ಕರ್ನಾಟಕ ವಿವಿ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ನೇಮಕಾತಿ ರದ್ದು ಆದೇಶಕ್ಕೆ ‘ಸುಪ್ರೀಂ’ ಮಧ್ಯಂತರ ತಡೆ
ಕರ್ನಾಟಕ ವಿಶ್ವವಿದ್ಯಾಲಯ ಸಹಾಯಕ ಪ್ರಾಧ್ಯಾಪಕಿ ನೇಮಕಾತಿ ವಿವಾದ ವಿಚಾರ ಸಂಬಂಧ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ನೇಮಕಾತಿ ರದ್ಧತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ.
ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯ (Karnataka University) ಸಹಾಯಕ ಪ್ರಾಧ್ಯಾಪಕಿ (Assistant professor) ನೇಮಕಾತಿ ವಿವಾದ (Controversy) ವಿಚಾರ ಸಂಬಂಧ ಇಂಗ್ಲೀಷ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಶ್ರೀದೇವಿ ನೇಮಕಾತಿ (Recruitment) ರದ್ಧತಿ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ನೇಮಕಾತಿ ರದ್ದುಗೊಳಿಸಿದ ಹೈಕೋರ್ಟ್ ಆದೇಶ ಪ್ರಶ್ನಿಸಿ ಶ್ರೀದೇವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ (Supreme Court) ಮಧ್ಯಂತರ ತಡೆ ಆದೇಶ ನೀಡಿದೆ.
ಪಿಎಚ್‌ಡಿಯಲ್ಲಿ ಕೋರ್ಸ್ ವರ್ಕ್ ಮಾಡಿಲ್ಲದ ಕಾರಣ ನೇಮಕಾತಿ ಪ್ರಶ್ನಿಸಿ ಮಂಜುನಾಥ್ ಅವರು ಧಾರವಾಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ನೇಮಕಾತಿಯನ್ನು ಏಪ್ರಿಲ್ 11ರಂದು ರದ್ದುಗೊಳಿಸಿ ಆದೇಶಿಸಿತ್ತು. ಹೈಕೋರ್ಟ್ ಆದೇಶದ ಅನ್ವಯ ಕರ್ನಾಟಕ ವಿಶ್ವವಿದ್ಯಾಲಯ ಶ್ರಿದೇವಿ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿತ್ತು. ಇದನ್ನು ಪ್ರಶ್ನಿಸಿ ಶ್ರೀದೇವಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಶ್ರೀದೇವಿ ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡು ನೇಮಕಾತಿ ರದ್ಧತಿ ಆದೇಶಕ್ಕೆ ಮಧ್ಯಂತರ ತಡೆ ನೀಡಿ ಆದೇಶ ಹೊರಡಿಸಿತು.
ಇದನ್ನೂ ಓದಿ: ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ಪ್ರಕರಣ; ಸಿಸಿಬಿಗೆ ಮಹತ್ವದ ಸುಳಿವು ಲಭ್ಯ
ಕೆಲ ವರ್ಷಗಳಿಂದ ನಡೆಯುತ್ತಿರುವ ಅಕ್ರಮಗಳಿಂದಲೇ ಕರ್ನಾಟಕ ವಿವಿ ಕುಖ್ಯಾತಿ ಗಳಿಸುತ್ತಿದೆ. ಅದರಲ್ಲೂ ನಾಲ್ಕೈದು ವರ್ಷಗಳ ಹಿಂದೆ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮಗಳು ಹೊರ ಬಂದಿತ್ತು. ತಮಗೆ ನೇಮಕಾತಿಯಲ್ಲಿ ಅನ್ಯಾಯವಾಗಿದೆ ಎಂದು ಹಲವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ವಿಚಾರಣೆ ಮುಗಿಸಿರುವ ಹೈಕೋರ್ಟ್ ಇಬ್ಬರು ಸಹಾಯಕ ಪ್ರಾಧ್ಯಾಪಕರ ನೇಮಕ ನಿಯಮ ಬಾಹಿರ ಎಂದು ತೀರ್ಪು ನೀಡಿದೆ.
ಇದೇ ರೀತಿ ಡೆವಿಡ್ ಪ್ರಾಣಿ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಕೂಡ ನಿಯಮ ಬಾಹಿರ ಅಂತಾನೂ ಆಕಾಂಕ್ಷಿಯೊಬ್ಬರು ಹೈಕೋರ್ಟ್ ಮೊರೆ ಹೋಗಿದ್ದರು. ಅವರ ನೇಮಕಾತಿಯೂ ಕೂಡ ನಿಯಮ ಬಾಹಿರ ಎಂದು ನೇಮಕಾತಿಯನ್ನು ಅನೂರ್ಜಿತಗೊಳಿಸಿತ್ತು. ಈ ಎಲ್ಲ ನೇಮಕಾತಿಗಳು ಪ್ರೊ. ಎಚ್.ಬಿ.ವಾಲೀಕಾರ್ ಅವರು ಕುಲಪತಿಗಳಾಗಿದ್ದಾಗ ನಡೆದಿದ್ದವು. ಆಗ ಒಟ್ಟು 35ಕ್ಕೂ ಹೆಚ್ಚು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮಾಡಿಕೊಳ್ಳಲಾಗಿತ್ತು. ಈ ವೇಳೆ ವಾಲೀಕಾರ್ ಪಕ್ಷಪಾತ ಮಾಡಿರುವ ಆರೋಪವೂ ಕೇಳಿ ಬಂದಿತ್ತು.
ಇದನ್ನೂ ಓದಿ: ಪಿಎಸ್ಐ ಹುದ್ದೆಗಳ ನೇಮಕಾತಿ ಅಕ್ರಮದ ವಿರುದ್ಧ ಹೋರಾಟ ಮಾಡಿದ್ದ ಅಭ್ಯರ್ಥಿಗೆ ಬೆದರಿಕೆ; ದೂರು ದಾಖಲು
ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:58 am, Sun, 29 May 22