ನನ್ನ ವಿರೋಧಿಗಳಿಂದ ಇಡಿ ದಾಳಿ ನಡೆದಿದೆ, ಜಮೀರ್ ಅಹ್ಮದ್​ಗೆ ಸಾಲ ನೀಡಿದ್ದೆ; ಕೆಜಿಎಫ್ ಬಾಬು ಸುದ್ದಿಗೋಷ್ಟಿ

ನನ್ನ ವಿರೋಧಿಗಳಿಂದ ಇಡಿ ದಾಳಿ ನಡೆದಿದೆ, ಜಮೀರ್ ಅಹ್ಮದ್​ಗೆ ಸಾಲ ನೀಡಿದ್ದೆ; ಕೆಜಿಎಫ್ ಬಾಬು ಸುದ್ದಿಗೋಷ್ಟಿ
ಕೆಜಿಎಫ್ ಬಾಬು

ಶಾಸಕ ಜಮೀರ್ ಅಹ್ಮದ್ ಅವರಿಗೆ 3 ಕೋಟಿ ರೂ. ಸಾಲ ನೀಡಿದ್ದೆ. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ನನ್ನ ಇಡಿ ವಿಚಾರಣೆಗೆ ಕರೆದಾಗ ಸಾಲದ ಬಗ್ಗೆ ಹೇಳಿದ್ದೆ

TV9kannada Web Team

| Edited By: sandhya thejappa

May 29, 2022 | 11:41 AM

ಬೆಂಗಳೂರು: ಇಡಿ ಅಧಿಕಾರಿಗಳು (ED Officials) ದಾಳಿ ಮುಕ್ತಾಯವಾದ ಬಳಿಕ ಉದ್ಯಮಿ ಕೆಜಿಎಫ್ ಬಾಬು (KGF Babu) ಸುದ್ದಿಗೋಷ್ಟಿ ನಡೆಸಿದ್ದಾರೆ. ನನ್ನ ವಿರೋಧಿಗಳು ಇಡಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಡಿ ಅಧಿಕಾರಿಗಳು ಸರ್ಚಿಂಗ್ ವಾರಂಟ್ ಸಮೇತ ಬಂದಿದ್ದರು. ನನ್ನ ಅಕೌಂಟ್ಸ್ ಎಲ್ಲಾ ಕ್ಲಿಯರ್ ಇದೆ. ಇಡಿ ಅಧಿಕಾರಿಗಳಿಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದೇನೆ. ಮನೆಯಲ್ಲಿ 8 ಲಕ್ಷ 60 ಸಾವಿರ ರೂಪಾಯಿ ಹಣ ಇತ್ತು. 1 ಕೋಟಿ 70 ಲಕ್ಷ ರೂ.ಮೌಲ್ಯದ ಚಿನ್ನ ಜಪ್ತಿ ಮಾಡಿದ್ದಾರೆ. ದಾಖಲೆ ಸಮೇತ ದೆಹಲಿಗೆ ಬರುವಂತೆ ಇಡಿಯವರು ಹೇಳಿದ್ದಾರೆ ಎಂದು ತಿಳಿಸಿದರು.

ಮುಂದುವರಿದು ಮಾತನಾಡಿದ ಕೆಜಿಎಫ್ ಬಾಬು, ಶಾಸಕ ಜಮೀರ್ ಅಹ್ಮದ್ ಅವರಿಗೆ 3 ಕೋಟಿ ರೂ. ಸಾಲ ನೀಡಿದ್ದೆ. ಶಾಸಕ ಜಮೀರ್ ಅಹ್ಮದ್ ಮನೆ ಮೇಲೆ ಇಡಿ ದಾಳಿ ನಡೆದಿತ್ತು. ಈ ವೇಳೆ ನನ್ನ ಇಡಿ ವಿಚಾರಣೆಗೆ ಕರೆದಾಗ ಸಾಲದ ಬಗ್ಗೆ ಹೇಳಿದ್ದೆ. 2013ರಲ್ಲಿ ಜಮೀರ್​ಗೆ ಸಾಲ ನೀಡಿದ ಬಗ್ಗೆ ಮಾಹಿತಿ ನೀಡಿದ್ದೆ. ಹಣ ವಾಪಸ್ ನೀಡಲು ಸಮಯ ಕೇಳಿದ್ದಾರೆ ಎಂದು ಹೇಳಿದ್ದೆ. ಈ ಬಗ್ಗೆ ನನಗೆ ಆಗ ಇಡಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಎಂಎಲ್​ಸಿ ಚುನಾವಣೆ ಸ್ಪರ್ಧೆಗೂ ಮುನ್ನ ನೋಟಿಸ್ ನೀಡಿದ್ರು. ಈಗ ಇಡಿ ಅಧಿಕಾರಿಗಳು ನನ್ನ ಮನೆ ಮೇಲೆ ರೇಡ್ ಮಾಡಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: Indian Navy: ನಿವೃತ್ತಿ ಹೊಂದಿದ ಐಎನ್‌ಎಸ್ ಗೋಮತಿ; ಭಾರತೀಯ ನೌಕೆಯಲ್ಲಿ 34 ವರ್ಷಗಳ ಕಾಲ ಸೇವೆ ಸಲ್ಲಿಸಿದ ಗೋಮತಿ

40 ರಿಂದ 50 ಪ್ರಾಪರ್ಟಿಗಳು ಇವೆ- ಕೆಜಿಎಫ್ ಬಾಬು: ನಾನು ಕಾನೂನು ಬದ್ಧವಾಗಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ಮಾತನಾಡಿದ ಕೆಜಿಎಫ್ ಬಾಬು, ಕಾನೂನು ಬದ್ಧವಾಗಿಯೇ ಜಮೀನು ಖರೀದಿಸಿದ್ದೇನೆ. ಜಮೀನುಗಳ ಕುರಿತ ದಾಖಲಾತಿಗಳನ್ನು ಇಡಿ ಅವರಿಗೆ ನೀಡಿದ್ದೇನೆ. ತನ್ನ ಪ್ರಾಪರ್ಟಿಗೆ ಸಂಬಂಧಿಸಿದ ಎಲ್ಲಾ ತೆರಿಗೆ ಪಾವತಿಸಿದ್ದೇನೆ. ಇಡಿ ಅಧಿಕಾರಿಗಳ ಮನೆಯ ಎಲ್ಲಾ ಕಡೆ ಶೋಧ ನಡೆಸಿದ್ದಾರೆ. ಮನೆಯಲ್ಲಿ ಪತ್ತೆಯಾದ ನಗದು ಹಣ ವಾಪಸ್ ನೀಡಿದ್ದಾರೆ. ಮನೆಯಲ್ಲಿ ಪತ್ತೆಯಾದ ಚಿನ್ನಕ್ಕೆ ದಾಖಲೆ ನೀಡಲು ಹೇಳಿದ್ದಾರೆ. ನನ್ನ ಬಳಿ 40 ರಿಂದ 50 ಪ್ರಾಪರ್ಟಿಗಳು ಇವೆ. ಕಾನೂನುಬದ್ಧವಾಗಿಯೇ ಎಲ್ಲವನ್ನೂ ಖರೀದಿ ಮಾಡಿದ್ದೇನೆ ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Related Stories

Most Read Stories

Click on your DTH Provider to Add TV9 Kannada