ಬೆಂಗಳೂರು: ಮೀಟರ್ ಬಡ್ಡಿಯಿಂದ ತಪ್ಪಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಸ್ವನಿಧಿ ಯೋಜನೆ(Svanidhi Scheme) ಜಾರಿ ಮಾಡಿದ್ದಾರೆ. ಇಂದು (ಜುಲೈ 18) ಪಾಲಿಕೆಯ ಡಾ.ರಾಜ್‌ಕುಮಾರ್ ಸಂಭಾಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವನಿಧಿ ಮಹೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಹಾಗೂ ನಿಗದಿತ ಅವಧಿಯಲ್ಲಿ ಬ್ಯಾಂಕ್ ಗಳ ಸಾಲ ಮರು ಪಾವತಿಸಿದ ಬೀದಿ ಬದಿ ವ್ಯಾಪಾರಿಗಳಿಗೆ ಸಿಎಂ ಗೌರವ ಸಲ್ಲಿಸಿದ್ದಾರೆ.
ಇನ್ನು ಕಾರ್ಯಕ್ರಮದಲ್ಲಿ ಸ್ವನಿಧಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಬೊಮ್ಮಾಯಿ, ಒಟ್ಟು 9 ಸಾವಿರ ಫಲಾನುಭವಿಗಳಿಗೆ ಹಣಕಾಸಿನ ಸಹಕಾರ ಕೊಡಲಾಗುತ್ತೆ. ಮೀಟರ್ ಬಡ್ಡಿಯಿಂದ ತಪ್ಪಿಸಿ ಸರ್ಕಾರ ಸ್ವನಿಧಿ ಯೋಜನೆ ಮಾಡಿದ್ದಾರೆ. ಕೇಂದ್ರ ಸರ್ಕಾರದಿಂದ ಹಣ ಬರುತ್ತಿದೆ. ನಮ್ಮ ಪ್ರಧಾನಿಗಳು ಬಡಪರ ಕಾರ್ಯಕ್ರಮ ಮಾಡ್ತಾರೆ. ಬಡ ಹಣ್ಣುಮಕ್ಕಳಿಗೆ ಅನುಕೂಲವಾಗಲೆಂದು ಗ್ಯಾಸ್ ಯೋಜನೆ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಡವರ ಬಗ್ಗೆ ಸದಾ ಕಳಕಳಿ ಇರುತ್ತದೆ. ಕೆಳಹಂತದಲ್ಲಿ ದುಡಿಯುವರ ಕೈಯಲ್ಲಿ ದೇಶದ ಆರ್ಥಿಕತೆ ಇದೆ. ಒಂದು ಕಾಲದಲ್ಲಿ ದುಡ್ಡೆ ದೊಡ್ಡಪ್ಪ ಅನ್ನೋ ಕಾಲ ಇತ್ತು. ಈಗ ದುಡಿಮೆ ಮಾಡುವವರೆ ದೊಡ್ಡಪ್ಪ ಹಾಗಾಗಿ ದುಡಿಮೆ ಮಾಡಬೇಕು. ನಿಮ್ಮ ದುಡಿಮೆಯನ್ನ ಪೂಜೆ ಮಾಡಿ. ಮಹಾಲಕ್ಷ್ಮಿ ಒಲಿಯುತ್ತಾಳೆ.
ಈ ಯೋಜನೆಯಲ್ಲಿ ದುಡ್ಡು ಕೊಡುವುದಷ್ಟೇ ಅಲ್ಲಾ 7% ಸಬ್ಸಿಡಿ ಕೂಡ ಕೊಡಲಾಗುತ್ತೆ. ಅವರ ಅವರ ಏರಿಯಾದಲ್ಲಿ ಸಾಲ ಕೊಡಲು ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ. ಮುಂದಿನ ದಿನ ರಾಜ್ಯ ಸರ್ಕಾರದಿಂದಲೂ ಬೀದಿ ಬದಿ ವ್ಯಾಪಾರಿಗಳಿಗೆ ಹೊಸ ಯೋಜನೆ ಮಾಡಲಾಗುತ್ತೆ. ಈ ಯೋಜನೆಯಿಂದ ಲಕ್ಷಾಂತರ ಜನರಿಗೆ ಕೆಲಸ ಸಿಗುತ್ತೆ. ಈ ಯೋಜನೆ ಮೊದಲು ಬಾಂಗ್ಲಾ ದೇಶದಲ್ಲಿ ಪ್ರಾರಂಭ ಮಾಡಿದ್ರು. ಬೀದಿ ವ್ಯಾಪಾರಿಗಳ ಕೈ ಭೂಮಿ ನೋಡಬೇಕು ಹೊರತು ಆಕಾಶ ನೋಡಬಾರದು. ನಿಮ್ಮ ಬೇಕು ಬೇಡಗಳನ್ನ ನೀವೇ ನಿರ್ಧರಿಸಿದ್ರೆ ಸ್ವಾವಲಂಭಿಗಳು ಆಗುತ್ತೀರಿ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.