AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ಕರ್ಫ್ಯೂ 15 ದಿನ ಮುಂದುವರಿಕೆ; ಚಿತ್ರಮಂದಿರಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಅವಕಾಶ: ಬಸವರಾಜ ಬೊಮ್ಮಾಯಿ

Basavaraj Bommai on Coronavirus: ಸಿನಿಮಾ ಥಿಯೇಟರ್ಸ್ ಹಾಗೂ ಪಬ್​ಗಳಿಗೆ ಈಗಿರುವ ನಿಯಮವೇ ಮುಂದಿನ ಆಗಸ್ಟ್ 14 ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ರಾತ್ರಿ ಕರ್ಫ್ಯೂ 15 ದಿನ ಮುಂದುವರಿಕೆ; ಚಿತ್ರಮಂದಿರಗಳಲ್ಲಿ ಶೇಕಡಾ 50 ಜನರಿಗೆ ಮಾತ್ರ ಅವಕಾಶ: ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
TV9 Web
| Edited By: |

Updated on:Jul 31, 2021 | 8:49 PM

Share

ಬೆಂಗಳೂರು: ರಾತ್ರಿ ಕರ್ಫ್ಯೂ ಇನ್ನೂ 15 ದಿವಸ ಮುಂದುವರಿಸುತ್ತೇವೆ. ಚಿತ್ರಮಂದಿರಗಳಲ್ಲೂ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಇನ್ನೂ 15 ದಿವಸ ಶೇಕಡಾ 50 ಜನರಿಗೆ ಮಾತ್ರ ಅವಕಾಶ ಇರಲಿದೆ. ಪಬ್‌ಗಳಿಗೂ ಈಗಿರುವ ನಿಯಮವೇ ಅನ್ವಯವಾಗುತ್ತೆ. ಗಡಿಗಳಲ್ಲಿ ಚೆಕ್‌ಪೋಸ್ಟ್‌ ಸ್ಥಾಪಿಸುವಂತೆ ಸೂಚಿನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸಿನಿಮಾ ಥಿಯೇಟರ್ಸ್ ಹಾಗೂ ಪಬ್​ಗಳಿಗೆ ಈಗಿರುವ ನಿಯಮವೇ ಮುಂದಿನ ಆಗಸ್ಟ್ 14 ರವರೆಗೂ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.

ಕೇರಳದಲ್ಲಿ ಕಳೆದ ವಾರದಿಂದ ಕೊವಿಡ್ ಸ್ಪೋಟವಾಗಿದೆ. ಹೀಗಾಗಿ ಡಿಸಿ ಮತ್ತು ಎಸ್​ಪಿ ವಿಶೇಷ ಜಾಗ್ರತೆವಹಿಸಬೇಕು. ಹೆಲ್ತ್ ಯೂನಿಟ್ಸ್ ಹೆಚ್ಚಿಗೆ ಮಾಡಿಕೊಳ್ಳಬೇಕು. ಆರೋಗ್ಯ ಮೂಲಸೌಕರ್ಯ ಹೆಚ್ಚಾಗಬೇಕು. ಕೇಂದ್ರದ ಆರೋಗ್ಯ ಸಚಿವರನ್ನು ಲಸಿಕೆ ಹೆಚ್ಚಿಸುವಂತೆ ಕೇಳಿದ್ದೇನೆ. 60 ಲಕ್ಷ ಡೋಸ್ ಲಸಿಕೆ ಕೊಡ್ತಿದ್ರು. ಅದನ್ನು ಒಂದೂವರೆ ಕೋಟಿಗೆ ಹೆಚ್ಚಿಸುವಂತೆ ಕೇಳಿದ್ದೇನೆ. ಈ ತಿಂಗಳು ಒಂದು ಕೋಟಿ ಮುಂದಿನ ತಿಂಗಳಿನಿಂದ ಒಂದೂವರೆ ಕೋಟಿ ಲಸಿಕೆ ಕೊಡ್ತೀವಿ ಎಂದು ಹೇಳಿದ್ದಾರೆ. ಗಡಿ ಭಾಗದಲ್ಲಿ ಒಂದು ಡೋಸ್ ಕೊವಿಡ್ ಲಸಿಕೆ ಆಗಿದ್ದರೂ ಬಿಡುತ್ತಿದ್ದೆವು. ಇನ್ನುಮುಂದೆ ಎರಡೂ ಡೋಸ್ ಲಸಿಕೆ ಆದರೆ ಮಾತ್ರ ಬಿಡಲಾಗುತ್ತದೆ ಎಂದು ಹೇಳಿದ್ದಾರೆ.

ಕೊರೊನಾ 3ನೇ ಅಲೆ ಆತಂಕ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಹೈ ಅಲರ್ಟ್ ಸೂಚನೆ ನೀಡಿದೆ. ಕೇರಳ ಸೇರಿದಂತೆ ಮಹಾರಾಷ್ಟ್ರದಲ್ಲೂ ಕೊವಿಡ್19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೂಡ ಕೊರೊನಾ ಕೇಸ್​ಗಳು ಮೂರಂಕಿಗೆ ಕಡಿಮೆ ಇಳಿಕೆಯಾಗಿಲ್ಲ. ಇನ್ನೂ ನೂರಕ್ಕಿಂತ ಅಧಿಕ ಕೇಸ್​ಗಳು ದಿನನಿತ್ಯ ದಾಖಲಾಗುತ್ತಿದೆ. ಈ ಸಂಬಂಧ ರಾಜ್ಯದ 8 ಜಿಲ್ಲಾಡಳಿತಗಳ ಜತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಇಂದು ಸಭೆ ನಡೆಸಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಎಸ್​ಪಿ, ಜಿಲ್ಲಾ ಪಂಚಾಯತ್ ಸಿಇಒಗಳು ಹಾಜರಾಗಿದ್ದಾರೆ. ಬಿಬಿಎಂಪಿ ಸೇರಿ ಬೆಂಗಳೂರು ನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಉಡುಪಿ ಸೇರಿ 8 ಜಿಲ್ಲಾಡಳಿತಗಳ ಜತೆ ಸಭೆ ನಡೆಸಲಾಗಿದೆ.

ಇದನ್ನೂ ಓದಿ: ಕೊರೊನಾ 3ನೇ ಅಲೆ ಆತಂಕ: ಕೊವಿಡ್ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ವೈದ್ಯಕೀಯ ಸೌಲಭ್ಯ ಹೆಚ್ಚಳಕ್ಕೆ ಬಸವರಾಜ ಬೊಮ್ಮಾಯಿ ಸೂಚನೆ

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 1,987 ಕೊರೊನಾ ಕೇಸ್ ಪತ್ತೆ; 37 ಮಂದಿ ಸಾವು

(CM Basavaraj Bommai on Coronavirus Covid19 Third Wave Cinema Theatres Pub Night Curfew in Karnataka)

Published On - 8:30 pm, Sat, 31 July 21

Follow Us
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ಡಿಕೆಶಿ ದಿಟ್ಟ ಹೆಜ್ಜೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಸರ್ಕಾರಿ ಬಸ್ ಮಾಜಿ ಚಾಲಕನ ಮನೆಯಲ್ಲಿ 28 ಕೋಟಿ ನಗದು, 15 ಕೆಜಿ ಚಿನ್ನ ಪತ್ತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಪ್ರಧಾನಿ ಮೋದಿ ಸ್ವಾಗತಕ್ಕೆ ಮೈಸೂರಿನಲ್ಲಿ ಭರದ ಸಿದ್ಧತೆ, ಬಿಗಿ ಭದ್ರತೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಮಗಳ ಕೊನೆಯ ಕ್ಷಣ ನೆನೆದು ಕಣ್ಣೀರಿಟ್ಟ ತಂದೆ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಕಾವೇರಿ ವಿವಾದ: ಮಂಡ್ಯದಲ್ಲಿ ವಿಜಯ್ ‘ಜನನಾಯಗನ್’ ಪ್ರದರ್ಶನ ತಡೆಗೆ ಯತ್ನ
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಪತ್ನಿ ಸಮಾಧಿಗೆ ಪೂಜೆ ಸಲ್ಲಿಸಿ ಮೌನಕ್ಕೆ ಜಾರಿದ ದೇವೇಗೌಡರು
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬ್ಯಾಡರಹಳ್ಳಿಯಲ್ಲಿ ಬೆಳಗಿನ ಜಾವ 3 ಗಂಟೆಗೆ ಮತ್ತೆ ಪ್ರತ್ಯಕ್ಷವಾದ ಚಿರತೆ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಬೋವಿ ಸಮುದಾಯದ ಸ್ವಾಮೀಜಿ ಮೇಲೆ ಮುಖಂಡರಿಂದಲೇ ಹಲ್ಲೆ ಯತ್ನ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಪ್ರಧಾನಿ ಮೋದಿಗೆ ಮೈಸೂರಿನಲ್ಲಿ ವಿಶೇಷ ಉಡುಗೊರೆ ಸಿದ್ಧ
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್
ಹರ್ಷಿಕಾಗೆ ಥ್ಯಾಂಕ್ಸ್​ ಹೇಳಲು ಹೋದ ಭುವನ್​​ ಕಾಲೆಳೆದ ಓಂ ಪ್ರಕಾಶ್ ರಾವ್