ಮುಂದಿನ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿಗಳು ಆರಂಭ; ಸಿಎಂ ಬೊಮ್ಮಾಯಿ

ಒತ್ತಡ ರಹಿತ ವಿದ್ಯಾಭ್ಯಾಸ ಮಾಡುವ ವಾತಾವರಣವಿರಬೇಕು. ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಪರಿಚಯ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಮುಂದಿನ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿಗಳು ಆರಂಭ; ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
Follow us
TV9 Web
| Updated By: sandhya thejappa

Updated on:May 29, 2022 | 4:16 PM

ಬೆಂಗಳೂರು: ಕೊವಿಡ್​ನಿಂದ (Covid 19) ಶಾಲಾ-ಕಾಲೇಜು ಮಕ್ಕಳು ಒತ್ತಡದಲ್ಲಿದ್ದಾರೆ. ಒತ್ತಡ ರಹಿತ ವಿದ್ಯಾಭ್ಯಾಸ ಮಾಡುವ ವಾತಾವರಣವಿರಬೇಕು. ಈ ಹಿನ್ನೆಲೆಯಲ್ಲಿ ಯೋಗಾಭ್ಯಾಸ ಪರಿಚಯ ಮಾಡಲಾಗುತ್ತಿದೆ ಎಂದು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮುಂದಿನ ವರ್ಷದಿಂದ ಹೈಸ್ಕೂಲು, ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿ (Yoga Class) ಬರಲಿವೆ ಎಂದು ಮಾಹಿತಿ ನೀಡಿದ ಬೊಮ್ಮಾಯಿ, ಈ ಸಂಬಂಧ ಪರಿಣಿತರ ಜತೆ ಚರ್ಚೆ ಮಾಡುತ್ತೇವೆ. ಪರಿಣಿತರ ಜತೆ ಚರ್ಚೆ ಬಳಿಕ ಯೋಗ ಪಠ್ಯ ಸಿದ್ಧಪಡಿಸುತ್ತೇವೆ ಎಂದು ಹೇಳಿದರು.

ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ: ಜೂನ್​ 21ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಮೈಸೂರಿನಲ್ಲಿ ಯೋಗಾ ದಿನಾಚರಣೆಯಲ್ಲಿ ಮೋದಿ ಭಾಗಿಯಾಗುತ್ತಾರೆ. ರಾಜ್ಯಕ್ಕೆ ಮೋದಿಯವರು ಬರೋದೇ ಒಂದು ವಿಶೇಷ. ಮೋದಿಯವರು ಪಾಲ್ಗೊಳ್ಳುವುದರಿಂದ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಂತಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಇದನ್ನೂ ಓದಿ: Happy Hormones: ಹ್ಯಾಪಿ ಹಾರ್ಮೋನ್​ಗಳು ಎಂದರೇನು? ಹೆಚ್ಚಿಸಿಕೊಳ್ಳುವುದು ಹೇಗೆ?

ಇದನ್ನೂ ಓದಿ
Image
ಕೇರಳದ ತ್ರಿಶೂರ್‌ನಲ್ಲಿ ವೆಸ್ಟ್ ನೈಲ್ ಜ್ವರದಿಂದ ವ್ಯಕ್ತಿ ಸಾವು, ಜಾಗ್ರತೆ ವಹಿಸಿ ಎಂದ ರಾಜ್ಯ ಆರೋಗ್ಯ ಇಲಾಖೆ
Image
ಮುಂದಿನ ವರ್ಷದಿಂದ ಶಾಲಾ- ಕಾಲೇಜುಗಳಲ್ಲಿ ಯೋಗಾಭ್ಯಾಸ ತರಗತಿಗಳು ಆರಂಭ; ಸಿಎಂ ಬೊಮ್ಮಾಯಿ
Image
Happy Hormones: ಹ್ಯಾಪಿ ಹಾರ್ಮೋನ್​ಗಳು ಎಂದರೇನು? ಹೆಚ್ಚಿಸಿಕೊಳ್ಳುವುದು ಹೇಗೆ?
Image
‘ಎಲ್ಲರನ್ನೂ ಒಗ್ಗೂಡಿಸುವುದು ಮೊದಲ ಚಾಲೆಂಜ್​’: ಫಿಲ್ಮ್​ ಚೇಂಬರ್​ ಹೊಸ ಅಧ್ಯಕ್ಷ ಭಾ.ಮ. ಹರೀಶ್​ ಪ್ರತಿಕ್ರಿಯೆ

ಆ್ಯಪ್ ಬಿಡುಗಡೆ ಮಾಡಿದ ಬೊಮ್ಮಾಯಿ: ಬೆಂಗಳೂರು ಹೊರವಲಯದ ಜಿಗಣಿಯಲ್ಲಿರುವ ಎಸ್.ವ್ಯಾಸ ವಿವಿಯ 24ನೇ ಇನ್ಕೋಫೈರಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇಂದು ಸಿಎಂ ಬೊಮ್ಮಾಯಿ ವಿಶ್ವವಿದ್ಯಾಲಯದ ನೂತನ ಆಯು ಆ್ಯಪ್ ಬಿಡುಗಡೆ ಮಾಡಿದ್ದಾರೆ. ಆ್ಯಪ್​ನ ರೋಗ ಮುಕ್ತ ಭಾರತ ಪರಿಕಲ್ಪನೆ ಅಂಗವಾಗಿ ಸಿದ್ಧಪಡಿಸಲಾಗಿದೆ. ಇನ್ಕೋಫೈರಾ ಸಂಸ್ಥೆ ವಿವಿಯ ಆಯು ಆ್ಯಪ್ ಸಿದ್ಧಪಡಿಸಿದೆ. ಈ ವೇಳೆ ಎಸ್.ವ್ಯಾಸ ಯೋಗ ವಿವಿಯ ಕುಲಪತಿ ನಾಗೇಂದ್ರ ಗುರೂಜಿ ಭಾಗಿಯಾಗಿದ್ದರು.

ಬೊಮ್ಮಾಯಿ ಭೇಟಿಯಾದ ಜಿಟಿ ದೇವೇಗೌಡ: ಜೆಡಿಎಸ್​ ಶಾಸಕ ಜಿಟಿ ದೇವೇಗೌಡ ಸಿಎಂ ಬೊಮ್ಮಾಯಿ ಅವರನ್ನು ಭೇಟಿಯಾದರು. ಬೇಟಿ ಬಳಿಕ ಮಾತನಾಡಿದ ಜಿಟಿ ದೇವೇಗೌಡ, 2021ರಲ್ಲಿ ಮೈಸೂರಿನಲ್ಲಿ ಭಾರಿ ಮಳೆಯಿಂದ ಅವಾಂತರಗಳಾಗಿದ್ದವು. ಕೆರೆಗಳು ಒಡೆದು ವಸತಿ ಪ್ರದೇಶಗಳಿಗೆ ನೀರು ನುಗ್ಗಿ ಹಾನಿಯಾಗಿತ್ತು. ಹೀಗಾಗಿ 138 ಕೋಟಿ ರೂ.ಪರಿಹಾರಕ್ಕಾಗಿ ಪ್ರಸ್ತಾವನೆ ಕಳಿಸಲಾಗಿತ್ತು. ಆದರೆ ಇದುವರೆಗೂ ಆ ಪರಿಹಾರದ ಹಣ ಬಿಡುಗಡೆಯಾಗಿರಲಿಲ್ಲ. ರಾಮದಾಸ್ ಕ್ಷೇತ್ರಕ್ಕೆ 40 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಆದರೆ ನಾನು 2 ಬಾರಿ ಪ್ರಸ್ತಾವನೆ ಕೊಟ್ಟಿದ್ದೆ, ಆದರೂ ಆಗಿರಲಿಲ್ಲ. ದಯವಿಟ್ಟು ಪರಿಹಾರ ಬಿಡುಗಡೆ ಮಾಡಿ ಅಂತಾ ಸಿಎಂಗೆ ಹೇಳಿದ್ದೆ. ದಾವೋಸ್​ಗೆ ಹೋಗಿ ಬಂದಮೇಲೆ ಮಾಡ್ತೀನಿ ಅಂತಾ ಹೇಳಿದ್ದರು. ಇಂದು ಖುದ್ದಾಗಿ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ್ದೇನೆ. ತುರ್ತಾಗಿ 27 ಕೋಟಿ ಬಿಡುಗಡೆ ಮಾಡಲು ಸಿಎಂ ಸೂಚಿಸಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:05 pm, Sun, 29 May 22

ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
‘ಈಗಿನ್ನೂ ಆಡೋಕೆ ಬರುತ್ತಿದೆ, ಅಡ್ಡಗಾಲು ಹಾಕಿದ್ರು’: ಚೈತ್ರಾ ಹಳೇ ರಾಗ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ನಮ್ಮ ಸಭೆ ರದ್ದಾಗಿಲ್ಲ ಮುಂದೂಡಲ್ಪಟ್ಟಿದೆ ಅಷ್ಟೇ: ಪರಮೇಶ್ವರ್, ಗೃಹ ಸಚಿವ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
ಜೆಈ ರವೀಂದ್ರ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಅರೋಪ ಹಿನ್ನೆಲೆ ದಾಳಿ
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
Video: ಮಂಜಿನ ಹೊದಿಕೆ ಹೊದ್ದು ಮಲಗಿದ ತಾಜ್​ಮಹಲ್
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ
156 ದಿನ ಗರಿಷ್ಠ ಮಟ್ಟ ಕಾಯ್ದುಕೊಂಡ ಕೆಆರ್​​ಎಸ್, ಮೊದಲ ಬಾರಿಗೆ ದಾಖಲೆ