Bengaluru: ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಮಾಡಿ ಹಣ ಬಿಡುಗಡೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ

| Updated By: ganapathi bhat

Updated on: Dec 27, 2021 | 2:50 PM

ಕೊವಿಡ್‌ಗೆ ಬಲಿಯಾದ ಎಪಿಎಲ್ ಕಾರ್ಡ್‌ದಾರ ಕುಟುಂಬಸ್ಥರಿಗೆ ಪರಿಹಾರ ನೀಡುವ ವಿಚಾರವಾಗಿ ಜಮೀರ್ ಮನವಿ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಣಕಾಸು ಇಲಾಖೆ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

Bengaluru: ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಮಾಡಿ ಹಣ ಬಿಡುಗಡೆ ಮಾಡಲಾಗುವುದು: ಬಸವರಾಜ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ನಗರದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು. ಪ್ರತಿ ವಾರ್ಡ್ ಅಭಿವೃದ್ಧಿಗೆ ಯೋಜನೆ ಮಾಡಲಾಗುವುದು. ಸಮಗ್ರ ಅಭಿವೃದ್ಧಿಗೆ ರೋಡ್ ಮ್ಯಾಪ್ ಮಾಡಿ, ಹಣ ಬಿಡುಗಡೆ ಮಾಡಿ ಅಭಿವೃದ್ಧಿ ಮಾಡಲಾಗುವುದು. ರಾಜಕಾಲುವೆ ಮೇಲೆ ಮನೆ ನಿರ್ಮಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಕೊವಿಡ್‌ಗೆ ಬಲಿಯಾದ ಎಪಿಎಲ್ ಕಾರ್ಡ್‌ದಾರ ಕುಟುಂಬಸ್ಥರಿಗೆ ಪರಿಹಾರ ನೀಡುವ ವಿಚಾರವಾಗಿ ಜಮೀರ್ ಮನವಿ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಹಣಕಾಸು ಇಲಾಖೆ ಜತೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಕೊರೊನಾ ತಡೆಗೆ ಎಲ್ಲಾ ಕ್ರಮ ನಾವು ಮಾಡಿಕೊಂಡಿದ್ದೇವೆ: ಸಿಎಂ ಬೊಮ್ಮಾಯಿ
ಇದೊಂದು ಹೃದಯಸ್ಪರ್ಶಿ ಕಾರ್ಯಕ್ರಮ. ಒಂದು ಮನೆಯಲ್ಲಿ ಕುಟುಂಬ ಸದಸ್ಯರು ಅಗಲಿದಾಗ ಆ ನೋವು ಬಹಳ ವರ್ಷಗಳವರೆಗೂ ಕಾಡುತ್ತಿರುತ್ತದೆ. ಈ ರೀತಿ ಮಹಾಮಾರಿಯಿಂದ ಆರೋಗ್ಯವಾಗಿದ್ದವರು ಕೆಲವೇ ದಿನಗಳಲ್ಲಿ‌ ನಿಧನರಾದಗ ನೋವು ಭರಿಸಲು ಆಗುವುದಿಲ್ಲ. ಕೊವಿಡ್ ಸಾಕಷ್ಟು ಕುಟುಂಬವನ್ನು ಅನಾಥ, ತಬ್ಬಲಿಯನ್ನಾಗಿ ಮಾಡಿದೆ. ಹಿಂದೆ ಪ್ಲೇಗ್, ಕಾಲರಾ ಬಗ್ಗೆ ಕೇಳಿದ್ವಿ ಆದರೆ ನಮ್ಮ ಕಾಲದಲ್ಲಿ ಬರುತ್ತೆ ಅಂತ ಊಹಿಸಿರಲಿಲ್ಲ. ಬೇರೆ ರಾಜ್ಯ, ದೇಶ ಹೋಲಿಸಿದರೆ ಅತಿ ಹೆಚ್ಚು ಜನಸಂಖ್ಯೆ ಇರುವ ಭಾರತದಲ್ಲಿ ಕೊರೋನಾ ನಿರ್ವಹಿಸಿರುವುದು ವಿಶ್ವದಾಖಲೆ ಆಗಿದೆ ಎಂದು ಕೊರೊನಾದಿಂದ ಮೃತಪಟ್ಟವರಿಗರ ಪರಿಹಾರ ವಿತರಣೆಯ ಕಾರ್ಯಕ್ರಮದಲ್ಲಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅಧಿಕಾರಿಗಳು, ಸಂಘಟನೆ, ಸಮಾಜ, ಪ್ರಧಾನಿ ಮೋದಿಯವರ ಸಹಕಾರದಿಂದ ಯಶಸ್ವಿಯಾಗಿ ಕೊರೊನಾ ಎದುರಿಸಿದ್ದೇವೆ. ಇಷ್ಟು ದೊಡ್ಡ ಜನಸಂಖ್ಯೆಗೆ ಪ್ರಚಾರ ಅಪಪ್ರಚಾರದ ನಡುವೆ ವ್ಯಾಕ್ಸಿನ್ ಕೊಡಬೇಕಾ ಬೇಡವಾ ಎಂಬ ಚರ್ಚೆ ಇತ್ತು. ಇಂದು ರಾಜ್ಯದಲ್ಲಿ 4 ಕೋಟಿಗಿಂತ ಹೆಚ್ಚು ಮೊದಲ ಡೋಸ್ ಕೊಟ್ಟಿದ್ದೇವೆ. ರಾಜ್ಯದಲ್ಲಿ ಶೇ.97 ರಷ್ಟು ಮೊದಲ ಡೋಸ್ ವ್ಯಾಕ್ಸಿನೇಷನ್ ಆಗಿದೆ. ಶೇ.76 ರಷ್ಟು ಎರಡನೇ ಡೋಸ್ ಆಗಿದೆ. ಹಳ್ಳಿಯಲ್ಲಿ ಜನರಿಗೆ ಹಿಂಜರಿತವಿದೆ ಅವರಿಗೂ ಮನೆಮನೆಗೆ ಹೋಗಿ ಲಸಿಕೆ ಕೊಡುವ ಕೆಲಸವಾಗುತ್ತಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

ಜನಪ್ರತಿನಿಧಿಗಳು ಕೂಡ ಮನೆಮನೆಗೆ ಹೋಗಿ ಉಳಿದ ಶೇ. 10 ಲಸಿಕೆ ಪೂರೈಸುವಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡ್ತೀನಿ. ಕೊವಿಡ್‌ನ‌ ಸಮಯದಲ್ಲಿ ನಿಯಮ ಹೇಗೆ ಪಾಲಿಸಬೇಕು ಎಂದು ಹಳ್ಳಿಹಳ್ಳಿಯಲ್ಲಿ ತಿಳಿಸುವ ಕೆಲಸ ಮಾಡುತ್ತಿದ್ದೇವೆ. 25 ಸಾವಿರ ಬೆಡ್‌, 7 ಸಾವಿರ ಐಸಿಯು ಬೆಡ್, 8 ರಿಂದ 9 ಸಾವಿರ ಆಕ್ಸಿಜನ್ ಬೆಡ್ ಇದೆ. ಮೊದಲು‌ ಒಂದು ಆರ್‌ಟಿ‌ಪಿ‌ಸಿ‌ಆರ್ ಟೆಸ್ಟ್ ಲ್ಯಾಬ್ ಇತ್ತು ಆದರೆ ಈಗ ಪ್ರತಿ ಜಿಲ್ಲೆಯಲ್ಲಿ ನೂರಾರು ಸರ್ಕಾರಿ, ಖಾಸಗಿ ಲ್ಯಾಬ್ ಇದೆ. 4 ಸಾವಿರ ವೈದ್ಯರ ನೇಮಕ‌ ಮಾಡಲಾಗಿದೆ. ಕೊರೊನಾ ತಡೆಗೆ ಎಲ್ಲಾ ಕ್ರಮ ನಾವು ಮಾಡಿಕೊಂಡಿದ್ದೇವೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ: CM Basavaraj Bommai: ಮಂಡಿ ನೋವಿಗೆ ನಾಟಿ ಚಿಕಿತ್ಸೆ ಪಡೆದ ಸಿಎಂ ಬಸವರಾಜ ಬೊಮ್ಮಾಯಿ

ಇದನ್ನೂ ಓದಿ: ಕಟೀಲ್​ರನ್ನು ಭಯೋತ್ಪಾದಕ ಎನ್ನುವ ಮೋಸಗಾರ ಸಿದ್ದರಾಮಯ್ಯ ಜಮೀರ್ ಅಹ್ಮದ್​​ನಂಥವರನ್ನು ಬೆಳೆಸುತ್ತಾರೆ: ಕೆ ಎಸ್ ಈಶ್ವರಪ್ಪ