AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC Grace Marks:ವಿದ್ಯಾರ್ಥಿಗಳ ಕೈ ಮೇಲುಗೈಯಾಯ್ತು; ಎಸ್ಎಸ್ಎಲ್​ಸಿ ಮಂಡಳಿ ದಯಪಾಲಿಸಿತು 1 ದಯಾಂಕ

ಈಗ ಒಟ್ಟು 11 ವಿಷಯಗಳ ಪೈಕಿ ಪ್ರಥಮ ಭಾಷೆ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ 19ಕ್ಕೆ 01 ಕೃಪಾಂಕ ನೀಡಬಹುದೆಂದು ಪರಿಶೀಲನಾ ಸಮಿತಿಯವರು ಅಭಿಪ್ರಾಯ ನೀಡಿರುತ್ತಾರೆ. ಆದ್ದರಿಂದ ಸದರಿ ವಿಷಯದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ 01 ಕೃಪಾಂಕ ನೀಡಲಾಗಿದೆ.

SSLC Grace Marks:ವಿದ್ಯಾರ್ಥಿಗಳ ಕೈ ಮೇಲುಗೈಯಾಯ್ತು; ಎಸ್ಎಸ್ಎಲ್​ಸಿ ಮಂಡಳಿ ದಯಪಾಲಿಸಿತು 1 ದಯಾಂಕ
ಸಾಂಕೇತಿಕ ಚಿತ್ರ
TV9 Web
| Updated By: ಆಯೇಷಾ ಬಾನು|

Updated on:Aug 01, 2021 | 12:59 PM

Share

ಬೆಂಗಳೂರು: ಎಸ್ಎಸ್ಎಲ್ಸಿ(SSLC) ಪರೀಕ್ಷೆ ನಡೆದ ಬಳಿಕ ದಾವಣಗೆರೆ ವಿದ್ಯಾರ್ಥಿನಿ ಕನ್ನಡ ಭಾಷೆ (First Language) ಪರೀಕ್ಷೆಯಲ್ಲಿ ಒಂದು ಪ್ರಶ್ನೆ ಗೊಂದಲವನ್ನುಂಟು ಮಾಡಿದ್ದು ಅದಕ್ಕೆ ಗ್ರೇಸ್ ಮಾರ್ಕ್ಸ್ ನಿಡಬೇಕೆಂದು ಒತ್ತಾಯಿಸಿದ್ದರು. ಅದರಂತೆ ವಿದ್ಯಾರ್ಥಿನಿ ಹೋರಾಟಕ್ಕೆ ಒಂದು ಕೃಪಾಂಕ ನೀಡಲು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ.

2021ನೇ ಸಾಲಿನ ಜುಲೈ 19 ಮತ್ತು ಜುಲೈ 22ರಂದು ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಕೀ ಉತ್ತರಗಳನ್ನು ಮಂಡಳಿಯ ವೆಬ್ಸೈಟ್ನಲ್ಲಿ ಅಳವಡಿಸಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಅಕ್ಷೇಪಣೆಗಳಿದ್ದಲ್ಲಿ ಸಲ್ಲಿಸುವಂತೆ ತಿಳಿಸಲಾಗಿತ್ತು.

ಈ ಸಂಬಂಧ ಒಟ್ಟು 11 ವಿಷಯಗಳ ಕೀ ಉತ್ತರಗಳ ಮೇಲೆ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ. ಸದರಿ ಅಕ್ಷೇಪಣೆಗಳನ್ನು ಸಂಬಂಧಿಸಿದ ವಿಷಯ ತಜ್ಞರು ಸಮಿತಿಯವರಿಂದ ಮತ್ತೊಮ್ಮೆ ಪರಿಶೀಲನೆಗೆ ಒಳಪಡಿಸಲಾಗಿತ್ತು. ಸದ್ಯ ಈಗ ಒಟ್ಟು 11 ವಿಷಯಗಳ ಪೈಕಿ ಪ್ರಥಮ ಭಾಷೆ ಕನ್ನಡ ವಿಷಯದ ಪ್ರಶ್ನೆ ಪತ್ರಿಕೆಯ ಪ್ರಶ್ನೆ ಸಂಖ್ಯೆ 19ಕ್ಕೆ 01 ಕೃಪಾಂಕ ನೀಡಬಹುದೆಂದು ಪರಿಶೀಲನಾ ಸಮಿತಿಯವರು ಅಭಿಪ್ರಾಯ ನೀಡಿರುತ್ತಾರೆ. ಆದ್ದರಿಂದ ಸದರಿ ವಿಷಯದಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳಿಗೂ 01 ಕೃಪಾಂಕ ನೀಡಲಾಗಿದೆ. ಎಂದು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಣೆ ಹೊರಡಿಸಿದೆ. SSLC Grace Marks

ಇದನ್ನೂ ಓದಿ: ಗೊಂದಲದ ಪ್ರಶ್ನೋತ್ತರಕ್ಕೆ ಗ್ರೇಸ್ ಅಂಕ ನೀಡಿ, ವಿಡಿಯೋ ಮೂಲಕ ಶಿಕ್ಷಣ ಸಚಿವ ಸುರೇಶ್​ ಕುಮಾರ್​ಗೆ ವಿದ್ಯಾರ್ಥಿನಿ ಒತ್ತಾಯ

Published On - 12:41 pm, Sun, 1 August 21