿ ಪೂರೈಸಿ ಇನ್ನೇನು ವೈದ್ಯೆ ಆಗಿ ರೋಗಿಗಳ ಸಂತೈಸುತ್ತಾ ರೋಗಗಳ ಗುಣಪಡಿಸಿ, ನೋವು ನಿವಾರಿಸುವ ಮೂಲಕ ರೋಗಿಗಳ ಬಾಳಲ್ಲಿ ಚೈತನ್ಯ ತುಂಬಬೇಕಿದ್ದಾಕೆ ಮಸಣದ ಹಾದಿ ಹಿಡಿದಿದ್ದಾಳೆ‌. ಆಕೆಯ ಮನೆಯಲ್ಲೀಗ ಸೂತಕದ ಛಾಯೆ ಆವರಿಸಿದೆ. ಇನ್ನಾದ್ರೂ ಇಂಥ ಅನಾಹುತಗಳಾಗುವ ಮುನ್ನ ಎಚ್ಚರದಿಂದಿರುವುದು ಒಳಿತು.

ಇದನ್ನೂ ಓದಿ: ಹಾಲ್ ​ಟಿಕೆಟ್ ಪಡೆದು ಮನೆಗೆ ವಾಪಸಾಗುವಾಗ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಎಸ್‌ಎಸ್ಎಲ್‌ಸಿ‌ ವಿದ್ಯಾರ್ಥಿನಿ ಸಾವು

Click on your DTH Provider to Add TV9 Kannada