ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುತ್ತಿದ್ದರು; 2023ರಲ್ಲಿ ಯಾರು ಮುಳುಗುತ್ತಾರೆ ನೋಡೋಣ: ಹೆಚ್​ಡಿ ರೇವಣ್ಣ

HD Revanna: ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ 2023 ರಲ್ಲಿ ತೋರಿಸುತ್ತೇವೆ. ಈ ಬಗ್ಗೆ ಕಾಲವೇ ನಿರ್ಧರಿಸುತ್ತದೆ, ಸತ್ಯ ಜಾಸ್ತಿ ದಿನ ಮುಚ್ಚಿಡಲು ಆಗಲ್ಲ ಎಂದು ರೇವಣ್ಣ ಹೇಳಿದ್ದಾರೆ.

ಜೆಡಿಎಸ್ ಮುಳುಗುತ್ತಿರುವ ಹಡಗು ಎನ್ನುತ್ತಿದ್ದರು; 2023ರಲ್ಲಿ ಯಾರು ಮುಳುಗುತ್ತಾರೆ ನೋಡೋಣ: ಹೆಚ್​ಡಿ ರೇವಣ್ಣ
ಹೆಚ್.ಡಿ. ರೇವಣ್ಣ

ಬೆಂಗಳೂರು: ಜೆಡಿಎಸ್​ ಮುಳುಗುತ್ತಿರುವ ಹಡಗು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹೇಳುತ್ತಿದ್ದರು. 2023 ರ ಚುನಾವಣೆಯಲ್ಲಿ ಯಾರು ಮುಳುಗ್ತಾರೆ ನೋಡೋಣ. ಹೆಚ್.ಡಿ. ದೇವೇಗೌಡ 60 ವರ್ಷಗಳ ರಾಜಕೀಯದಲ್ಲಿ ಏಳುಬೀಳು ಕಂಡಿದ್ದಾರೆ. ಹಡಗುಗಳು ಮುಳುಗಿದಾಗ ಸಬ್​ಮರೀನ್​ ಕೆಲಸ ಮಾಡುತ್ತವೆ. ಜೆಡಿಎಸ್​ನಲ್ಲಿ ಸಬ್​ಮರೀನ್​ ರೀತಿ ಕೆಲಸ ಮಾಡುವವರಿದ್ದಾರೆ ಎಂದು ವಿಧಾನಸೌಧದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹೇಳಿಕೆ ನೀಡಿದ್ದಾರೆ.

2023 ರ ಚುನಾವಣೆವರೆಗೂ ಅರುಣ್ ಸಿಂಗ್​ ಮುಂದುವರಿಸಿ. ಬಿಜೆಪಿ ಉಸ್ತುವಾರಿಯಾಗಿ ಅರುಣ್ ಸಿಂಗ್ ಮುಂದುವರಿಸಿ ಎಂದು ಕೇಂದ್ರದ ಬಿಜೆಪಿ ನಾಯಕರಿಗೆ ಹೆಚ್.ಡಿ. ರೇವಣ್ಣ ಮನವಿ ಮಾಡಿದ್ದಾರೆ. ಬಿಎಸ್​ವೈ ದ್ವೇಷದ ರಾಜಕಾರಣದ ಬಗ್ಗೆ ಸದನದಲ್ಲಿ ಹೇಳುವೆ ಎಂದು ತಿಳಿಸಿದ್ದಾರೆ. ಸೌಜನ್ಯದಿಂದ ಹೆಚ್.ಡಿ. ದೇವೇಗೌಡ ನೋಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಂದಿದ್ದರು. ದೇವೇಗೌಡರನ್ನು ನೋಡಲು ಬಂದಿದ್ದಾಗ ಗೌರವ ಕೊಟ್ಟಿದ್ದೇವೆ. ನಾವೇನಾದರೂ ಬಿಜೆಪಿ ಸೇರುತ್ತೇವೆಂದು ಅರ್ಜಿ ಹಾಕಿದ್ದೇವಾ? ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.

ಕಲ್ಬುರ್ಗಿ ಪಾಲಿಕೆ ಅಧಿಕಾರ ವಿಚಾರವಾಗಿ ರೇವಣ್ಣ ಮಾತನಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ದೇವೇಗೌಡರ ಸಮಕಾಲೀನರು. ದೇವೇಗೌಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧ. ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ 2023 ರಲ್ಲಿ ತೋರಿಸುತ್ತೇವೆ. ಈ ಬಗ್ಗೆ ಕಾಲವೇ ನಿರ್ಧರಿಸುತ್ತದೆ, ಸತ್ಯ ಜಾಸ್ತಿ ದಿನ ಮುಚ್ಚಿಡಲು ಆಗಲ್ಲ ಎಂದು ರೇವಣ್ಣ ಹೇಳಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ಹಾರಿದ 4 ಜೆಡಿಎಸ್ ಸದಸ್ಯರು; 4 ವಾರ್ಡ್​ ಗೆದ್ದಿದ್ದೇ ಅಚ್ಚರಿ ಎಂದ ದೇವೇಗೌಡ

ಇದನ್ನೂ ಓದಿ: ಕಲಬುರಗಿ ಮಹಾನಗರ ಪಾಲಿಕೆ ರಿಸಲ್ಟ್ ಅತಂತ್ರ: ಹೆಚ್​ಡಿ ದೇವೇಗೌಡರ ಜೊತೆ ಮೈತ್ರಿ ಮಾಡಿಕೊಳ್ಳಲು ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ?

Click on your DTH Provider to Add TV9 Kannada