ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ ರಾಜ್ಯದ ಮಾದರಿ ನ್ಯಾಯಮೂರ್ತಿ ಇವರೊಬ್ಬರೇ!

Justice B Veerappa: ಶೋಷಿತ ಅಥವಾ ಅನ್ಯಾಯಕ್ಕೆ ಒಳಗಾದ ಜನರ ಕಣ್ಣಿಗೆ ನ್ಯಾಯಾಂಗ ಆಶಾಕಿರಣವಾಗಿ ಕಾಣುತ್ತಿದೆ. ನ್ಯಾಯಾಂಗದ ಮೇಲಿನ ನಿರೀಕ್ಷೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ವಿಭಿನ್ನವಾಗಿ ಕಾಣುತ್ತಾರೆ. ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದಲ್ಲಿ ನ್ಯಾಯಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ ರಾಜ್ಯದ ಮಾದರಿ ನ್ಯಾಯಮೂರ್ತಿ ಇವರೊಬ್ಬರೇ!
ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ ರಾಜ್ಯದ ಮಾದರಿ ನ್ಯಾಯಮೂರ್ತಿ ಇವರೊಬ್ಬರೇ!
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jul 18, 2022 | 7:41 PM

ಬೆಂಗಳೂರು: ಸಾರ್ವಜನಿಕ ಕ್ಷೇತ್ರದಲ್ಲಿ ಸೇವ ಸಲ್ಲಿಸುವವರು ನಿಯಮಾನುಸಾರ ಮತ್ತು ನಿಗದಿತವಾಗಿ ತಮ್ಮ ತಮ್ಮ ಆಸ್ತಿಯ ವಿವರವನ್ನು ತಮ್ಮ ಇಲಾಖೆ ಅಥವಾ ಅದರ ಮುಖ್ಯಸ್ಥರಿಗೆ ಸಲ್ಲಿಸುತ್ತಾರೆ. ಆದರೆ, ಇಂತಹ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ತೆರೆದಿಡುವುದು ಅವರವರ ಆಯ್ಕೆ ಅತ್ಯುನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕರ ಮುಂದಿಟ್ಟಾಗ ಜನರಲ್ಲಿ ಅವರ ಬಗ್ಗೆ ಒಂದು ವಿಶ್ವಾಸ ಮತ್ತು ನಂಬಿಕೆ ಮೂಡುತ್ತದೆ. ಇದೇ ವೇಳೆ ಆ ಸಂಸ್ಥೆ ಅಥವಾ ಇಲಾಖೆಯ ಕುರಿತಂತೆಯೂ ಜನರಲ್ಲಿರುವ ಭರವಸೆಗಳು ಗಟ್ಟಿಯಾಗುತ್ತವೆ. ಸಾರ್ವಜನಿಕ ಉತ್ತರದಾಯಿತ್ವವೂ ಬಲಗೊಳ್ಳುತ್ತದೆ.

ಶ್ರೀನಿವಾಸಪುರದ ನ್ಯಾಯಮೂರ್ತಿ ಬಿ. ವೀರಪ್ಪ

ಇಂತಹ ಸಾರ್ವಜನಿಕ ಉತ್ತರದಾಯಿತ್ವವನ್ನು ಗೌರವಿಸಿಕೊಂಡು ಬರುತ್ತಿರುವ ಹಾಗೂ ರಾಜ್ಯದ ಜನತೆಯ ಮುಂದೆ ಪ್ರತಿ ವರ್ಷವೂ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುತ್ತಿರುವ ಓರ್ವ ಮಾದರಿ ನ್ಯಾಯಮೂರ್ತಿ ನಮ್ಮ ರಾಜ್ಯದಲ್ಲಿದ್ದಾರೆ. ಅವರು ಬೇರಾರೂ ಅಲ್ಲ ಹೈಕೋರ್ಟ್‌ ನ ಹಿರಿಯ ನ್ಯಾಯಮೂರ್ತಿ ಬಿ. ವೀರಪ್ಪ, ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿರುವ ಇವರು ಪ್ರತಿ ವರ್ಷ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುತ್ತಿದ್ದಾರೆ. ನ್ಯಾ. ಬಿ. ವೀರಪ್ಪ ಅವರು ಕೋಲಾರ ಜಿಲ್ಲೆಯ ಶ್ರೀನಿವಾಸಪುರದವರು.

ಕಡ್ಡಾಯವಲ್ಲ: ನಿಯಮಾನುಸಾರ ಎಲ್ಲ ನ್ಯಾಯಮೂರ್ತಿಗಳೂ ತಮ್ಮ ಆಸ್ತಿಯ ವಿವರಗಳನ್ನು ಪ್ರತಿ ವರ್ಷ ರಾಜ್ಯ ಹೈಕೋರ್ಟ್‌ ನ ಮುಖ್ಯ ನ್ಯಾಯಮೂರ್ತಿಗಳಿಗೆ ಸಲ್ಲಿಸುತ್ತಾರೆ. ಆದರೆ, ಈ ವಿವರವನ್ನು ಸಾರ್ವಜನಿಕಗೊಳಿಸುವುದು ಕಡ್ಡಾಯವಲ್ಲ. ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಸಾರ್ವಜನಿಕವಾಗಿ ಘೋಷಿಸಿಕೊಳ್ಳಬೇಕೆಂಬ ನಿಯಮ ಅಥವಾ ಕಾಯ್ದೆಯೂ ನಮ್ಮಲ್ಲಿಲ್ಲ. ಹಾಗಿದ್ದೂ, ನ್ಯಾಯಾಂಗದ ಬಗೆಗಿನ ಸಾರ್ವಜನಿಕ ನಂಬಿಕೆಯನ್ನು ಬಲಪಡಿಸಲು ಇಂತಹುದೊಂದು ಕ್ರಮ ಅನುಸರಿಸುವಂತೆ ಸುಪ್ರೀಂಕೋರ್ಟ್ 1997ರಲ್ಲಿ ಕರೆ ನೀಡಿತ್ತು.

ಅಂದಿನ ಸಿಜೆಐ ನೇತೃತ್ವದಲ್ಲಿ ನಡೆದ ನ್ಯಾಯಮೂರ್ತಿಗಳ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ ನ್ಯಾಯಮೂರ್ತಿಗಳು ತಮ್ಮ ಆಸ್ತಿ ಹಾಗೂ ಸಾಲದ ವಿವರಗಳನ್ನು ತಮ್ಮ ತಮ್ಮ ಕೋರ್ಟ್ ವೆಬ್ ಸೈಟ್ ಗಳಲ್ಲಿ ಪ್ರಕಟಿಸಿಕೊಂಡು ಬರುತ್ತಿದ್ದರು. ಆದರೆ, ಹೀಗೆ ತಮ್ಮ ಆಸ್ತಿ ವಿವರವನ್ನು ಸಾರ್ವಜನಿಕಗೊಳಿಸುವ ನ್ಯಾಯಮೂರ್ತಿಗಳ ಸಂಖ್ಯೆ ಇತ್ತೀಚೆಗೆ ಕ್ಷೀಣಿಸಿದ.

ನ್ಯಾ. ಬಿ. ವೀರಪ್ಪ ಅವರ ಆಸ್ತಿ ವಿವರ:

ನ್ಯಾಯಮೂರ್ತಿ ಬಿ. ವೀರಪ್ಪ ಅವರು ತಮ್ಮ ಆಸ್ತಿಯ ಕುರಿತಂತೆ ಪ್ರತಿವರ್ಷವೂ ಹೈಕೋರ್ಟ್ ವೆಬ್ ಸೈಟ್ ನಲ್ಲಿ ಅಪ್​ ಡೇಟ್ ಮಾಡಿಕೊಂಡು ಬರುತ್ತಿದ್ದಾರೆ. ಅದರಂತೆ ವರ್ಷಾಂತ್ಯದಲ್ಲಿ ಅಂದರೆ, 2021ರ ಡಿಸೆಂಬರ್ 9ರಂದು ತಮ್ಮೆಲ್ಲಾ ಆಸ್ತಿಯ ವಿವರಗಳನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ. ತಮ್ಮ ಹಾಗೂ ತಮ್ಮ ಪತ್ನಿಯ ಹೆಸರಿನಲ್ಲಿರುವ ಮನೆ, ಸೈಟು ಹಾಗೂ ಬ್ಯಾಂಕ್ ಬ್ಯಾಲೆನ್ಸ್ ಕುರಿತ ವಿವರಗಳನ್ನು ಸ್ವ ಇಚ್ಛೆಯಿಂದ ಹೈಕೋರ್ಟ್‌ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾರೆ.

ಆಸ್ತಿ ವಿವರ ಬಹಿರಂಗಗೊಳಿಸಿದ್ದ ನ್ಯಾಯಮೂರ್ತಿಗಳು:

ರಾಜ್ಯ ಹೈಕೋರ್ಟ್‌ ವೆಬ್ ಸೈಟ್ ಪರಿಶೀಲಿಸಿದರೆ ಈ ಹಿಂದೆ ಹಲವು ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಸಾರ್ವಜನಿಕಗೊಳಿಸಿರುವುದು ಕಂಡುಬರುತ್ತದೆ. ಇದೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿರುವ ಬಿ.ವಿ. ನಾಗರತ್ನ ಅವರು 2009ರಲ್ಲಿ ತಮ್ಮ ಆಸ್ತಿ ಕುರಿತ ವಿವರ ಪ್ರಕಟಿಸಿದ ಮಾಹಿತಿ ಇದೆ.

ಕಳೆದ ವರ್ಷ ಗುಜರಾತ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಹುದ್ದೆಗೇರಿದ ನ್ಯಾ. ಅರವಿಂದ್ ಕುಮಾರ್ ಅವರು 2009ರಲ್ಲಿ ಆಸ್ತಿ ಘೋಷಿಸಿಕೊಂಡ ವಿವರವಿದೆ. ತಮ್ಮೆಲ್ಲ ಕುಟುಂಬ ಸದಸ್ಯರ ಹೆಸರಿನಲ್ಲಿರುವ ಆಸ್ತಿ ವಿವರಗಳನ್ನು ನ್ಯಾ. ಅರವಿಂದ್ ಕುಮಾರ್ ಸಾರ್ವಜನಿಕಗೊಳಿಸಿದ್ದರು. ಅದೇ ರೀತಿ ನಿವೃತ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಾಗೂ ನ್ಯಾಯಮೂರ್ತಿ ಜಿ. ನರೇಂದರ್ ತಮ್ಮ ಆಸ್ತಿ ಹಾಗೂ ಸಾಲಗಳ ವಿವರವನ್ನು 2015ರಲ್ಲಿ ಘೋಷಿಸಿಕೊಂಡಿರುವುದು ಕಂಡುಬರುತ್ತದೆ.

ಹೆಚ್ಚುತ್ತಿರುವ ನ್ಯಾಯಾಂಗದ ಮೇಲಿನ ನಿರೀಕ್ಷೆ:

ಪ್ರಸ್ತುತ ಶಾಸಕಾಂಗ ಹಾಗೂ ಕಾರ್ಯಾಂಗಗಳ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನವಿದೆ. ರಾಜಕಾರಣಿಗಳು, ಸರ್ಕಾರಿ ನೌಕರರು ತಮ್ಮ ಜವಾಬ್ದಾರಿಗಿಂತ ಅಧಿಕಾರವನ್ನೇ ಹೆಚ್ಚಾಗಿ ಪ್ರೀತಿಸುತ್ತಿರುವುದು ಈ ಅಸಮಾಧಾನಕ್ಕೆ ಕಾರಣ. ಹೀಗಾಗಿಯೇ ಶೋಷಿತ ಅಥವಾ ಅನ್ಯಾಯಕ್ಕೆ ಒಳಗಾದ ಜನರ ಕಣ್ಣಿಗೆ ನ್ಯಾಯಾಂಗವಷ್ಟೇ ಆಶಾಕಿರಣವಾಗಿ ಕಾಣುತ್ತಿದೆ. ನ್ಯಾಯಾಂಗದ ಮೇಲಿನ ನಿರೀಕ್ಷೆ ಹಿಂದೆಂದಿಗಿಂತಲೂ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಬಿ. ವೀರಪ್ಪ ವಿಭಿನ್ನವಾಗಿ ಕಾಣುತ್ತಾರೆ. ಪಾರದರ್ಶಕತೆ ಮತ್ತು ಸಾರ್ವಜನಿಕ ಉತ್ತರದಾಯಿತ್ವದಲ್ಲಿ ನ್ಯಾಯಾಂಗಕ್ಕೆ ಮಾದರಿಯಾಗಿ ನಿಲ್ಲುತ್ತಾರೆ.

Published On - 7:38 pm, Mon, 18 July 22

ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಪ್ರೀತಿಯಿಂದ ಸಂಭಾವನೆ ಕೊಟ್ಟರು: ಬಿಗ್ ಬಾಸ್ ಪೇಮೆಂಟ್ ಬಗ್ಗೆ ಗೌತಮಿ ಮಾತು
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕ ಅಧ್ಯಕ್ಷ ಟ್ರಂಪ್​ಗೂ ಮೊದಲೇ ಪ್ರಮಾಣವಚನ ಸ್ವೀಕರಿಸಿದ ಉಪಾಧ್ಯಕ್ಷ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಅಮೆರಿಕದ 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್​ ಪ್ರಮಾಣ ವಚನದ ನೇರಪ್ರಸಾರ
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಮೋಕ್ಷಿತಾ ಕಿಡ್ನಾಪ್ ಕೇಸ್ ಬಗ್ಗೆ ಗೊತ್ತಾದಾಗ ಗೌತಮಿ ರಿಯಾಕ್ಷನ್ ಹೇಗಿತ್ತು?
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಟ್ರಂಪ್ ಪ್ರಮಾಣವಚನ ಸ್ವೀಕಾರಕ್ಕೆ ಕ್ಷಣಗಣನೆ; ವೇದಿಕೆ ಸುತ್ತ ಜನವೋ ಜನ
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಮಂಗಳೂರು ಬ್ಯಾಂಕ್ ದರೋಡೆಕೋರರು ಸಿಕ್ಕಿಬಿದ್ದಿದ್ಹೇಗೆ?
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಫಿನಾಲೆ ವೀಕ್ ತಲುಪದೆ ಹೋಗಿದ್ದು ನನ್ನ ಪತಿಗೆ ನಿರಾಶೆ ತಂದಿದೆ: ಗೌತಮಿ ಜಾಧವ್
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಮಂಜು ಮನೆಯವರ ಮಾತುಗಳು ಬೇಸರ ತರಿಸಿತು: ಗೌತಮಿ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಟ್ರಂಪ್ ಪ್ರಮಾಣವಚನಕ್ಕೆ ಮುಂಜಾನೆಯಿಂದಲೇ ಕಿಕ್ಕಿರಿದು ಸೇರುತ್ತಿರುವ ಜನ
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್
ಪ್ರೀತಿಯ ಮಾತುಗಳಿಂದ ಸುದೀಪ್ ಎಲ್ಲರನ್ನೂ ಗೆದ್ದುಬಿಡುತ್ತಾರೆ: ಧನರಾಜ್