ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ

| Updated By: ಆಯೇಷಾ ಬಾನು

Updated on: Aug 01, 2021 | 12:12 PM

ಯಡಿಯೂರಪ್ಪ ಜೊತೆ ಮಾತುಕತೆ ನೆಡೆಸಿದ ಸಿಎಂ ಬೊಮ್ಮಾಯಿ ಸಂಪುಟ ರಚನೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ಬೊಮ್ಮಾಯಿ ಸಂಪುಟ ಸೇರಲು ಬಿಎಸ್ವೈ ಆಪ್ತ ಶಾಸಕರು ಲಾಬಿ ನಡೆಸುತ್ತಿದ್ದಾರೆ.

ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಬಿ.ಎಸ್. ಯಡಿಯೂರಪ್ಪ ಜೊತೆ ಸಿಎಂ ಬಸವರಾಜ ಬೊಮ್ಮಾಯಿ ಚರ್ಚೆ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಶಕ್ತಿಕೇಂದ್ರ ಕಾವೇರಿಯಲ್ಲಿ ಬಿ.ಎಸ್. ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. ಯಡಿಯೂರಪ್ಪ ಜೊತೆ ಮಾತುಕತೆ ನೆಡೆಸಿದ ಸಿಎಂ ಬೊಮ್ಮಾಯಿ ಸಂಪುಟ ರಚನೆ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಈಗಾಗಲೇ ಬೊಮ್ಮಾಯಿ ಸಂಪುಟ ಸೇರಲು ಬಿಎಸ್ವೈ ಆಪ್ತ ಶಾಸಕರು ಲಾಬಿ ನಡೆಸುತ್ತಿದ್ದಾರೆ.

ಸಂಪುಟಕ್ಕೆ ಸೇರಿಕೊಳ್ಳಲು ಹಲವು ಶಾಸಕರು ಬಿಎಸ್ವೈ ಭೇಟಿ ಮಾಡಿ ಚರ್ಚೆ ನೆಡೆಸುತ್ತಿದ್ದಾರೆ. ಹೀಗಾಗಿ ಆಪ್ತ ಶಾಸಕರ ಪರ ಯಡಿಯೂರಪ್ಪ ಬ್ಯಾಟ್ ಬೀಸುತ್ತಾರ? ತಮ್ಮ ಆಪ್ತರನ್ನು ಸಂಪುಟಕ್ಕೆ ಸೇರಿಸಲು ಹೈಕಮಾಂಡ್ ಬಳಿ ಒತ್ತಡ ಹಾಕ್ತಾರ ಬಿಎಸ್ವೈ? ಎಂಬ ಅನುಮಾನ ಮೂಡಿದೆ.

ಇನ್ನೂ ಮುಗಿಯದ ಸಂಪುಟ ರಚನೆ ಕಸರತ್ತು, ಮತ್ತೆ ದೆಹಲಿಗೆ ಸಿಎಂ?
ಈ ಬಾರಿ ದೆಹಲಿ ಭೇಟಿ ವೇಳೆ ಸಿಎಂ‌ ಸಂಪುಟ ರಚನೆ ಬಗ್ಗೆ ಕೇವಲ‌ ಪ್ರಾಥಮಿಕ ಚರ್ಚೆ ನಡೆಸಿದ್ದಾರೆ. ಸಂಪುಟಕ್ಕೆ‌ ಸೇರ್ಪಡೆ ಮಾಡಿಕೊಳ್ಳಲೇ‌ಬೇಕಾದ ಒಂದಷ್ಟು ಮಂದಿಯ ಹೆಸರು ಚರ್ಚೆಯಾಗಿದೆ ಎನ್ನಲಾಗಿದೆ. ಆದ್ರೆ ಒಟ್ಟು ಸಂಪುಟದ ಬಗ್ಗೆ ವಿವರವಾಗಿ ಚರ್ಚೆ ಮಾಡಲು‌ ಸಾಧ್ಯವಾಗಿಲ್ಲ. ಏಕೆಂದರೆ ಸಿಎಂ ಬೊಮ್ಮಾಯಿಯವರಿಗೆ ಸಂಪುಟ ರಚನೆಗೆ ಬೇಕಾದ ತಯಾರಿ ನಡೆಸಲು ಅವಕಾಶ ಸಿಕ್ಕಿಲ್ಲ. ಅರ್ಜೆಂಟಾಗಿ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಯಾಗಿದ್ದಾರೆ. ಹೀಗಾಗಿ ಸಂಪುಟ ಬಗ್ಗೆ ಚರ್ಚೆ ನಡೆಸಿ ಪಟ್ಟಿ ಫೈನಲ್ ಮಾಡಲು ಸಿಎಂ‌ ಬೊಮ್ಮಾಯಿ ಮತ್ತೊಮ್ಮೆ ದೆಹಲಿಗೆ ತೆರಳಲಿದ್ದಾರೆ. ನಾಳೆ ಸಂಜೆ ಅಥವಾ ಮಂಗಳವಾರ ದೆಹಲಿಗೆ ತೆರಳಿ‌ ಸಂಪುಟ ಸೇರುವವರ ಪಟ್ಟಿ ಫೈನಲ್ ಮಾಡಲಿದ್ದಾರೆ. ಎಲ್ಲಾ ಅಂದುಕೊಂಡಂತಾದರೆ ಬುಧವಾರ ಅಥವಾ ಗುರುವಾರ ನೂತನ ಸಚಿವರು ಸಂಪುಟ ಸೇರುವ ಸಾಧ್ಯತೆ ಇದೆ. ಹೈಕಮಾಂಡ್ ನಾಯಕರು ನೇರವಾಗಿ ದೆಹಲಿಯಿಂದ ನೂತನ ಸಚಿವರ ಪಟ್ಟಿಯನ್ನು ಸಿಎಂಗೆ ರವಾನಿಸಲಿದ್ದಾರೆ.

ಹೈಕಮಾಂಡ್ ಕ್ಯಾಬಿನೆಟ್ ಪ್ಲ್ಯಾನ್
ಒಂದೇ ಹಂತದಲ್ಲಿ ಸಂಪುಟ‌ ರಚನೆ ಮಾಡಲು ಹೈಕಮಾಂಡ್ ಪ್ಲ್ಯಾನ್ ಮಾಡಿದೆ. ಸರ್ಕಾರ ಅವಧಿ ಕೇವಲ ಒಂದೂವರೆ ವರ್ಷ ಮಾತ್ರ ಬಾಕಿ ಉಳಿದಿದ್ದು, ಒಂದೇ ಹಂತದಲ್ಲಿ ಎನೆರ್ಜೆಟಿಕ್ ಟೀಂ ಕಟ್ಟುವ ಪ್ಲ್ಯಾನ್ ಮಾಡಿದೆ. ಅಂದ್ರೆ ಸರ್ಕಾರದ ಬಗ್ಗೆ ಒಳ್ಳೆಯ ಅಭಿಪ್ರಾಯದ ಮೂಡಿಸಲು ಬಿಜೆಪಿ ಹೈಕಮಾಂಡ್ ತಯಾರಿ ನಡೆಸಿದೆ. ಇನ್ನು ವಲಸೆ ಬಂದವರಿಗೆ ಮತ್ತೆ ಸಚಿವ ಸ್ಥಾನ ನೀಡುವುದು ಸೇರಿದಂತೆ ಮೂಲ ಬಿಜೆಪಿ ಸಚಿವಾಕಾಂಕ್ಷಿಗಳ‌ ಬೇಡಿಕೆ ಹೆಚ್ಚಾದ್ರೆ, ಎರಡು ಹಂತದಲ್ಲಿ ರಚನೆ ಮಾಡಲು ಹೈಕಮಾಂಡ್ ಯೋಚಿಸಿದೆ ಎನ್ನಲಾಗಿದೆ. ಇನ್ನು ಸಂಪುಟ ರಚನೆ ಬಗ್ಗೆ ಪ್ರತಿಕ್ರಿಯೆ ನೀಡಿರೋ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, 2-3 ದಿನಗಳಲ್ಲಿ ಸಚಿವ ಸಂಪುಟ ಪಟ್ಟಿ ಫೈನಲ್ ಆಗುತ್ತೆ ಅಂದಿದ್ದಾರೆ.

ಮಂತ್ರಿಗಿರಿಗಾಗಿ ಮುಂದುವರಿದ ಸಚಿವಾಕಾಂಕ್ಷಿಗಳ ಲಾಬಿ
ಇನ್ನು ಸಂಪುಟ ರಚನೆಗೆ ಹೈಕಮಾಂಡ್ ಪ್ಲ್ಯಾನ್ ಮಾಡ್ತಿರುವಾಗ್ಲೇ, ಇತ್ತ ಲಾಬಿಯೂ ಜೋರಾಗಿದೆ. ಬಿಎಸ್‌ವೈ ನಿವಾಸಕ್ಕೆ ಶಾಸಕರಾದ ರಮೇಶ್ ಜಾರಕಿಹೊಳಿ, ರೇಣುಕಾಚಾರ್ಯ, ಶಿವನಗೌಡ ನಾಯಕ್ ಭೇಟಿ ನೀಡಿ ಚರ್ಚೆ ನಡೆಸಿದ್ದಾರೆ. ಬಿಎಸ್‌ವೈ ಮೂಲಕ ಸಂಪುಟ ಸೇರೋಕೆ ಒತ್ತಡ ತಂತ್ರ ಮಾಡ್ತಿದ್ದಾರೆ. ಇತ್ತ ಮುಂಬೈ ಟೀಮ್‌ನಲ್ಲಿ ಸಚಿವ ಸ್ಥಾನ ಸಿಗದೇ ವಂಚಿತರಾಗಿರೋ ಮುನಿರತ್ನ ಕೂಡಾ, ಬಿಎಸ್‌ವೈ ಹಾಗೂ ವಿಜಯೇಂದ್ರ ಮೂಲಕ ಲಾಬಿ ಮಾಡ್ತಿದ್ದಾರೆ. ಸರ್ಕಾರ ರಚನೆಗೆ ಕಾರಣರಾದವರನ್ನು ಕೈಬಿಡುವ ಪ್ರಶ್ನೆ ಇಲ್ಲ ಅಂತಾ ಶಾಸಕ ಮುನಿರತ್ನಗೆ ಮಾಜಿ ಸಿಎಂ ಯಡಿಯೂರಪ್ಪ ಭರವಸೆ ಕೊಟ್ಟಿದ್ದಾರಂತೆ.

ಇದನ್ನೂ ಓದಿ: ರಾತ್ರಿ ಕರ್ಫ್ಯೂ 15 ದಿನ ಮುಂದುವರಿಕೆ; ಚಿತ್ರಮಂದಿರಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಅವಕಾಶ: ಬಸವರಾಜ ಬೊಮ್ಮಾಯಿ